ಧ್ಯಾನ-ಮೌನದಲ್ಲಿ ಅಗಾಧ ಶಕ್ತಿ: ಸಿದ್ದೇಶ್ವರ ಶ್ರೀ
Team Udayavani, Feb 5, 2018, 10:14 AM IST
ಕಲಬುರಗಿ: ಧ್ಯಾನ ಹಾಗೂ ಮೌನದಲ್ಲಿ ಅಗಾಧ ಶಕ್ತಿ ಅಡಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ನಗರದ ಆಕಾಶವಾಣಿ ಕೇಂದ್ರ ಹಿಂಭಾಗದ ಕೆಸರಟಗಿ ರಸ್ತೆ ಸಮಾಧಾನದಲ್ಲಿ ರವಿವಾರ ನಡೆದ ಧ್ಯಾನ ಮಂದಿರ ವಾರ್ಷಿಕೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಹಾಗೂ ಸಮಾಧಾನ ದಿಂದ ಶಿವಲೋಕ ರಥಕ್ಕೆ ಚಾಲನೆ ನೀಡಿ ಸ್ವಾ,ಮೀಜಿ ಮಾತನಾಡಿದರು.
ಧ್ಯಾನ ಕದಡಿದ ಹಾಗೂ ಗೊಂದಲಗಳಿಂದ ತುಂಬಿದ ಮನಸ್ಸನ್ನು ತಿಳಿಗೊಳಿಸುತ್ತದೆ. ಮೌನದಲ್ಲೂ ಅಪಾರ ಶಕ್ತಿ ಅಡಗಿದೆ. ಎರಡೂ ತತ್ವಗಳು ಹಾಗೂ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಕಾರ್ಯ ಮೆಚ್ಚುವಂತದ್ದು ಹಾಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಲಿಖೀತ ರೂಪದಲ್ಲಿ ಆಶೀರ್ವಚನ ನೀಡಿದ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಧ್ಯಾನ ಮಂದಿರ ಭಕ್ತರ ಧ್ಯಾನಕ್ಕಾಗಿ ನಿರ್ಮಿಸಲಾಗಿದೆ. ಮನುಷ್ಯ ಈಗ ವಿಶ್ರಾಂತಿ ಇಲ್ಲದೇ ದುಡಿಯುತ್ತಿದ್ದಾರೆ. ಕಾಯಕದ ನಡುವೆ ಸ್ವಲ್ಪ ಧ್ಯಾನ ಅವಶ್ಯಕ ಎಂಬುದನ್ನು ಮನಗಾಣಲಾಗಿದೆ.
ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ| ನಿಂಗಮ್ಮ ಪತಂಗೆ ಅವರು, ಧ್ಯಾನ ಮಂದಿರ ಮಹತ್ವ ವಿವರಣೆ ನೀಡಿದರಲ್ಲದೇ ಪೂಜ್ಯರ ಅಪ್ಪಣೆಯಂತೆ ಧ್ಯಾನಮಂದಿರ ಸದುಪಯೋಗಪಡೆದು
ಕೊಳ್ಳುತ್ತಿದ್ದೇವೆ. ಅದಲ್ಲದೇ ಪೂಜ್ಯರ ಇಚ್ಚೆ ಮೇರೆಗೆ ನಗರದ ನೆಹರು ಗಂಜ್‌ನ ರುದ್ರಭೂಮಿ ಮಾದರಿಯಾಗಿದೆ ಎಂಬುದನ್ನು ಸಿದ್ದೇಶ್ವರ ಶ್ರೀಗಳ ಗಮನಕ್ಕೆ ತಂದರು.
ಶಿವಲೋಕ ರಥಕ್ಕೆ ಚಾಲನೆ: ಇದೇ ಸಂದರ್ಭದಲ್ಲಿ ಧ್ಯಾನ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ಸಮಾಧಾನದಿಂದ ಮತ್ತೂಂದು ಶಿವಲೋಕ ರಥಕ್ಕೆ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು. ಶಿವಲೋಕದ ವಾಹನಕ್ಕೆ ಕೈ ಜೋಡಿಸಿದ ಸಮಾಜ ಸೇವಕ ಉಮೇಶ ಶೆಟ್ಟಿ ಅವರನ್ನು ಸತ್ಕರಿಸಲಾಯಿತು.
ಸೊನ್ನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು, ಆತ್ಮಾರಾಮ ಮಹಾಸ್ವಾಮಿಗಳು, ವಿಜಯಕುಮಾರ ಸ್ವಾಮಿಗಳು, ಸಮಾಧಾನದ ಭಕ್ತರು, ಆಧ್ಯಾತ್ಮೀಕ ಪ್ರವಚನ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಭೂಮಿ ಫೌಂಡೇಶನ್ ಯೋಗ ತರಬೇತುದಾರ ನಾಗರಾಜ ಸಾಲೊಳ್ಳಿ ಮಾರ್ಗದರ್ಶನದ ಒಂದು ವಾರದ ಉಚಿತ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರಕ್ಕೆ ಚಾಲನೆ ನೀಡಲಾಯಿತು. ಇದಲ್ಲದೇ ಆಯುಷ್ ಇಲಾಖೆಯಿಂದ ಆಯುರ್ವೇದ ಉಚಿತ ಆರೋಗ್ಯ ತಪಾಸಣೆ-ಔಷಧ ವಿತರಣೆ ಮನೆ ಮದ್ದು ಕಾರ್ಯಕ್ರಮ ನಡೆದು ಸಂಧಿವಾತ, ಮಧುಮೇಹ, ಚರ್ಮರೋಗ, ಮೂಲವ್ಯಾದಿ, ಸ್ತ್ರೀರೋಗ ಸೇರಿದಂತೆ ಇತರರ ರೋಗಗಳಿಗೆ ಉಚಿತ ಚಿಕಿತ್ಸಾ ಶಿಬಿರ ನಡೆಯಿತು. ಸಾವಿರಾರು ಜನರು ಶಿಬಿರ ಲಾಭ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.