ಮಾತೃಭಾಷೆ ಸಾಂಸ್ಕೃತಿಕ ಅನನ್ಯತೆ ಕುರುಹು
Team Udayavani, Mar 8, 2018, 1:00 PM IST
ಕಲಬುರಗಿ: ಮಾತು ಎಂಬುದು ದೇವರು ಯಾವ ಜೀವಿಗೂ ನೀಡದೆ, ಮನುಷ್ಯನಿಗೆ ಮಾತ್ರ ನೀಡಿದ ವಿಶೇಷ ವರವಾಗಿದೆ. ಮನುಷ್ಯ ತನ್ನಲ್ಲಿರುವ ಯಾವುದೇ ಅಂಶಗಳನ್ನು ಅಭಿವ್ಯಕ್ತಿಪಡಿಸಲು ಭಾಷೆ ತುಂಬಾ ಅಗತ್ಯವಾಗಿದೆ. ರಕ್ತ
ಸಂಬಂಧದಿಂದ ಹುಟ್ಟಿ ಬೆಳೆಯುವ ಸಂಸ್ಕೃತಿಯನ್ನು ಮಾತೃ ಭಾಷೆ ಪ್ರತಿನಿಧಿಸುತ್ತದೆ ಎಂದು ಉಪನ್ಯಾಸಕ ಹಾಗೂ
ಚಿಂತಕ ಎಚ್.ಬಿ. ಪಾಟೀಲ ಹೇಳಿದರು.
ನಗರದ ಸಾಯಿ ಮಂದಿರ ಸಮೀಪದಲ್ಲಿರುವ ಕೊಹಿನೂರ ವಾಣಿಜ್ಯ ಪದವಿ ಕಾಲೇಜಿನಲ್ಲಿ ವಿಶ್ವ ಮಾತೃಭಾಷೆ
ದಿನಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ‘ಫೆಬ್ರುವರಿ 21’ನ್ನು, ವಿಶ್ವಮಾತೃ ಭಾಷಾ ದಿನವನ್ನಾಗಿ ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಬಹುಭಾಷೆ ಮತ್ತು ಬಹು ಸಂಸ್ಕೃತಿ ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಆಚರಣೆ ಮಾಡಲಾಗುತ್ತದೆ.
1999ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು. ಇದರ ಮುಂದುವರಿದ ಭಾಗವಾಗಿ 2008ನ್ನು
‘ವಿಶ್ವ ಭಾಷೆಗಳ ವರ್ಷ’ ಎಂದು ಆಚರಿಸಿತು. 2000ನೇ ಇಸ್ವಿಯಿಂದ ಪ್ರತಿವರ್ಷ ‘ವಿಶ್ವ ಮಾತೃ ಭಾಷೆ ದಿವಸ’ ಆಚರಿಸಲಾಗುತ್ತಿದೆ. 1952ರಲ್ಲಿ ಅಂದಿನ ಪಾಕಿಸ್ತಾನವಾಗಿದ್ದ ಇಂದಿನ ಬಾಂಗ್ಲಾ ದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ವಿದ್ಯಾರ್ಥಿಗಳು ಹುತಾತ್ಮರಾದ ನೆನಪಿಗೆ ಈ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಆಡಳಿತಾಧಿಕಾರಿ ಪ್ರಕಾಶ ರೋಳೆ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ಉನ್ನತವಾದ ಸಾಧನೆ ಮಾಡಿದ್ದಾರೆ. ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು. ಆದ್ದರಿಂದ ಮಾತೃಭಾಷೆ ಯಾವಾಗಲೂ ಕೂಡ ಶ್ರೇಷ್ಠವಾಗಿದೆ ಎಂದು ಹೇಳಿದರು.
ಉಪನ್ಯಾಸಕರಾದ ಮುರುಗೇಶ ಕುಸನೂರ, ಹರೀಶ, ಮನೀಶಾ ಪಾಟೀಲ, ಚಂದ್ರಪ್ರಭಾ, ಅರುಣಕುಮಾರ
ರಾಠೊಡ, ಅರುಣಕುಮಾರ ಚವ್ಹಾಣ, ವಿಕ್ರಮ ನವಸೇನ, ಮುರುಗೇಶ, ಶಿಲ್ಪಾ ಕೆ., ಶಿವಕುಮಾರ ಗೋಣಗಿಕರ್, ಜ್ಯೋತಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.