ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?: ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ್ ತರಾಟೆ
Team Udayavani, Jan 17, 2022, 1:05 PM IST
ಕಲಬುರಗಿ: ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಮಾಡುತ್ತಿರುವುದನ್ನು ನೋಡಿದರೆ ಲೋಕೋಪಯೋಗಿ ಇಲಾಖೆಯನ್ನು ಪ್ರೈವೇಟ್ ಕಂಪನಿ ಎಂದು ತಿಳಿದುಕೊಂಡಿದ್ದೀರಾ? ಎಂದು ಸಂಸದ ಡಾ. ಉಮೇಶ ಜಾಧವ್ ಖಾರವಾಗಿ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೇಂದ್ರದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿ ಎಲ್ಲ ಟೆಂಡರ್ ಗಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು.
ಚಿತ್ತಾಪುರ ತಾಲೂಕಿನ ಯಾಗಾಪುರದಲ್ಲಿ ಆಗಿರುವ ಟೆಂಡರ್ ಯಾಕೆ ರದ್ದು ಮಾಡಿದ್ದೀರಿ? ಲೆಸ್ ಹೋಗಿದ ಮಾತ್ರಕ್ಕೆ ರದ್ದು ಮಾಡುವುದಾದರೆ ಇದು ಯಾವ ನ್ಯಾಯ? ಹೆಚ್ಚುವರಿ ಮೊತ್ತದ ಕಾಮಗಾರಿಯೆ ಮಾಡಬೇಕೆಂಬ ನಿಯಮ ಬಂದಿದೆಯಾ? ಟೆಂಡರ್ ಇಲ್ಲದೆಯೇ ಕಾಮಗಾರಿ ನಡೆಯುತ್ತಿವೆ. ಟೆಂಡರ್ ಆಗಿ ಹಲವು ತಿಂಗಳಾದರೂ ಕಾಮಗಾರಿ ಶುರು ಆಗುತ್ತಿಲ್ಲ. ಒಟ್ಟಾರೆ ಇಲಾಖೆಯನ್ನು ಖಾಸಗಿ ಕಂಪನಿ ಎಂದುಕೊಂಡಿರಾ? ಎಂದು ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಸಂಸದ ಡಾ.ಉಮೇಶ ಜಾಧವ್ ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ:ಸೋಂಕು ಲಕ್ಷಣ ಇಲ್ಲದವರೇ ಹೆಚ್ಚು; ಎಲ್ಲೆಂದರಲ್ಲಿ ಅಲೆದಾಟ
ಸಭೆಗೆ ಸೇಡಂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಅಭಿಯಂತರರು ಗೈರು ಹಾಜರಾಗಿದ್ದಕ್ಕೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರದ ಸಚಿವ ಭಗವಂತ ಖೂಬಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಉತ್ಸವ ಮಾಡಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ಕಾಮಗಾರಿ ಮುಗಿದ ನಂತರ ನೀರು ಪ್ರಾರಂಭವನ್ನು ಉತ್ಸವ ರೀತಿಯಲ್ಲಿ ಮಾಡುವಂತೆ ಸಚಿವ ಖೂಬಾ ನಿರ್ದೇಶನ ನೀಡಿದರು.
ಪ್ರಧಾನಮಂತ್ರಿಯವರು ಎಲ್ಲ ಜನರಿಗೆ ಶುದ್ದ ಕುಡಿಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಕಾಮಗಾರಿಯಲ್ಲಿ ಎಳ್ಳು ಕಾಳಷ್ಟು ನಿರ್ಲಕ್ಷ್ಯ ಸಲ್ಲದು ಎಂದರು.
ಸರ್ವಿಸ್ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿ: ಮಹಾನಗರದ ವರ್ತುಲ ರಸ್ತೆಯ ಸರ್ವಿಸ್ ರಸ್ತೆಯು ಹಲವೆಡೆ ಅತಿಕ್ರಮಣವಾಗಿದ್ದು, ಸರ್ವಿಸ್ ರಸ್ತೆ ಮೇಲೆ ಕಟ್ಟಿಗೆ ಅಡ್ಡೆ ಸೇರಿ ಇತರ ದಂಧೆಗಳು ನಡೆಯುತ್ತಿವೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳೊಂದಿಗೆ ಈ ಕೂಡಲೇ ತೆರವುಗೊಳಿಸುವಂತರ ಹಾಗೂ ಸರ್ವಿಸ್ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಚಿವರು ಹಾಗೂ ಸಂಸದರು ಸೂಚಿಸಿದರು.
ಶಾಸಕರ ಗೈರು: ಪ್ರಮುಖವಾಗಿ ಕೇಂದ್ರದ ಸಚಿವರ ಅಧ್ಯಕ್ಣತೆಯಲ್ಲಿ ದಿಶಾ ಸಭೆ ನಡೆಯುತ್ತಿದ್ದರೂ ಇಬ್ಬರು ಶಾಸಕರು ಬಿಟ್ಟರೆ ಉಳಿದ ಶಾಸಕರು ಗೈರು ಹಾಜರಾಗಿರುವುದು ಕಂಡು ಬಂತು. ಸಭೆಯಲ್ಲಿ ಹೆಚ್ಚಾಗಿ ಚಿಂಚೋಳಿ, ಆಳಂದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆಯಾಯಿತು.
ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿ.ಪಂ ಸಿಇಓ ದಿಲಿಶ್ ಸಸಿ ಸರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.