ಮುಂಗಾರು: 5.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
Team Udayavani, May 23, 2017, 4:54 PM IST
ಕಲಬುರಗಿ: ಇನ್ನೂ ಬೇಸಿಗೆ ಬಿಸಿಲು ಕಡಿಮೆಯಾಗಿಲ್ಲ.. ಧಗೆಗೆ ರೈತರ ಬೆವರು ತಣಿದಿಲ್ಲ.. ಆಗಲೇ ಮುಂಗಾರಿನ ಸಿದ್ದತೆಗಳು ಜಿಲ್ಲೆಯಲ್ಲಿ ಶುರುವಾಗಿವೆ. ಒಂದೆಡೆ ರೈತಣ್ಣ ಮುಂಗಾರಿಗೆ ಭೂಮಿ ಹದ ಮಾಡಿಕೊಂಡು ಮುಗಿಲು ನೋಡುತ್ತಿರುವಾಗಲೇ ಕೃಷಿ ಇಲಾಖೆ ಕೂಡ ಮುಂಗಾರಿನ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಹವಾಮಾನ ಇಲಾಖೆ ಲೆಕ್ಕಾಚಾರದಂತೆ ಈ ಬಾರಿ ಕರ್ನಾಟಕಕ್ಕೆ ಜೂನ್ ಮೊದಲ ವಾರ ಅಂದ್ರೆ 2-3ಕ್ಕೆ ಮುಂಗಾರು ಪ್ರವೇಶ ಆಗಲಿದೆ. ಅದರಂತೆ ಜೂನ್ 7 ಅಥವಾ 8ಕ್ಕೆ ಜಿಲ್ಲೆಗೆ ಪ್ರವೇಶ ಆಗಲಿದೆ. ಇನ್ನೊಂದೆಡೆ ಹವಾಮಾನ ಇಲಾಖೆಯಂತೆ ಮುಂಗಾರು ಈಗಾಗಲೇ ಕೇರಳ ಮುತ್ತಿದೆ. ಇನ್ನೊಂದು ವಾರದಲ್ಲಿ ಕರ್ನಾಟಕವನ್ನು ಅಧಿಕೃತವಾಗಿ ಪ್ರವೇಶ ಮಾಡಲಿದೆ. ಬಳಿಕ ಕಲಬುರಗಿ ಜಿಲ್ಲೆಗೆ ಅದು ಜೂನ್ 7ಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಆದ್ದರಿಂದ ಕೃಷಿ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿ ಕುಳಿತಿದೆ.
5.69 ಲಕ್ಷ ಹೆಕ್ಟೇರ್ ಗುರಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 5.69 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಅದರಲ್ಲಿ ಪ್ರಮುಖವಾಗಿ ತೊಗರಿ ಕ್ಷೇತ್ರ 3.60 ಲಕ್ಷ ಹೆಕ್ಟೇರ್ ಇದೆ. ಉದ್ದು 25 ಸಾವಿರ ಹೆಕ್ಟೇರ್, ಹೆಸರು 35 ಸಾವಿರ ಹೆಕ್ಟೇರ್, ಅಲಸಂಧಿ 100 ಹೆಕ್ಟೇರ್, ಅವರೆ 150, ಮಟಕಿ 100, ಸೋಯಾಬೀನ್ 15 ಸಾವಿರ,
ಸೂರ್ಯಕಾಂತಿ 16,550 ಹೆಕ್ಟೇರ್ (ನೀರಾವರಿ ಸೇರಿ), ಶೇಂಗಾ, ಔಡಲ, ಗುರೆಳ್ಳು, ಕಬ್ಬು 27 ಸಾವಿರ, ಹತ್ತಿ 48 ಸಾವಿರ ಹೆಕ್ಟೇರ್ (ನೀರಾವರಿ ಸೇರಿ) ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. 5.69 ಲಕ್ಷದಲ್ಲಿ 75 ಸಾವಿರ ಹೆಕ್ಟೇರ್ ಭೂಮಿಯಲ್ಲಿ ವಾಣಿಜ್ಯ ಬೆಳೆ ಬೆಳೆಯಲು ನಿರ್ಧರಿಸಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ.
22 ಸಾವಿರ ಕ್ವಿಂಟಲ್ ಬೀಜ: ಜಿಲ್ಲೆಯಲ್ಲಿ ಮುಕ್ತ ಮಾರುಕಟ್ಟೆ ಮತ್ತು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಸದ್ಯ 6 ಸಾವಿರ ಕ್ವಿಂಟಲ್ ವಿವಿಧ ಬೀಜಗಳ ದಾಸ್ತಾನು ಇದೆ. ಆದರೆ, ಜಿಲ್ಲೆಗೆ ಒಟ್ಟು 22 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ.
ಈ ಕುರಿತು ಸರಕಾರಕ್ಕೆ ಅಂದಾಜು ಬೇಡಿಕೆ ಸಲ್ಲಿಸಲಾಗಿದೆ. ಬೇಡಿಕೆಯಷ್ಟು ಬೀಜ ಪೂರೈಸಲು ಒಪ್ಪಿಗೆಯೂ ಸಿಕ್ಕಾಗಿದೆ. ಮಳೆಯಾಗುತ್ತಿದ್ದಂತೆ ಹಂತ ಹಂತವಾಗಿ ಬೀಜಗಳು ರೈತ ಸಂಪರ್ಕ ಕೇಂದ್ರಕ್ಕೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ ಇರಲಿವೆ.
1.20 ಲಕ್ಷ ಮೆ.ಟನ್ ರಸಗೊಬ್ಬರ: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಒಟ್ಟು 1.20 ಲಕ್ಷ ಮೆಟ್ರಿಕ್ ಟನ್ ರಸ ಗೊಬ್ಬರದ ಅವಶ್ಯಕತೆ ಇದೆ. ಈಗಾಗಲೇ ಕೃಷಿ ಇಲಾಖೆ ಗೋದಾಮುಗಳಲ್ಲಿ 42 ಸಾವಿರ ಮೆಟ್ರಿಕ್ ಟನ್ ರಸ ಗೊಬ್ಬರವಿದೆ.
ಅದಲ್ಲದೆ, ಈಗಾಗಲೇ 66 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದು ಹಂತ ಹಂತವಾಗಿ ಜಿಲ್ಲೆಗೆ ಪೂರೈಕೆಯಾಗಲಿದೆ. ಡಿಐಪಿ, ಯೂರಿಯಾ ಸೇರಿದಂತೆ ಇನ್ನೂ ಹಲವರು ರಸ ಗೊಬ್ಬರಗಳು ಖಾಸಗಿ ಮಾರಾಟ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗಲಿದೆ.
ಜಲ ಜಾಗೃತಿ ವರ್ಷ ಆಚರಣೆ
ಈ ವರ್ಷವನ್ನು ಜಲ ಜಾಗೃತಿ ವರ್ಷ ಎಂದು ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ ಎಲ್ಲ ಮೂಲಗಳಿಂದ ನೀರು ಸಂಗ್ರಹಣೆ, ಬಳಕೆ ಮತ್ತು ಇತರೆ ಮೂಲಗಳ ಸಂರಕ್ಷಣೆ ಮಾಡುವುದರ ಕುರಿತು ರೈತರಲ್ಲಿ ಜಾಗೃತಿ ಉಂಟು ಮಾಡಲು ಯೋಜಿಸಲಾಗಿದೆ. ಅಲ್ಲದೆ, ಮುಂಗಾರಿನ ಚಟುವಟಿಕೆಗಳಿಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಗಾರು ಉತ್ತಮವಾಗಿರುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅದರಂತೆ ಜೂನ್ 7-8ಕ್ಕೆ ಜಿಲ್ಲೆಗೆ ಮುಂಗಾರು ಆಗಮಿಸಲಿದೆ. ಬೀಜ, ರಸಗೊಬ್ಬರ ಎಲ್ಲವನ್ನು ಸಜ್ಜಾಗಿ ಇಡಲಾಗಿದೆ. ಬೇಡಿಕೆಯಷ್ಟು ಸರಬರಾಜು ಮಾಡಲು ಸರಕಾರಕ್ಕೆ ಮನವಿ ಮಾಡಲಾಗಿದೆ.
-ಜಿಲಾನಿ ಮೋಕಾಶಿ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.