ಸಚಿವ ಪ್ರಿಯಾಂಕ್ ನಗರ ಸಂಚಾರ
Team Udayavani, Oct 4, 2018, 10:59 AM IST
ಕಲಬುರಗಿ: ಮಹಾನಗರದಲ್ಲಿ ಎಲ್ಲೆಂದರಲ್ಲಿ ಬಿದ್ದ ಕಸ, ಸಮರ್ಪಕವಾಗಿ ಆಗದ ಕಸ ವಿಲೇವಾರಿ, ಹದಗೆಟ್ಟ ಒಳಚರಂಡಿಯನ್ನು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಬೆಳಗ್ಗೆ ವೀಕ್ಷಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೇಕಾಬಿಟ್ಟಿ ಕೆಲಸ ಮಾಡಿದರೆ ಹೇಗೆ? ಇನ್ಮುಂದೆ ಕೆಲಸದಲ್ಲಿ ಸುಧಾರಣೆ ಆಗದಿದ್ದರೆ ಶಿಸ್ತು ಕ್ರಮಕ್ಕೆ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹಾಗೂ ಸಮಪರ್ಕಕ ನೀರು ವಿತರಣೆ ಮಾಡದಿರುವುದಕ್ಕೆ ನೀರು ಸರಬರಾಜು ಮಂಡಳಿ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ನಗರದ ವಿವಿಧ ವಾರ್ಡ್‌ಗಳ ನೈರ್ಮಲ್ಯ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರನ್ನು ಜತೆಗೆ ಕರೆದುಕೊಂಡು ಬೆಳಗಿನ 6 ಗಂಟೆಯಿಂದ 11 ಗಂಟೆ ವರೆಗೆ ಗೋವಾ ಹೋಟೆಲ್, ಶರಣಬಸವೇಶ್ವರ ದೇವಸ್ಥಾನ, ಕೋಟೆ, ಸೂಪರ್ ಮಾರ್ಕೇಟ್, ದರ್ಗಾ, ರೋಜಾ ಕೆ., ಮೆಹಬೂಬ ನಗರ, ಖಮರ ಕಾಲೋನಿ, ಮಿಜಗುರಿ, ಕಾಂತಾ ಕಾಲೋನಿ ಹಾಗೂ ಹಳೇ ಜೇವರ್ಗಿ ರಸ್ತೆ ಪ್ರದೇಶಗಳಿಗೆ ಭೇಟಿ ನೀಡಿ ನಗರದ ನೈಜ ಪರಿಸ್ಥಿತಿ ಅವಲೋಕಿಸಿದರು.
ಖಮರ ಕಾಲೋನಿಯಲ್ಲಿ ಯಾವುದೇ ಸುರಕ್ಷಾ ಸಲಕರಣೆ ಹಾಕಿಕೊಳ್ಳದೇ ಸ್ವತ್ಛತೆಯಲ್ಲಿ ತೊಡಗಿರುವ ಪೌರಕಾರ್ಮಿರನ್ನು ಗಮನಿಸಿದ ಸಚಿವರು, ಸಫಾಯಿ ಕರ್ಮಚಾರಿಗಳು ಧೂಳು ಹಾಗೂ ಮಲೀನ ಸ್ಥಳಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.
ಆದ್ದರಿಂದ ಅವರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ಮಹಾನಗರ ಪಾಲಿಕೆಯಿಂದ ಒದಗಿಸಿರುವ ಮಾಸ್ಕ್, ಕೈಚೀಲಗಳು, ಬೂಟುಗಳು ಹಾಗೂ ಕಸಬಾರಿಗೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಕಾಂತಾ ಕಾಲೋನಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಯುವ ವಯಸ್ಸಿನ ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರ ನೀಡಬೇಕು. ಈ ವಸತಿ ನಿಲಯದಲ್ಲಿ 100 ವಿದ್ಯಾರ್ಥಿಗಳು ವಾಸವಿದ್ದು, ಅವರಿಗೆ ಕೇವಲ ಮೂರು ಶೌಚಾಲಯಗಳಿವೆ.
ಬಾಡಿಗೆ ಕಟ್ಟಡದಲ್ಲಿರುವ ಈ ವಸತಿನಿಲಯವನ್ನು ಆದಷ್ಟು ಬೇಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಸ್ವಂತ ಕಟ್ಟಡ ಲಭ್ಯವಿಲ್ಲದಿದ್ದಲ್ಲಿ ವಸತಿ ನಿಲಯಕ್ಕೆ ಸ್ಥಳಗುರುತಿಸಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ಮಾದರಿ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ವಸತಿ ನಿಲಯ ನಿರ್ಮಿಸಿಕೊಳ್ಳಬೇಕು. ವಸತಿ ನಿಲಯದಲ್ಲಿರುವ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು ವಸತಿ ನಿಲಯದಲ್ಲಿ ವಾಶಿಸುವ ವಿದ್ಯಾರ್ಥಿಗಳು ವಸತಿ ನಿಲಯವನ್ನು ತಮ್ಮ ಮನೆಯಂತೆ ಭಾವಿಸಿ ನೈರ್ಮಲ್ಯ ಕಾಪಾಡಬೇಕು ಎಂದರು.
ನಗರದ ಹಳೆಯ ಜೇವರ್ಗಿ ರಸ್ತೆಯ ಪಿ ಆ್ಯಂಡ್ ಟಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಸಮಾಜಕಲ್ಯಾಣ ಇಲಾಖೆಯಿಂದ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್., ಬ್ಯಾಂಕಿಂಗ್‌ಗಳಂಥಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಗುರುತಿಸಿರುವ ಕೇಂದ್ರ ಪರಿಶೀಲಿಸಿ, ಈ ಸ್ಥಳದಲ್ಲಿ ತಾತ್ಕಾಲಿಕವಾಗಿ ತರಬೇತಿ ಕೇಂದ್ರ ಪ್ರಾರಂಭಿಸಬೇಕು. ಶಾಶ್ವತವಾಗಿ ತರಬೇತಿ ಕೇಂದ್ರ ನಿರ್ಮಿಸಲು ನಗರದಲ್ಲಿ ನಿವೇಶನ ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯರಾದ ರಾಜಕುಮಾರ ಕಪನೂರ, ರಾಜು ಜಾನಿ, ಗಣ್ಯರಾದ ಗಣೇಶ ವಳಕೇರಿ, ಸಲೀಂ, ಮದರ ಖಾನ್, ಶಿವಕುಮಾರ ಬಾಳಿ, ಸಮಾಜಕಲ್ಯಾಣ ಇಲಾಖೆ ಜಂಟೀ ನಿರ್ದೇಶಕ ಸತೀಶ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
ಮಹೆಬೂಬ ಕಾರಟಗಿ, ಪಾಲಿಕೆ ಪರಿಸರ ಅಧಿಕಾರಿ ಮುನಾಫ್ ಪಟೇಲ್ ಹಾಗೂ ಮತ್ತಿತರರು ಹಾಜರಿದ್ದರು.
ಕಲಬುರಗಿ ಉಸ್ತುವಾರಿ ಸಚಿವರಾದನಂತರ ಪ್ರಥಮ ಬಾರಿಗೆ ನಗರ ಪ್ರದಕ್ಷಿಣೆ ಕೈಗೊಂಡು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ನಗರದಲ್ಲಿ ಹಲವು ವೃತ್ತಗಳಿಗೆ ಮೊದಲಿನಿಂದಲೂ ಸಾಂಪ್ರದಾಯಿಕ ಹೆಸರುಗಳು ರೂಢಿಯಲ್ಲಿವೆ. ಅನ ಧಿಕೃತವಾಗಿ ನಾಮಫಲಕಗಳನ್ನು ಅಳವಡಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು.
ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.