ವಡಗೇರಾದಲ್ಲಿ ಶಾಸಕ ಡಾ| ಅಜಯಸಿಂಗ್ ಗ್ರಾಮ ವಾಸ್ತವ್ಯ
ವಡಗೇರಾದಲ್ಲಿ ಚರಂಡಿ ವ್ಯವಸ್ಥೆ, ಸಿಸಿ ರಸ್ತೆಗಳು ಬೇಕೆಂದು ಹಿರಿಯರು ಬೇಡಿಕೆ ಇಟ್ಟರು.
Team Udayavani, Mar 1, 2021, 5:41 PM IST
ಕಲಬುರಗಿ: ಜೇವರ್ಗಿ ಮತಕ್ಷೇತ್ರದ ಶಾಸಕ ಡಾ| ಅಜಯಸಿಂಗ್ ಯಡ್ರಾಮಿ ತಾಲೂಕಿನ ವಡಗೇರಾದಲ್ಲಿ ರವಿವಾರ ಗ್ರಾಮವಾಸ್ತವ್ಯ ಮಾಡಿದರು. ಶಾಸಕರನ್ನು ವಾದ್ಯಮೇಳಗಳೊಂದಿಗೆ ಬರಮಾಡಿಕೊಂಡ ಗ್ರಾಮಸ್ಥರು, ಗ್ರಾಮದ ಪ್ರದಕ್ಷಿಣೆ ಮಾಡಿಸಿದರು. ಈ ವೇಳೆ ಶಾಸಕರು ಗ್ರಾಮಸ್ಥರ ಸುಖದುಃಖ ಆಲಿಸಿದರು.
ನಿಮ್ಮ ಸಮಸ್ಯೆ ಆಲಿಸಲಿಕ್ಕೆ ಬಂದಿರುವೆ: ತಾವು ಗ್ರಾಮ ವಾಸ್ತವ್ಯ ಮಾಡುತ್ತಿರುವ ಉದ್ದೇಶವೇ ಜನರೊಂದಿಗೆ ನೇರವಾಗಿ ಸಂಪರ್ಕಿಸಿ ಸಮಸ್ಯೆಗಳನ್ನು
ಆಲಿಸುವುದೇ ಆಗಿದೆ. ಕಳೆದ ಬಾರಿ ತಮ್ಮ ಜನ್ಮದಿನದಂದು ಜೇರಟಗಿ ಯಿಂದ ಆರಂಭಿಸಿದ ಗ್ರಾಮ ವಾಸ್ತವ್ಯ ಈಗ ವಡಗೇರಾಗೆ ಬಂದಿದೆ. ಇದು
ಹಾಗೆ ಮುಂದುವರೆಯಲಿದೆ ಎಂದರು. ಊರಿನ ಹಿರಿಯರಾದ ತಿರುಪತಿದೇಸಾಯಿ, ಬಾಪುಗೌಡ ಪಾಟೀಲ, ಶಂಕರಗೌಡ ಪೊಲೀಸ್ ಪಾಟೀಲ, ಮೌಲಾಲಿ ಮೆಣಸಿನಕಾಯಿ, ಗ್ರಾಪಂ ಅಧ್ಯಕ್ಷ ಹಸನಪ್ಪ ಚಲವಾದಿ, ಉಪಾಧ್ಯಕ್ಷ ಅಣ್ಣಾರಾಯ ಗೌಡ ಶಾಸಕರನ್ನು ಸ್ವಾಗತಿಸಿದರು.
ಶಾಂತಪ್ಪ ಕುಂಬಾರ ಮನೆಯಲ್ಲಿ ವಾಸ್ತವ್ಯ:
ಶಾಸಕ ಡಾ| ಅಜಯಸಿಂಗ್ ವಡಗೇರಾದ ಕುಂಬಾರ ಸಮಾಜಕ್ಕೆ ಸೇರಿದ ಶಾಂತಪ್ಪ ಕುಂಬಾರ ಅವರ ಮನೆಯಲ್ಲಿ ಜೋಳದ ರೊಟ್ಟಿ, ಕಾಳುಪಲ್ಯೆ, ಹುಗ್ಗಿ, ಅನ್ನ, ಸಾಂಬಾರ್ ಊಟ ಮಾಡಿ, ವಾಸ್ತವ್ಯ ಮಾಡಿದರು. ನಂತರ ಸೇರಿದ್ದ ಜನರೊಂದಿಗೆ ಉದ್ದೇಶಿಸಿ ಮಾತನಾಡಿದ ಶಾಸಕರು, ಗ್ರಾಮಗಳನ್ನೆಲ್ಲ ಸುವರ್ಣ ಗ್ರಾಮಗಳನ್ನಾಗಿ ಮಾಡಲಾಗದು. ಆದರೆ ಅಲ್ಲಿನ ಜನರ ಬವಣೆಗಳನ್ನು ನೀಗಿಸುವ ಪ್ರಾಮಾಣಿಕ ಕೆಲಸವನ್ನು ತಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.
ವಡಗೇರಾದಲ್ಲಿ ಚರಂಡಿ ವ್ಯವಸ್ಥೆ, ಸಿಸಿ ರಸ್ತೆಗಳು ಬೇಕೆಂದು ಹಿರಿಯರು ಬೇಡಿಕೆ ಇಟ್ಟರು. ನಂತರ ಸಾರ್ವಜನಿಕ ಅಹವಾಲು ಸಭೆ ನಡೆಯಿತು. ಆನಂದ
ಆಶ್ರಮದ ವೀರಯ್ಯ ಮಹಾಸ್ವಾಮಿಗಳು, ಯಡ್ರಾಮಿ ತಹಶೀಲ್ದಾರ್ ಶಾಂತಗೌಡ ಬಿರಾದಾರ ಉಸ್ತುವಾರಿ ವಹಿಸಿದ್ದರು.
ಜಿಪಂ ಸದಸ್ಯ ಬಂಡೆಪ್ಪ ಸಾಹು, ತಾಪಂ ಸದಸ್ಯ ಅನಿತಾ, ಸುರೇಖಾ, ಶಾಂತಪ್ಪ ಕೋಡ್ಲಿ ಇಜೇರಿ, ಮಲ್ಲಣ್ಣಗೌಡ, ಪ್ರಶಾಂತ, ಅಮೃತಗೌಡ ಪಾಟೀಲ,
ಸೇರಿದಂತೆ ಮಳ್ಳಿ, ಹಂಗರಗಾ, ವಡಗೇರಾ, ಮಾಗಣಗೇರಾ, ಬಳಬಟ್ಟಿ ರೈತರು, ಸಾರ್ವಜನಿಕರು, ಮಹಿಳೆಯರು ತಮ್ಮ ಅಹವಾಲುಗಳನ್ನು ಶಾಸಕರಿಗೆ ಸಲ್ಲಿಸಿದರು.
ಹಂಗರಗಿ ಗ್ರಾಮಕ್ಕೆ ಕುಡಿಯುವ ನೀರು ಘಟಕ
ಹಂಗರಗಿ ಜನರು ಸಭೆಯಲ್ಲಿ ಮಾತನಾಡಿ ಊರಲ್ಲಿ ನೀರು ಕುಡಿಯಲು ಯೋಗ್ಯವಿಲ್ಲ ಎಂದು 2010ರಲ್ಲೇ ವರದಿ ನೀಡಲಾಗಿದೆ. ತಕ್ಷಣ ಶುದ್ಧ ಕುಡಿಯುವ ನೀರು ಘಟಕ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು, ಸಮಸ್ಯೆಗೆ ಸ್ಪಂದಿಸಿದ ಶಾಸಕರು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಯೋಜನೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.
ಅಕ್ರಮ ಮದ್ಯ ದೂರು ಬಂದ್ರೆ ಸಹಿಸೋದಿಲ್ಲ
ಸಭೆಯಲ್ಲಿ ಅನೇಕರು ತಮ್ಮೂರಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದೆ. ತಕ್ಷಣ ನಿಲ್ಲಿಸಿರಿ ಎಂದು ಕೋರಿದಾಗ, ಶಾಸಕರು ಅಲ್ಲೇ ಇದ್ದ ಅಬಕಾರಿ ಇಲಾಖೆ ಅಧಿ ಕಾರಿಯನ್ನು ಕರೆದು ಇಂತಹ ದೂರುಗಳು ಮತ್ತೆ ಕೇಳಿ ಬರದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.