ಸಚಿವ ಡಾ| ಶರಣಪ್ರಕಾಶ ಪಾಟೀಲ ಮನೆಗೆ ಮುತ್ತಿಗೆ
Team Udayavani, Jul 22, 2017, 11:44 AM IST
ಕಲಬುರಗಿ: ಜಿಲ್ಲೆಯಲ್ಲಿ ಕೋಲಿ ಸಮಾಜದ ಯುವಕರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಮಾಡುವುದು, ಹಲ್ಲೆ ಮಾಡುವುದು
ಹಾಗೂ ಸೇಡಂ ತಾಲೂಕಿನ ಮುಗನೂರು ಘಟನೆಯನ್ನು ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲರ
ವೆಂಕಟೇಶ್ವರ ನಗರದಲ್ಲಿನ ಮನೆಗೆ ಜಿಲ್ಲಾ ಕೋಲಿ ಸಮಾಜದ ಯುವಕರ ಸಂಘಟನೆಗಳ ಒಕ್ಕೂಟ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿ, ಕೋಲಿ ಸಮಾಜದ ಯುವಕರು,ಯುವ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ ರಾಜಕೀಯ ಭವಿಷ್ಯ ಹಾಳು ಮಾಡುವ ವ್ಯವಸ್ಥಿತ ಸಂಚು ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ದಾಖಲು ಮಾಡಿರುವ ಪ್ರಕರಣಗಳನ್ನು ವಾಪಸ್ಸು ಪಡೆಯಬೇಕು. ರೌಡಿ ಪಟ್ಟಿಯಲ್ಲಿ ಸೇರಿಸಿರುವ ಸಮಾಜದ ಯುವಕರ ಹೆಸರಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಒಕ್ಕೂಟದ ಮುಖಂಡರಾದ ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ಸೈಬಣ್ಣ ಜಮಾದಾರ
ನೇತೃತ್ವದಲ್ಲಿ ಸಮಾಜದ ಯುವಕರು ಸಚಿವರ ಮನೆಗೆ ಮುತ್ತಿಗೆ ಹಾಕಿ ಸೇಡಂ ತಾಲೂಕಿನಲ್ಲಿ ನಡೆದಿರುವ ಹತ್ಯೆಯನ್ನು ಖಂಡಿಸಿದರು.
ಅಲ್ಲದೆ, ಹತ್ಯೆಗೀಡಾದ ಕುಟುಂಬಕ್ಕೆ ರಕ್ಷಣೆ, ಪರಿಹಾರ ಹಾಗೂ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು.
ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಿಂದ ಕಲಬುರಗಿಗೆ ಬಂದ ಬಳಿಕ ಈ ಕುರಿತು ಒಕ್ಕೂಟದ
ಮುಖಂಡರೊಂದಿಗೆ ಚರ್ಚೆ ಮಾಡಿ ಪರಿಹಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ಮುತ್ತಿಗೆ ಕೈ
ಬಿಡಲಾಯಿತು ಎಂದು ಒಕ್ಕೂಟದ ರಾಜೇಂದ್ರ ರಾಜವಾಳ ತಿಳಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿಯಲ್ಲಿ ಕೋಲಿ ಸಮಾಜದ ಮುಖಂಡ ಹಾಗೂ ಪಾಲಿಕೆಯ ಮಾಜಿ ಸದಸ್ಯ ರಾಜಗೋಪಾಲರೆಡ್ಡಿ ಮುದಿರಾಜ್, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ ಮಾತನಾಡಿ, ಜಿಲ್ಲೆಯಲ್ಲಿ ಈಚೆಗೆ ಕೋಲಿ ಸಮಾಜದ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಧರಣಿಯಲ್ಲಿ ಶಿವಲಿಂಗಪ್ಪ ಕಿನ್ನೂರ್, ಶರಣಪ್ಪ ತಳವಾರ, ಶಂಕರ ಕಟ್ಟಿಸಂಗಾವಿ, ರೇವಣಸಿದ್ದಪ್ಪ ಕಮಾನಮನಿ, ಸೀತಾರಾಮ
ಜಮಾದಾರ, ಮಹಾಂತೇಶ ಹರವಾಳ, ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ಪಿತಾಂಬರ ಕೋಲಿ, ಸೈಬಣ್ಣ ಜಮಾದಾರ,
ಮಡಿವಾಳಪ್ಪ ಗೋಳಾ, ಅನೀಲ ವಚ್ಚಾ, ಹುಲಿಕಂಠರಾಯ ಕೋಲಿ, ಚಂದ್ರಕಾಂತ ಗಂಗಾರ, ರಾಚಣ್ಣ ಯಡ್ರಾಮಿ, ಗುರು
ನಾಟೀಕಾರ, ಶಶಿಕಾಂತ ಕೊಳ್ಳಿ, ಗೋಪಾಲ ಮಡಗ, ಮೌನೇಶ ಆಂದೋಲ. ಶ್ರೀಕಾಂತ ಆಲೂರು, ಸಾಯಿಬಣ್ಣ ಹರಸೂರ, ಕುಮಾರ
ಯಾದಗಿರಿ, ಶರಣು ಜುಮ್ಮನಹಳ್ಳಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.