ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗಣಿತ ಪೂರಕ ಪರೀಕೆ
Team Udayavani, Feb 19, 2018, 10:19 AM IST
ವಾಡಿ: ಗಣಿತ ವಿಷಯ ಎಂದರೆ ಕೆಲ ವಿದ್ಯಾರ್ಥಿಗಳಿಗೆ ನೀರು ಕುಡಿದಷ್ಟೇ ಸರಳ. ಆದರೆ ಹಲವು ವಿದ್ಯಾರ್ಥಿಗಳಿಗೆ ಇದು
ಕಬ್ಬಿಣದ ಕಡಲೆ ಎಂಬ ಮಾತು ಜನಜನೀತ. ಶಿಕ್ಷಣ ಇಲಾಖೆ ನಡೆಸುವ 2018ನೇ ಸಾಲಿನ ಎಸ್‌ಎಸ್ ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಇನ್ನೂ ಎರಡು ತಿಂಗಳು ದೂರ ಇರುವಾಗಲೇ ವಿದ್ಯಾರ್ಥಿಗಳು ಗಣಿತ ವಿಷಯದ ಪೂರಕ ಪರೀಕ್ಷೆ ಬರೆದರು.
ಅಖೀಲ ಭಾರತ ಶಿಕ್ಷಣ ಉಳಿಸಿ
ಸಮಿತಿ (ಎಐಎಸ್‌ಇಸಿ) ಸ್ಥಳೀಯ ಘಟಕದ ವತಿಯಿಂದ ರವಿವಾರ ಪಟ್ಟಣದ ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಗಣಿತ ವಿಷಯದ ಪೂರಕ ಪರೀಕ್ಷೆಯಲ್ಲಿ ಪಟ್ಟಣದ ಒಟ್ಟು 13 ಪ್ರೌಢಶಾಲೆಗಳ 607 ವಿದ್ಯಾರ್ಥಿಗಳು ತಮ್ಮ ಗಣಿತ ಜ್ಞಾನವನ್ನು ಓರೆಗೆ ಹಚ್ಚಿದರು. ಶಿಕ್ಷಣ ಇಲಾಖೆ ಪರವಾನಿಗೆಯೊಂದಿಗೆ ಪೊಲೀಸ್ ಭದ್ರತೆ ಹಾಗೂ ಸಿಸಿ ಕ್ಯಾಮೆರಾಗಳ ಮಧ್ಯೆ ನಡೆದ ಪೂರಕ ಪರೀಕ್ಷೆ, ಅತ್ಯಂತ ಪಾರದರ್ಶಕತೆಯಿಂದ ಕೂಡಿತ್ತು. 22 ಕೊಠಡಿಗಳು ಪರೀಕ್ಷೆಗೆ ಬಳಕೆಯಾದರೆ, ಇಬ್ಬರು ಪರೀಕ್ಷಾ ಮೇಲ್ವಿಚಾರಕರು, ಮತ್ತಿಬ್ಬರು ಜಾಗೃತ ದಳವಾಗಿ ಒಟ್ಟು 30 ಜನ ಶಿಕ್ಷಕರು ಸೇವೆ ಸಲ್ಲಿಸಿದರು. ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ತೆಕಲಾ ಮೇರಿ, ಸಿಸ್ಟರ್ ಸೆಲಿನ್ ಪರೀಕ್ಷೆಗಾಗಿ ಒಂದು ದಿನ ಇಡೀ ಶಾಲೆಯನ್ನೆ ಬಿಟ್ಟುಕೊಟ್ಟಿದ್ದರು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ, ಗಣಿತ ಶಿಕ್ಷಕ ಆರ್.ಕೆ. ವೀರಭದ್ರಪ್ಪ, ಎಸ್ ಎಸ್‌ಎಲ್‌ಸಿ ಪರೀಕ್ಷೆ ಎಂದರೆ ಬಹುತೇಕ ಮಕ್ಕಳು ಹೆದರುತ್ತಾರೆ.
ಅವರಲ್ಲಿ ಮಾನಸಿಕ ದೈರ್ಯ ತುಂಬಲು, ಪರೀಕ್ಷೆ ಭಯ ನಿವಾರಣೆ ಮಾಡಲು ಮತ್ತು ಪರೀಕ್ಷೆ ನಿಯಮಗಳ ತಿಳಿವಳಿಕೆ
ಮೂಡಿಸಲು ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಭಯ ಮುಕ್ತವಾಗಿ ನಕಲು ರಹಿತ ಪರೀಕ್ಷೆ ಬರೆಸುವ ಉದ್ದೇಶ ಇದರ
ಹಿಂದಿದೆ. ಸರಕಾರ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಒತ್ತಾಸೆಯೊಂದಿಗೆ ಶಿಕ್ಷಣ ಉಳಿಸಿ ಸಮಿತಿ ಇಂತಹ ಕಾರ್ಯಕ್ರಮ ರೂಪಿಸುತ್ತಿದೆ. ಅನೇಕ ಶಿಕ್ಷಕರು ಸಮಿತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವಿವರಿಸಿದರು.
ಶಿಕ್ಷಣ ಉಳಿಸಿ ಸಮಿತಿ ಸ್ಥಳೀಯ ಸಂಚಾಲಕ ರಮೇಶ ಮಾಶಾಳಕರ, ಸಿಆರ್‌ಪಿ ಹೇಮಂತಕುಮಾರ ಬಿ.ಕೆ., ಶಿಕ್ಷಕರಾದ ಚಂದ್ರು, ರಾಘವೇಂದ್ರ, ಶರಣಬಸಪ್ಪ, ಶರಣು ದೋಶೆಟ್ಟಿ, ಸಾಯಬಣ್ಣ ನಾಟೀಕಾರ, ಶ್ರೀಶರಣ ಹೊಸಮನಿ,
ಮಲ್ಲಣ್ಣ ದಂಡಬಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.