ಮೋತಕಪಲ್ಲಿ: ನಾಳೆ ಬಲಭೀಮನ ಜಾತ್ರೆ
Team Udayavani, Dec 21, 2018, 4:20 PM IST
ಸೇಡಂ: ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದ ಪ್ರತಿಷ್ಠಿತ ಮತ್ತು ಜನಸಾಮಾನ್ಯರ ಆರಾಧ್ಯದೈವ ಐತಿಹಾಸಿಕ ಸುಕ್ಷೇತ್ರ ಮೋತಕಪಲ್ಲಿ ಶ್ರೀ ಬಲಭೀಮಸೇನ ಜಾತ್ರೆಗೆ ಇಡೀ ಗ್ರಾಮ ಸಜ್ಜಾಗಿದೆ. ಡಿ. 22ರಂದು ಮಧ್ಯರಾತ್ರಿ 12:10ಕ್ಕೆ ನಡೆಯುವ ಗಜೋತ್ಸವಕ್ಕೆ (ಹೂವಿನ ತೇರು) ದೇವಾಲಯ ಕಮಿಟಿ ತಯಾರಿ ನಡೆಸಿದೆ. 1200 ವರ್ಷಗಳ ಇತಿಹಾಸ ಹೊಂದಿರುವ ಬಲಭೀಮಸೇನ ದೇವರಿಗೆ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಪೂಜೆಗಳು, ಸೇವೆಗಳು ಇಲ್ಲಿಯೂ ಸಲ್ಲುವುದು ವಿಶೇಷ. ತಿರುಪತಿಯಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಗಳು ಅದೇ ದಿನ, ಅದೇ ಸಮಯಕ್ಕೆ ಬಲಭೀಮಸೇನನಿಗೂ ಅರ್ಪಿಸಲಾಗುತ್ತದೆ. ಇತಿಹಾಸ ಕೆದಕಿದರೆ ತಿರುಪತಿ ಹೆಬ್ಟಾಗಿಲು ಸೇಡಂ ತಾಲೂಕಿನ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಾಲಯ ಎಂಬ ಅಂಶ ಅರಿಯಬಹುದಾಗಿದೆ.
11 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಿ ಪುಷ್ಕರಣಿಯಲ್ಲಿ ಮಿಂದೆದ್ದು, ದೇವರ ದರ್ಶನ ಪಡೆಯುತ್ತಿದ್ದಾರೆ. ಪಲ್ಲಕ್ಕಿ ಉತ್ಸವ, ಕುದುರೆ ಉತ್ಸವ, ನವಿಲು ಉತ್ಸವ, ಸಿಂಹ ಉತ್ಸವ, ಅಂಬಾರಿ ಉತ್ಸವ, ಮಾವಿನತೇರು ಉತ್ಸವ, ಗಜ ಸೇವೆಗಳು ನಡೆಯುತ್ತಿವೆ.
ನ್ಯಾಯಮೂರ್ತಿಗಳು ವಿಶೇಷ ಭಕ್ತರು: ದೇವಾಲಯಕ್ಕೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರ ರಾಜ್ಯಗಳ ವಿವಿಧ ನ್ಯಾಯಾಲಯಗಳ ನ್ಯಾಯಮೂರ್ತಿಗಳು ಬಲಭೀಮಸೇನ ದೇವರ ವಿಶೇಷ ಭಕ್ತರಾಗಿರುವುದು ಇಲ್ಲಿನ ಮತ್ತೂಂದು ವಿಶೇಷ. ಅನೇಕರು ತಮ್ಮ ಸ್ಥಾನ ಅಲಂಕರಿಸುವ ಮುನ್ನ ಇಷ್ಟ ದೇವರ ಪೂಜೆ ನೆರವೇರಿಸಿಯೇ ಕಾರ್ಯ ಮುಂದುವರಿಸಿರುವುದನ್ನು ಇಲ್ಲಿನ ಜನರಿಂದ ಅರಿಯಬಹುದಾಗಿದೆ. ಅಲ್ಲದೆ ರಾಜಕಾರಣಿಗಳು ಸಹ ತಮ್ಮ ಕಾರ್ಯಕ್ಕೂ ಮುನ್ನ ಬಲಭೀಮಸೇನ ದೇವರ ಆಶೀರ್ವಾದ ಪಡೆಯುತ್ತಾರೆ.
ಜಾತ್ರೆಗೆ ತೆರಳಲು ಸೇಡಂ ಮತ್ತು ಗುರುಮಠಕಲ್ಲ, ಯಾದಗಿರಿ, ನಾರಾಯಣಪೇಟ ಮತ್ತು ಕೊಡಂಗಲದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಸುಕ್ಷೇತ್ರ ಮೋತಕಪಲ್ಲಿ ನಾರದರಿಗೆ ಬಂದಿದ್ದ ಸಂಕಷ್ಟ ನೀಗಿಸಿದಂತ ಸ್ಥಳವಾಗಿದೆ. ತಿರುಪತಿ ಪೂರ್ವ ದ್ವಾರವಾಗಿರುವ ಶ್ರೀ ಬಲಭೀಮಸೇನ ದೇವಾಲಯಕ್ಕೆ ತಿರುಮಲ ತಿಮ್ಮಪ್ಪನ ದರ್ಶನಕ್ಕೂ ಮೊದಲು ಬರುವ ವಾಡಿಕೆ ಇದೆ. ದೇವರ ಮಹಿಮೆ ಸ್ಕಂದ ಪುರಾಣದಲ್ಲಿ ದಾಖಲಾಗಿದೆ. ದೇವಾಲಯದ ಒಳಗಿರುವ ಮೂಲ ಮೂರ್ತಿ ಸ್ವಯಂಭೂ ಆಗಿದೆ.
ಗುರುರಾಜಾಚಾರ್ಯ ಪೂಜಾರಿ ಅರ್ಚಕರು, ಮೋತಕಪಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.