ಸಮಾಜದಲ್ಲಿ ಮಾಧ್ಯಮ ಪಾತ್ರ ದೊಡ್ಡದು


Team Udayavani, Jul 24, 2017, 3:29 PM IST

24-GUB-4.jpg

ಕಲಬುರಗಿ: ಸಮಾಜದ ಎಲ್ಲ ಸ್ಥರಗಳು ಸರಿಯಾದ ನಿಟ್ಟಿನಲ್ಲಿ ಮುನ್ನಡೆಯುವಂತೆ ಆಗಲು ಹಾಗೂ ಸಮಾಜ ಕಟ್ಟುವಲ್ಲಿ, ಪ್ರಜಾಪ್ರಭುತ್ವ ಸರಿಯಾಗಿ ನಿಭಾಯಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳಮುಖ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

ರವಿವಾರ ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರು ನಟಿಸಿದ ಕೋಣನ ಮುಂದೆ ಕಿನ್ನೋರಿ ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತು ಇಂದು ವೇಗವಾಗಿ ಹೋಗುತ್ತಿದೆ. ಇದಕ್ಕೆ ಮಾಧ್ಯಮವೇ ಕಾರಣ. ಜನರಲ್ಲಿ ಜಾಗೃತಿ ಹಾಗೂ ಸೂಕ್ತ ಮಾಹಿತಿಯನ್ನು ಮಾಧ್ಯಮಗಳಿಂದು ಸ್ಪರ್ಧೆ ಎನ್ನುವ ರೀತಿ ಕೊಡುತ್ತಿವೆ. ಮಾಧ್ಯಮಗಳ ಸಲಹೆ, ಟೀಕೆಗಳನ್ನು ಸರ್ಕಾರ ಸಕರಾತ್ಮಕವಾಗಿ ಸ್ವೀಕರಿಸಿ ಸ್ಪಂದಿಸುತ್ತಿದೆ ಎಂದರು.

ಸಾಮಾಜಿಕ ಹೊಣೆಗಾರಿಕೆಗಿಂತ ಭಾವನೆಗಳನ್ನು ತಲ್ಲಣಗೊಳಿಸುವ ಸುದ್ದಿಗಳಿಗೆ ಹೆಚ್ಚು ಮಹತ್ವ ಸಿಗುತ್ತಿದೆ. ಆದ್ದರಿಂದ ಜನರಲ್ಲಿ ವಿಶ್ವಾಸಕ್ಕೆ ಕೊರತೆಯಾಗದಂತೆ ಕೆಲಸ ಮಾಡುವುದು ಅದರಲ್ಲೂ ಸಾಮಾಜಿಕವಾಗಿ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿ ಸಮಾಚಾರ ಕೊಡುವುದು ಮುಖ್ಯವಾಗಿದೆ ಎಂದು ನುಡಿದರು.

10 ಲಕ್ಷ ರೂ: ಮುಖ್ಯ ಅತಿಥಿಯಾಗಿದ್ದ ಮಹಾಪೌರ ಶರಣಕುಮಾರ ಮೋದಿ ಮಾತನಾಡಿ, ಮಾಧ್ಯಮದವರು ಮಹಾನಗರ ಪಾಲಿಕೆಗೆ
ಸಂಬಂಧಪಟ್ಟಂತೆ ಟೀಕೆ ಹಾಗೂ ಮೆಚ್ಚುಗೆಯ ವರದಿಗಳನ್ನು ಪ್ರಕಟಿಸುತ್ತಿದ್ದಾರೆ. ಇದನ್ನು ತಾವು ಅವಲೋಕಿಸುತ್ತಿದ್ದೇನೆ ಎಂದು ಹೇಳಿದರು. ಅಲ್ಲದೇ ಪತ್ರಿಕಾ ಭವನದಲ್ಲಿ ನಡೆಯುತ್ತಿರುವ ಸಭಾ ಮಂಟಪಕ್ಕೆ ಅಗತ್ಯ ಪೀಠೊಪಕರಣಗಳಿಗೆ ಮಹಾನಗರ ಪಾಲಿಕೆ ವತಿಯಿಂದ 10 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಮಾತನಾಡಿ, ನಿಷ್ಪಕ್ಷಪಾತ ವರದಿ ಹಾಗೂ ಸಾಮಾಜಿಕ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಮಾಧ್ಯಮಗಳು ಸಮರ್ಪಕವಾದ ಪಾತ್ರ ನಿರ್ವಹಿಸುತ್ತಿವೆ ಎಂದರು. ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ ಸಹ ಮಾತನಾಡಿದರು.

ವಿಶೇಷ ಸನ್ಮಾನ: ಇದೇ ಜುಲೈ 31ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ: ದಿ| ವಿ. ಎನ್‌. ಕಾಗಲಕರ್‌ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗೋವಿಂದರಾವ್‌ ಖಮಿತಕರ್‌ ಅವರಿಗೆ ನೀಡಲಾಯಿತು.  ಪತ್ರಕರ್ತರಾದ ಶೇಷಗಿರಿ ಎಚ್‌., ಮಂಜುನಾಥ ಅಂಜುಟಗಿ, ಶರಣಬಸಪ್ಪ ವಡಗಾಂವ, ವಿಜಯಕುಮಾರ ಕಲ್ಲಾ, ನಾಗಯ್ಯ ಸ್ವಾಮಿ ಬೊಮ್ಮನಳ್ಳಿ , ನರಸಿಂಗ್‌ ಕುದಂಪುರೆ, ಶಿವರಾಜ ವಾಲಿ, ಮಲ್ಲಿಕಾರ್ಜುನ ಮೂಡಬೂಳಕರ್‌, ಆಸ್ಮಾ ಇನಾಂದಾರ್‌, ಶರಣಬಸಪ್ಪ ಅನ್ವರ್‌, ಅರುಣ ಕದಮ್‌, ವಿಜಯಕುಮಾರ ವಾರದ (ಛಾಯಾಗ್ರಾಹಕ), ಮಿರ್ಜಾ ಸರ್ಪರಾಜ್‌ (ಇನ್‌ಕಿಲಾಬ್‌ ಡೆಕ್ಕನ್‌), ಆನಂದ ರಾಜಪ್ಪ (ಮುದ್ರಣ ವಿಭಾಗ), ನಾಗಶೆಟ್ಟಿ ಡಾಕುಳಗಿ (ಜಾಹೀರಾತು ವಿಭಾಗ), ಸಿದ್ಧಾರೂಢ ಬಿರಾದಾರ (ಪ್ರಸಾರಂಗ ವಿಭಾಗ) ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಶಿವರಂಜನ್‌ ಸತ್ಯಂಪೇಟೆ ಸ್ವಾಗತಿಸಿದರು. ಪ್ರಭುಲಿಂಗ ನೀಲೂರೆ ಹಾಗೂ ಸುರೇಶ ಬಡಿಗೇರ ನಿರೂಪಿಸಿದರು. ಖಜಾಂಚಿ
ಚಂದ್ರಕಾಂತ ಹಾವನೂರ ಸನ್ಮಾನಿತರ ಪರಿಚಯ ಮಾಡಿದರು. ನಂತರ ಪತ್ರಕರ್ತ ಡಾ| ಶಿವರಾಮ ಅಸುಂಡಿ ರಚನೆಯ ಕೋಣನ ಮುಂದೆ ಕಿನ್ನೂರಿ
ನಾಟಕವನ್ನು ಪತ್ರಕರ್ತರೆಲ್ಲರೂ ಪ್ರದರ್ಶಿಸಿದರು. ಪತ್ರಕರ್ತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಉದಯವಾಣಿ ಇಬ್ಬರಿಗೆ ಪ್ರಶಸ್ತಿ
ಉದಯವಾಣಿ ಕಲಬುರಗಿ ಆವೃತ್ತಿಯ ಜಾಹೀರಾತು ವಿಭಾಗದ ಮ್ಯಾನೇಜರ್‌ ನಾಗಶೆಟ್ಟಿ ಡಾಕುಳಗಿ, ಜೇವರ್ಗಿ ತಾಲೂಕು ಪ್ರತಿನಿಧಿ ವಿಜಯಕುಮಾರ ಕಲ್ಲಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಟಾಪ್ ನ್ಯೂಸ್

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

2-kalburgi

Kalaburagi: ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

Sedam-yathre

Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್‌ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!

8-

Kalaburagi: ಕಾರು- ಪಿಕಪ್ ಡಿಕ್ಕಿ: ಇಬ್ಬರು ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.