ಈಶಾನ್ಯದಲ್ಲಿ ಮತ್ತೆ ಅರಳುತ್ತೆ ಕಮಲ
Team Udayavani, Oct 27, 2020, 3:23 PM IST
ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಯಲ್ಲಿ 18 ಶಾಸಕರು ಹಾಗೂ ಐವರು ಸಂಸದರು ಜತೆಗೆ ಸರ್ಕಾರ ಇರೋದಿರುವುದರಿಂದ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಅಶ್ವಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ 20 ಮತದಾರರಿಗೆ ಒಬ್ಬ ಘಟ ನಾಯಕನನ್ನು ನಿಯೋಜಿಸಲಾಗಿದೆ. ಮತದಾರರನ್ನು ಎ,ಬಿ ಹಾಗೂ ಸಿ ಎಂದು ವಿಂಗಡಿಸಲಾಗಿದೆ. ಎಎಂದರೆ ಬಿಜೆಪಿ ಪರ ಇದ್ದವರು, ಸಮಾನಾಂತರಕಾಪಾಡಿದವರನ್ನು ಬಿ ವರ್ಗದವರೆಂದು ಹಾಗೂ ಪಕ್ಷದ ಒಲವು ಹೊಂದದೇ ದೂರ ಇದ್ದವರನ್ನು ಸಿಎಂದು ವರ್ಗೀಕರಿಸಲಾಗಿದೆ. ಬಿ ವರ್ಗದವರನ್ನುಪಕ್ಷದ ಪರ ವಾಲಿಸಲು ಕಸರತ್ತು ನಡೆದಿದೆ ಎಂದರು.
ಬಿಜೆಪಿ ಈ ಚುನಾವಣೆಯನ್ನು ಸವಾಲಾಗಿಸ್ವೀಕರಿಸಿದೆ. ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಈಗಾಗಲೇ ಪಕ್ಷದ ಹಿರಿಯ ನಾಯಕ ಹಾಗೂಸಚಿವರಾದ ಕೆ.ಎಸ್. ಈಶ್ವರಪ್ಪ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲು ಪ್ರಚಾರಗೈದು ಮತಯಾಚಿಸಿದ್ದಾರೆ. ಕಳೆದ ಸಲಚುನಾವಣೆಯಲ್ಲಿ ನಮ್ಮಿಂದ ತಪ್ಪಾಗಿದ್ದರಿಂದ ಸೋಲಾಗಿದೆ. ಆದರೆ, ಈ ಸಲ ಮತದಾರ ಕೈ ಹಿಡಿಯಲಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಸದಾ ಬದ್ಧವಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಬಿಜೆಪಿ ಅಭ್ಯರ್ಥಿ ಶಶಿಲ್ ಜಿ. ನಮೋಶಿ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 1,757 ಶಾಲಾ-ಕಾಲೇಜುಗಳಿಗೆ ಅನುದಾನ ನೀಡಲಾಗಿದೆ. ಅದೇ ರೀತಿ ಹೊಸದಾಗಿ 204 ಪದವಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. 1203 ಪಿಯು ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಉಪನ್ಯಾಸಕರಿಗೆ 840 ಕೋ.ರೂ ಅರಿಯರ್ಸ್ ನೀಡಲಾಗಿದೆ ಎಂದು ವಿವರಣೆ ನೀಡಿದರು.
ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿ, ಶಿಕ್ಷಕರೊಂದಿಗೆ ಸದಾ ಒಡನಾಟ ಇರುವ ನಮೋಶಿ ಅವರೇ ಶಿಕ್ಷಕರ ಸೂಕ್ತ ಪ್ರತಿನಿಧಿಯಾಗಿದ್ದಾರೆ. ಅದಲ್ಲದೇ 2020 ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆಯಾಗುವಲ್ಲಿ ಶಿಕ್ಷಕರಿಗೆ ಪ್ರಾಮುಖ್ಯತೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಜಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಮುಖಂಡರಾದ ಚಂದು ಪಾಟೀಲ್ ಸೇರಿದಂತೆ ಮುಂತಾದವರಿದ್ದರು.
ಕೋವಿಡ್ ಲಾಕ್‌ಡೌನ್‌ದಿಂದ ದೇಶದ ಹಲವು ರಾಜ್ಯಗಳಲ್ಲಿ ಶಿಕ್ಷಕರ ವೇತನ ಕಡಿತ ಮಾಡಿದ್ದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಯಾಪೈಸೆ ವೇತನ ಕಡಿತ ಮಾಡಿಲ್ಲ. ಒಟ್ಟಾರೆ ಬಿಜೆಪಿ ಸರ್ಕಾರ ಶಿಕ್ಷಕರ ಪರವಿದೆ. -ಶಶಿಲ್ ಜಿ. ನಮೋಶಿ, ಬಿಜೆಪಿ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.