ವೈದ್ಯಕೀಯ ಸೇವೆಯಲ್ಲಿ ಅರವಳಿಕೆ ತಜ್ಞರ ಸೇವೆ ಪ್ರಮುಖ
Team Udayavani, Oct 30, 2017, 11:12 AM IST
ಕಲಬುರಗಿ: ಕ್ಲಿಷ್ಟಕರ ಪರಿಸ್ಥಿತಿ ಸಂದರ್ಭದಲ್ಲಿ ಅರವಳಿಕೆ ತಜ್ಞರ ಪಾತ್ರ ಶಸ್ತ್ರ ಚಿಕಿತ್ಸಾ (ಓಟಿ) ವಿಭಾಗಕ್ಕೆ ಹೆಚ್ಚು ಸಿಮೀತವಾಗಿರುವ ಕಾಲ ದೂರವಾಗಿ ಬದಲಾಗಿರುವ ಪರಿಸ್ಥಿತಿಯಲ್ಲಿ ವೈದ್ಯಕೀಯ ಕ್ಷೇತ್ರದ ಎಲ್ಲ ಸೇವೆಗಳಲ್ಲಿ
ಅದರಲ್ಲೂ ತುರ್ತು ಪರಿಸ್ಥಿತಿ ಚಿಕಿತ್ಸೆಯಲ್ಲಿ ಅರವಳಿಕೆ ತಜ್ಞರ ಪಾತ್ರ ಪ್ರಮುಖವಾಗಿದೆ ಎಂದು ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಹೇಳಿದರು.
ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ಸಭಾಂಗಣದಲ್ಲಿ ಎಪಿಐ, ಐಎಸ್‌ಎ ಸಹಯೋಗದಲ್ಲಿ ಕ್ರಿಟಿಕಲ್ ಕೇರ್ ಕಲಬುರಗಿ
ಚಾಪ್ಟರ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಕ್ರಿಟಿಕಲ್ ಕೇರ್- 2017 ಕುರಿತು ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಡಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜೀವಕ್ಕೆ ಅಪಾಯವಾದ ತುರ್ತು ಸಂದರ್ಭದಲ್ಲಿ ರೋಗಿಗಳ ರಕ್ಷಣೆ, ಇನ್ನಿಲ್ಲದ ತೊಂದರೆಗಳಿಂದ ದೂರಗೊಳಿಸಲು ಅರವಳಿಕೆ ತಜ್ಞರ ಕಾರ್ಯ ಅಮೋಘವಾಗಿದೆ. ವೈದ್ಯಕೀಯದ ಎಲ್ಲ ಸೇವೆಗಳಲ್ಲಿ ಅನಸ್ತೇಷಿಯನ್ಸ್ ತೊಡಗಿಸಿಕೊಳ್ಳುವುದು ಈಗಿನ ಅಗತ್ಯವಾಗಿದೆ. ರೋಗಿಯ ಪ್ರಾಣವನ್ನು ತುರ್ತು ಸಂದರ್ಭದಲ್ಲಿ ರಕ್ಷಿಸಲು ಸಹಕಾರಿಯಗುತ್ತದೆ ಎಂದು ಹೇಳಿದರು.
ಪುಣೆಯ ರುಬಿ ಹಾಲ… ಕ್ಲಿನಿಕ್ ಮುಖ್ಯಸ್ಥ, ಐಎಸ್‌ಸಿಸಿಎಂ ಅಧ್ಯಕ್ಷ ಡಾ| ಕಪಿಲ… ಜೀಪ್ರ ಉಪನ್ಯಾಸ ನೀಡಿ, ಕ್ರಿಟಿಕಲ… ಕೇರ್ ನಿರ್ವಹಣೆ ಮತ್ತು ತಂತ್ರಜ್ಞಾನ ಬಳಕೆಯ ಮೂಲಕ ಮನುಷ್ಯನ ಅಂಗಾಂಗಳ ಕಾರ್ಯನಿರ್ವಾಹಣೆ
ಬಗ್ಗೆ ತೀವ್ರ ನಿಗಾ ಮತ್ತು ತುರ್ತು ಚಿಕಿತ್ಸೆ ನೀಡುವ ವಿಧಾನ ಈ ಘಟಕದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ತಜ್ಞ ವೈದ್ಯರು ಮತ್ತು ಸಿಬ್ಬಂದಿ ವೈದ್ಯಕೀಯ ಮಾನದಂಡದ ಮೇಲೆ ರೋಗಿಗಳಿಗೆ ಚಿಕಿತ್ಸೆಯ ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಎಚ್‌ಕೆಇ ಆಡಳಿತ ಮಂಡಳಿ ನಾಮನಿರ್ದೇಶಿತ ಸದಸ್ಯ ಡಾ| ಶರಣಬಸವ ಕಾಮರೆಡ್ಡಿ, ಎಂಆರ್‌ಎಂಸಿ ಹಾಗೂ ಬಸವೇಶ್ವರ ಆಸ್ಪತ್ರೆಯ ಡೀನ್ ಡಾ| ಎಸ್. ಆರ್.ಹರವಾಳ, ನಿರ್ದೇಶಕ ಡಾ| ಸಾಯಿನಾಥ ಆಂದೋಲಾ, ಬಸವೇಶ್ವರ ಆಸ್ಪತ್ರೆಯ ಡೀನ್ ಡಾ| ಶರಣಗೌಡ ಪಾಟೀಲ್, ಉಪ ಅಧೀಕ್ಷಕ ಡಾ| ಎಂ.ಆರ್.ಪೂಜಾರಿ, ಐಎಎಸ್ ಅಧ್ಯಕ್ಷ ಡಾ| ಎಂ.ಎನ್.ಅವಟಿ, ಡಾ| ಸುನೀಲ್ ಪಾಂಡೆ, ಡಾ| ರವೀಂದ್ರಮೆಹತಾ ಮುಂತಾದವರಿದ್ದರು.
ಸಿಎಂಇ ಸಂಘಟನಾ ಅಧ್ಯಕ್ಷ ಡಾ| ಸಂಗ್ರಾಮ ಬಿರಾದಾರ ಸ್ವಾಗತಿಸಿದರು. ವೈದ್ಯರಾದ ಪ್ರತಿಮಾ ಕಾಮರೆಡ್ಡಿ, ಸುರೇಶ ಹರಸೂರ, ಬಸವರಾಜ ಮಂಗಶೆಟ್ಟಿ,ಕೆ.ಎಸ್.ಆರ್. ಮೂರ್ತಿ, ದೇವರಾಜ ಕಣ್ಣೂರ, ಗೌರಿಶಂಕರ ರೆಡ್ಡಿ, ಸುದರ್ಶನ ಲಾಖೆ, ಅಭಿಷೇಕ ಮಾಲಿಪಾಟೀಲ್, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮುರುಗೇಶ ಪಸ್ತಾಪುರ, ಬಸವರಾಜ ಬೆಳ್ಳಿ,
ತೇಜಸ್ವಿನಿ, ಮಂಜುಳಾ, ಸಿದ್ದರಾಜ ವಾಲಿ, ದಯಾನಂದ ರೆಡ್ಡಿ ಪಾಲ್ಗೊಂಡಿದ್ದರು. ಜಿಲ್ಲೆ ಸೇರಿದಂತೆ ಹಲವಾರು ಕಡೆಗಳಿಂದ ಆಗಮಿಸಿದ್ದ ವೈದ್ಯ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ| ಪ್ರತಿಮಾ ಶರಣ ಕಾಮರಡ್ಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.