ಮಾಸಾಂತ್ಯಕ್ಕೆ ಕ್ಯಾನ್ಸರ್ ಆಸ್ಪತ್ರೆ ಸಮರ್ಪಣೆ
Team Udayavani, Feb 13, 2017, 2:59 PM IST
ಕಲಬುರಗಿ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತವಾಗಿ ಮೇಲ್ದರ್ಜೆಗೇರಿಸಲಾಗಿರುವ ಪೆರಿಪೇರಲ್ ಕ್ಯಾನ್ಸರ್ ಆಸ್ಪತ್ರೆಯನ್ನು ಮಾಸಾಂತ್ಯಕ್ಕೆ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು.
ನಗರದ ವರ್ತುಲ ರಸ್ತೆಯಲ್ಲಿನ ಶಾದಾಖ್ ಫಂಕ್ಷನ್ ಹಾಲ್‌ನಲ್ಲಿ ಮಾಜಿ ಮಹಾಪೌರ ಎಕ್ಬಾಲ್ ಅಹ್ಮದ್ ಶೀರಿನಿ μರೋಶ್ ಆಯೋಜಿಸಿದ ಉಚಿತ ಕಣ್ಣಿನ ತಪಾಸಣೆ ಮತ್ತು ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ಆಸ್ಪತ್ರೆಯನ್ನು ಈಗ ಸಂಪೂರ್ಣ ಆಧುನೀಕರಣಗೊಳಿಸಲಾಗಿದೆ.
ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 45 ಕೋಟಿ ರೂ.ಗಳನ್ನು ಒದಗಿಸಿವೆ ಎಂದರು. ಮೊದಲು 50 ಹಾಸಿಗೆಗಳ ಸಾಮರ್ಥ್ಯವಿದ್ದ ಕ್ಯಾನ್ಸರ್ ಆಸ್ಪತ್ರೆಯನ್ನು ಈಗ 80 ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸಲಾಗಿದೆ. 20 ಕೋಟಿ ರೂ.ಗಳನ್ನು ಆಸ್ಪತ್ರೆಯ ಆಧುನೀಕರಣಕ್ಕೆ ಹಾಗೂ ಇನ್ನು 20 ಕೋಟಿ ರೂ.ಗಳನ್ನು ಅತ್ಯಾಧುನಿಕ ಯಂತ್ರಗಳ ಖರೀದಿಗೆ ಬಳಕೆ ಮಾಡಲಾಗಿದೆ.
ಸುಸಜ್ಜಿತ ಆಪರೇಷನ್ ಥೇಟರ್ ನಿರ್ಮಾಣಗೊಂಡಿದೆ. ಹಿಂದಿನ ಕೋಬಾಲ್ಟ್ ಯಂತ್ರ ತೆಗೆದು ಹೊಸ ಹೈ ಆ್ಯಂಡ್ ಎಕ್ಸಲೇಟರ್ ಯಂತ್ರ ಅಳವಡಿಸಲಾಗಿದೆ. ಲಿನ್ಯಾಕ್ ಹೊಸ ಯಂತ್ರದ ಮೂಲಕ ಕ್ಯಾನ್ಸರ್ ರೋಗಿಗಳ ತಪಾಸಣೆಗಾಗಿ ಆಟೋಮಿಕ್ ರೆಗ್ಯೂಲ್ಯಾರಿಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಶೀಘ್ರವೇ ಅನುಮತಿ ದೊರೆಯಲಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಇಕಬಾಲ್ ಅಹ್ಮದ್ ಸರಡಗಿ ಅಧ್ಯಕ್ಷತೆ ವಹಿಸಿದ್ದರು. ಹಜರತ್ ಸೈಯದ್ ಶಾ ಬಾಬರ್ ಶಬ್ಬೀರ್ ಹುಸೇನಿಸಾಬ್, ಆಲಂಖಾನ್, ಬಾಬಾ ನಜಿರ್ ಮೊಹ್ಮದ್ ಖಾನ್, ತನುವೀರ್ ಅಹ್ಮದ್ ಸರಡಗಿ, ಮೊಹ್ಮದ್ ಅಜುಮುದ್ದೀನ್, ಪತ್ರಕರ್ತ ಅಜೀಜುಲ್ಲಾ ಸರಮಸ್ತ್, ಅಲ್ಲಿಖಾನ್, ಜಾವಿದ್, ಮಹಿಯುದ್ದೀನ್ ಆಗಮಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಧಿಕಾರಿ ಡಾ| ಶಿವರಾಜ್ ಸಜ್ಜನಶೆಟ್ಟಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ| ಬಿ.ಎಸ್. ಜೋಶಿ, ಡಾ| ಉದಯ ಪಾಟೀಲ, ಡಾ| ಮಿರ್ಜಾ ಮುನೀರ್ ಬೇಗ್ ಹಾಜರಿದ್ದರು.
20ರಂದು ಉನ್ನತ ಸಭೆ: ರಾಜ್ಯದ ಬಜೆಟ್ ನಲ್ಲಿ ಹೆಚ್ಚಿನ ಅನುದಾನಕ್ಕಾಗಿ ಫೆ. 20ರಂದು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಉನ್ನತ ಸಭೆಯೊಂದನ್ನು ಕರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು. ಈಗಾಗಲೇ ರಾಜ್ಯದ ಕಲಬುರ್ಗಿ, ಬೆಳಗಾವಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ.
ಅದೇ ರೀತಿ ಬಾಗಲಕೋಟೆ, ಹಾವೇರಿ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪೂರದಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದ್ದು, ಈ ಎಲ್ಲ ಯೋಜನೆಗಳಿಗೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ವೃತ್ತಿ ಶಿಕ್ಷಣ ಪ್ರವೇಶಕ್ಕಾಗಿ ನೀಟ್ ಜಾರಿಗೆ ತರುವುದರಿಂದ ಸಿಇಟಿ ರದ್ದುಪಡಿಸಲಾಗಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕೇವಲ ನೀಟ್ ಪರೀಕ್ಷೆಗೆ ಹಾಜರಾಗಬೇಕು. ನೀಟ್ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಬಹುದಾಗಿದೆ. ಈ ಸಂಬಂಧ ಭಾರತೀಯ ವೈದ್ಯಕೀಯ ಮಂಡಳಿಯು ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Cast Census: ಜಾತಿಗಳ ಸಮಸ್ಯೆಗೆ ಸಿಎಂ ಪರಿಹಾರವೇನು?: ಎಚ್.ಡಿ.ಕುಮಾರಸ್ವಾಮಿ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.