ಮಾ.23ರಂದು ಮತ್ತೂಮ್ಮೆ ಆಂದೋಲನ
Team Udayavani, Jan 29, 2018, 11:20 AM IST
ಕಲಬುರಗಿ: ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸುವ ಸರಿಯಾದ ಯೋಜನೆ ರೂಪಿಸುವುದು, 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ 5 ಸಾವಿರ ರೂ. ಮಾಸಾಶನ ನೀಡುವುದು ಸೇರಿದಂತೆ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಆಗ್ರಹಿಸಿ ಮಾ.23ರಿಂದ ನವದೆಹಲಿ ರಾಮಲೀಲಾ ಮೈದಾನದಲ್ಲಿ ಮತ್ತೂಂದು ಸುತ್ತಿನ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಭೃಷ್ಟಾಚಾರ ವಿರೋಧಿ ಹೋರಾಟದ ರೂವಾರಿ ಅಣ್ಣಾ ಹಜಾರೆ ಹೇಳಿದರು.
ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹೈದ್ರಾಬಾದ್ ಕರ್ನಾಟಕ ರೈತ ಸಂಘ ರವಿವಾರ ಆಯೋಜಿಸಿದ್ದ ರೈತ ಜಾಗೃತಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಡಾ.ಸ್ವಾಮಿನಾಥ್‌ನ ವರದಿ ಯಥಾವತ್ತಾಗಿ ಜಾರಿಗೊಳಿಸುವುದು, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಕಲ್ಪಿಸುವುದು ಹಾಗೂ ರೈತರಿಗೆ ಮಾಸಾಶನ ಸೇರಿದಂತೆ ಇತರ ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತದೆ ಎಂದು ಬಲವಾಗಿ ನಂಬಲಾಗಿತ್ತು. ಆದರೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಕಣ್ಣೆತ್ತಿ ನೋಡದೇ ಇರುವುದರಿಂದ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಆಂದೋಲನಕ್ಕೆ ಇಳಿಯಲಾಗುತ್ತಿದೆ ಎಂದರು.
ಆಂದೋಲನದ ಅಂಗವಾಗಿ ಈಗಾಗಲೇ ದೇಶದಾದ್ಯಂತ ಸಂಚರಿಸಲಾಗುತ್ತಿದೆ. ಈಗಾಗಲೇ 18 ರಾಜ್ಯಗಳಲ್ಲಿ ಪ್ರವಾಸ ಮಾಡಿ, ರೈತರನ್ನು ಸಂಘಟಿಸಲಾಗಿದೆ. ಐತಿಹಾಸಿಕ ಎನ್ನುವಂತೆ ರಾಮಲೀಲಾ ಮೈದಾನದಲ್ಲಿ ಹೋರಾಟಕ್ಕೆ
ಧುಮುಕಲಾಗುವುದು. ರೈತರ ಶಕ್ತಿ ಏನೆಂಬುದನ್ನು ಕೇಂದ್ರಕ್ಕೆ ಚುರುಕು ಮುಟ್ಟಿಸಲಾಗುವುದು.
22 ವರ್ಷಗಳಲ್ಲಿ 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಒಬ್ಬನೇ ಒಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಉದ್ಯಮಗಳಿಗೆ ನೆರವು ನೀಡುವ ಸರ್ಕಾರಗಳು ರೈತರ ನೆರವಿಗೆ ಏಕೆ ಮುಂದಾಗುವುದಿಲ್ಲ? ಪ್ರಧಾನಿ ಮೋದಿ ಅವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತಾರೆ ಹಾಗೂ ರೈತರ ಬವಣೆಗೆ ಸ್ಪಂದಿಸುತ್ತಾರೆ ಎಂದು ನಂಬಿ ಎಲ್ಲರೂ ಬೆಂಬಲಿಸಿದ್ದಾರೆ. ಆದರೆ 15 ರೂ. ಸಹ ಜೇಬಿಗೆ ಹಾಕಿಲ್ಲ ಎಂದರು.
ಮನುಷ್ಯ ಎಂದಾದ ಮೇಲೆ ಆಚಾರ, ವಿಚಾರ ಶುದ್ಧವಾಗಿರುವುದರ ಜತೆಗೆ ತ್ಯಾಗಮಯಿವಾಗಿರಬೇಕು. ನಿಷ್ಕಂಕಳಕ, ಮನಸ್ಸು ಹೊಂದಿ ಮುನ್ನಡೆದರೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ರಾಳೆಗಾಂವ ಸಿದ್ದಿಯಲ್ಲಿ ಕೈಗೊಳ್ಳಲಾದ ಮಾದರಿ ಕೃಷಿ ಕಾಯಕದ ಬಗ್ಗೆ ವಿವರಣೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.