ಸಚಿವ ಚವ್ಹಾಣರಿಂದ ಗ್ರಾಮ ಸಂಚಾರ
Team Udayavani, Oct 29, 2021, 10:44 AM IST
ಔರಾದ: ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸಂಚಾರ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ಗ್ರಾಮಸ್ಥರ ಅಹವಾಲು ಆಲಿಸಿದರು. ಹಂಗರಗ, ನಾಗಮಾರಪಳ್ಳಿ, ವನಮಾರಪಳ್ಳಿ, ಕೊಳ್ಳುರ, ಇಟಗ್ಯಾಳ, ಜಂಬಗಿ, ಕಂದಗೂಳ, ಬಾಬಳಿ, ಎಕಲಾರ, ಶೆಂಬೆಳ್ಳಿ, ಚಟ್ನಾಳ, ಚಿಂತಾಕಿ, ಸಂತಪುರ, ಕೌಠಾ ಬಿ, ಖಾನಾಪೂರ, ವಡಗಾಂವ್ ಸೇರಿದಂತೆ ನಾನಾ ಗ್ರಾಮಸ್ಥರು ಸಚಿವರಿಗೆ ಭೇಟಿ ಮಾಡಿ ತಮ್ಮ ಅಹವಾಲುಗಳ ಅರ್ಜಿ ಸಲ್ಲಿಸಿದರು.
ಗ್ರಾಮದ ರಸ್ತೆಗಳ ದುರಸ್ತಿಗೆ, ವಿದ್ಯುತ್ ಕಂಬ ಸರಿಪಡಿಸಲು, ಕೊಳವೆ ಬಾವಿ ಕೊರೆಯಿಸಲು, ಸಮುದಾಯ ಭವನ ನಿರ್ಮಾಣ ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಆಯಾ ಗ್ರಾಮಸ್ಥರು ಸಚಿವರಿಗೆ ಸಲ್ಲಿಸಿದರು.
ಚಟ್ನಾಳದಿಂದ ಚಂದ್ರಮಹಾರಾಜ ತಾಂಡಾವರೆಗೆ 4 ಕಿ.ಮೀ. ರಸ್ತೆಯನ್ನು ನಿರ್ಮಿಸಲು, ಚಟ್ನಾಳ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯವರಿಗೆ ಸಮುದಾಯ ಭವನ ನಿರ್ಮಾಣ ಕೋರಿ ಚಟ್ನಾಳ ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಬಂಡೆಪ್ಪ ಕಂಠೆ, ವಸಂತ ವಕೀಲ, ಸಚಿನ್ ರಾಟೋಡ್, ಶ್ರೀನಿವಾಸ ಖೂಬಾ, ಸುರೇಶ ಬೋಸ್ಲೆ, ಶ್ರೀರಾಮ ನರೋಟೆ, ಕೆರಬಾ ಪವಾರ, ಸಂತೋಷ ಪೋಕಲವಾರ, ಶೇಷರಾವ್ ಕೋಳೆ, ಪ್ರಕಾಶ ಮೇತ್ರೆ, ಹನುಮಂತ ಸುರನಾರ, ರಮೇಶ ಬಿರಾದಾರ, ಖಂಡೋಬಾ ಕಂಗಟೆ, ವೀರೇಂದ್ರ ರಾಜಾಪುರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.