ಮನಸ್ಸಿನ ಮೈಲಿಗೆ ಕಳೆದ ಮಾಚಿದೇವ
Team Udayavani, Feb 2, 2018, 11:07 AM IST
ಜೇವರ್ಗಿ: ಮಡಿವಾಳ ಮಾಚಿದೇವರು ಕೇವಲ ಶರಣರ ಬಟ್ಟೆಗಳನ್ನು ಮಡಿ ಮಾಡದೇ ಸಮಾಜದ ಜನರ ಮನಸ್ಸಿಗೆ ಅಂಟಿದ ಮೈಲಿಗೆ ಕಳೆದ ಮಹಾನ್ ಶರಣ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾ ಶರಣ ಮಡಿವಾಳ ಮಾಚಿದೇವ ಮರ್ತ್ಯದ ಮನದ ಮೈಲಿಗೆ ಕಳೆಯಲೆಂದು ಜನಿಸಿದ ಕಲ್ಯಾಣದ ಶರಣರಲ್ಲಿ ಒಬ್ಬರು. ವಿಶ್ವಗುರು ಅಣ್ಣ ಬಸವಣ್ಣನವರ ಕ್ರಾಂತಿಯ ಸೆಳೆತದಿಂದ ಕಲ್ಯಾಣಕ್ಕೆ ಬಂದು, ಸತ್ಯ, ನ್ಯಾಯ, ನಿಷ್ಠೆ, ನಿರಹಂಕಾರ ಸುಜ್ಞಾನ ವೀರನಿಷ್ಠೆಗೆ ಸಾಕಾರ ಮೂರ್ತಿಯಾದವರು ಮಡಿವಾಳರು ಎಂದು ವಿವರಿಸಿದರು.
ಬಸವಣ್ಣನವರ ಬಲಗೈಯಂತಿದ್ದವರು ಮಡಿವಾಳರು. ಬಸವಣ್ಣ ಕಲ್ಯಾಣ ತೊರೆದ ನಂತರ ಶರಣರಿಗೆ ನಾಯಕರಂತಿದ್ದವರು. ಬಿಜ್ಜಳನ ಕೊಲೆಯ ತರುವಾಯ ಶರಣರನ್ನು ಮತ್ತು ವಚನಗಳನ್ನು ರಕ್ಷಿಸಿದ ಮಹಾನ್ ವೀರ. ಮಡಿವಾಳರ ದಿಟ್ಟತನ, ಮಾನವೀಯತೆ, ನೇರ ನುಡಿ ಎಲ್ಲರಿಗೂ ಅನುಕರಣೀಯ. ಮಾಚಿದೇವರ ಬದುಕು, ಕಾಯಕ, ವಚನಗಳು ಭಾರತೀಯ ಸಂಸ್ಕೃತಿಗೆ ಆದರ್ಶಪ್ರಾಯ ಆಗಿವೆ ಎಂದು ಹೇಳಿದರು.
ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ಧೇವಾಡಗಿ, ಮಡಿವಾಳ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ಮಡಿವಾಳ ಹಿಪ್ಪರಗಾ ಎಸ್.ಎನ್, ಲೋಕೋಪಯೋಗಿ ಇಲಾಖೆ ಎಇಇ ಪಲ್ಲಾಸತ್ಯಾಶೀಲ ರೆಡ್ಡಿ, ಪುರಸಭೆ ಮುಖ್ಯಾಧಿ ಕಾರಿ ಬಾಬುರಾವ್ ವಿಭೂತೆ ಆಗಮಿಸಿದ್ದರು. ಕಿರಿಯ ಇಂಜಿನಿಯರ್ ನಾನಾಸಾಹೇಬ ಮಡಿವಾಳ ಉಪನ್ಯಾಸ ನೀಡಿದರು.
ಕಸಾಪ ಅಧ್ಯಕ್ಷ ಶಿವಣಗೌಡ ಹಂಗರಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಚನ್ನಮಲ್ಲಯ್ಯ ಹಿರೇಮಠ, ಶಿವಪ್ಪ ಮಡಿವಾಳಕರ್, ಬಸವರಾಜ ಮಡಿವಾಳಕರ್, ಭೀಮರಾವ್ ಮಡಿವಾಳಕರ್, ಭಗವಂತ್ರಾಯ ಬೆಣ್ಣೂರ, ಮರೆಪ್ಪ ಸರಡಗಿ ಭಾಗಿಯಾಗಿದ್ದರು. ತಹಶೀಲ್ದಾರ್ ಬಸವಲಿಂಗಪ್ಪ ನಾಯ್ಕೋಡಿ ಸ್ವಾಗತಿಸಿದರು, ಬಿಸಿಎಂ ಅಧಿಕಾರಿ ವಿ.ಬಿ. ಹಿರೇಗೌಡ ನಿರೂಪಿಸಿ, ವಂದಿಸಿದರು. ಇದಕ್ಕು ಮುನ್ನ ಹಳೆ ತಹಶೀಲ್ದಾರ್ ಕಚೇರಿಯಿಂದ ಮಿನಿ ವಿಧಾನಸೌಧ ಕಚೇರಿಯವರೆಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.