ಮಹಿಳೆಯರ ಮಾನ ಕಾಪಾಡುವಲ್ಲಿ ಸಚಿವ ಶರಣ ವಿಫಲ: ರಾಜಕುಮಾರ
Team Udayavani, Mar 20, 2018, 11:22 AM IST
ಸೇಡಂ: ಸತತ 15 ವರ್ಷಗಳ ಅಧಿಕಾರ ಪಡೆದ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೆಣ್ಣು ಮಕ್ಕಳ ಮಾನ ಕಾಪಾಡಲಾಗಲಿಲ್ಲ. ಗ್ರಾಮಗಳಿಗೆ ರಸ್ತೆ ನೀಡುವುದು ಅಭಿವೃದ್ಧಿಯಲ್ಲ. ಬದಲಿಗೆ ಶೌಚಾಲಯ ನೀಡುವುದು ಮುಖ್ಯ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
ತಾಲೂಕಿನ ಮೋತಕಪಲ್ಲಿ ಗ್ರಾಮದ ಶ್ರೀ ಬಲಭೀಮಸೇನ ದೇವಾಲಯದ ಆವರಣದಲ್ಲಿ 40 ದಿನಗಳ ಪಾದಯಾತ್ರೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇವಲ ರಸ್ತೆಗಳನ್ನು ನಿರ್ಮಿಸಿ ಕಮಿಶನ್ ಪಡೆಯುವುದು ಅಭಿವೃದ್ಧಿಯಲ್ಲ. ಗ್ರಾಮೀಣ ಜನರಿಗೆ ಪ್ರಮುಖವಾಗಿ ಅವಶ್ಯಕತೆ ಇರುವುದನ್ನು ನೀಡಬೇಕು. ಮುಂಬರುವ ದಿನಗಳಲ್ಲಿ ಬಿಜೆಪಿಗೆ ಬೆಂಬಲಿಸಿದರೆ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಪಾದಯಾತ್ರೆ ಮೂಲಕ ಪ್ರತಿ ಮನೆಗೆ ಭೇಟಿ ನೀಡುವ ರಾಜಕುಮಾರ ಪಾಟೀಲ ಅವರ ಕಾರ್ಯ ಮೆಚ್ಚುವಂತದ್ದು. ರಾಜ್ಯ ನಾಯಕರ ಗಮನಕ್ಕೆ ಪಾದಯಾತ್ರೆ ವರದಿ ತರಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಯಕ್ಬಲಖಾನ್, ಪರ್ವತರೆಡ್ಡಿ ಪಾಟೀಲ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ, ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ ಮಾತನಾಡಿದರು.
ಪಕ್ಷದ ತಾಲೂಕು ಅಧ್ಯಕ್ಷ ನಾಗಪ್ಪ ಕೊಳ್ಳಿ, ಪ್ರಧಾನ ಕಾರ್ಯದರ್ಶಿ ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ, ಶ್ರೀನಾಥ ಪಿಲ್ಲಿ, ವಿಶ್ವನಾಥರೆಡ್ಡಿ ಪಾಟೀಲ ಕುರಕುಂಟಾ, ಜನಾರ್ಧನರೆಡ್ಡಿ ನೀಲಂ, ಶಿವಕುಮಾರ ಪಾಟೀಲ(ಜಿಕೆ), ರಘುನಾಥರೆಡ್ಡಿ, ಪಾರ್ವತಿ ನಾಗೇಶ, ತುರಾಬುಲ್‌ಹಕ್, ವೆಂಕಟರೆಡ್ಡಿ ಗಾಡದಾನ, ವೆಂಕಟಮ್ಮ, ಬಲರಾಮ, ಜಿಪಂ ಸದಸ್ಯ ಶರಣು ಮೆಡಿಕಲ್, ಡಾ | ಮೋಹನರೆಡ್ಡಿ ಪಾಟೀಲ, ವೆಂಕಟಯ್ಯ ಕಲಾಲ, ಅನೀಲ ಐನಾಪುರ, ಶ್ರೀಮಂತ ಅವಂಟಿ ಇದ್ದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಿವೃತ್ತ ಗ್ರಂಥಪಾಲಕ ಬನ್ನಪ್ಪ ಬಿ.ಕೆ. ರಚಿಸಿದ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ನಂತರ ವಿವಿಧ ಪಕ್ಷಗಳ ತೊರೆದ ಅನೇಕರು ಬಿಜೆಪಿಗೆ ಸೇರ್ಪಡೆಯಾದರು. ಗ್ರಾಮದ ದಲಿತ ಕುಟುಂಬ ಗೋವಿಂದಮ್ಮ ಭೀಮಪ್ಪ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಿದ ತೆಲ್ಕೂರ ರಾತ್ರಿ ಊಟ ಸವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.