ಮಹಿಳೆ ಮನುಕುಲದ ಜೀವಕಳೆ
ಮಹಿಳೆಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಶರಣರ ಕನಸು ನನಸು
Team Udayavani, Mar 12, 2020, 12:13 PM IST
ಮುದ್ದೇಬಿಹಾಳ: ಮಹಿಳೆ ಮನುಕುಲದ ಜೀವಕಳೆ ಆಗಿದ್ದಾಳೆ. ಅವಳನ್ನು ಎಲ್ಲ ಸಂಕೋಲೆಗಳಿಂದ ಮು ಕ್ತಗೊಳಿಸಿ ಸ್ವಾತಂತ್ರ್ಯ ನೀಡಿದಾಗ ಮಾತ್ರ ಬಸವಣ್ಣನ ಆದಿಯಾಗಿ 12ನೇ ಶತಮಾನದ ಶರಣರು ಕಂಡಿದ್ದ ಪೂರ್ಣಪ್ರಮಾಣದ ಸಮಾಜ ಅಸ್ತಿತ್ವಕ್ಕೆ ಬರುವುದು ಸಾಧ್ಯವಿದೆ ಎಂದು ಜಾತಿ ತೊಲಗಿಸಿ-ಜ್ಯೋತಿ ಬೆಳಗಿಸಿ ಪ್ರವಚನ ಯಾತ್ರೆಯ ರೂವಾರಿ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿಯವರು ಹೇಳಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದಲ್ಲಿ 5 ದಿನಗಳವರೆಗೆ ನಡೆದ ಜಾತಿ ತೊಲಗಿಸಿ ಜ್ಯೋತಿ ಬೆಳಗಿಸಿ ಪ್ರವಚನ ಯಾತ್ರೆ ಸಮಾರೋಪದಂದು ಏರ್ಪಡಿಸಿದ್ದ ಮುತ್ತದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಬಹುಕಾಲದಿಂದ ಶೋಷಣೆಗೊಳ ಪಟ್ಟಿರುವ ಮಹಿಳೆಯನ್ನು ಕೆಲ ಸಂಪ್ರದಾಯವಾದಿಗಳು ಬಂಧಿಸಿಟ್ಟಿದ್ದಾರೆ. ಸಮಾಜದಲ್ಲಿ ಆಕೆಯ ಸ್ಥಾನಮಾನ ನೆಪ ಮಾತ್ರಕ್ಕೆ ಎನ್ನುವಂತಿದೆ. ಯತ್ರನಾರಿತ್ರ ಪೂಜ್ಯಂತೆ ತತ್ರ ದೇವೋಭವ ಎನ್ನುವ ಮಾತು ನಿಜವಾಗಬೇಕಾದರೆ ಮಹಿಳೆಯನ್ನು ಗೌರವಿಸುವ ವಾತಾವರಣ ನಿರ್ಮಾಣಗೊಳ್ಳಬೇಕು. ಇದು ಗ್ರಾಮೀಣ ಭಾಗದಿಂದಲೇ ಪ್ರಜ್ವಲಿಸಬೇಕು ಎಂದರು.
5 ದಿನಗಳವರೆಗೆ ಪ್ರವಚನ ನೀಡಿದ ಪ್ರವಚನ ಭೂಷಣ ಯರಗಲ್ಲದ ಷಡಕ್ಷರಿ ಶಾಸ್ತ್ರಿಯವರು ಮಾತನಾಡಿ, ಮನುಷ್ಯ ವಿಶ್ವಧರ್ಮ ಪಾಲಕ. ಬಸವಾದಿ ಶರಣರು ಜಾತಿ ವಿರುದ್ಧ ಹೋರಾಡಿದರು.
ಜಾತೀಯತೆಯಿಂದಲೇ ಮನುಷ್ಯ ಸಂಬಂಧಗಳು ಹಾಳಾಗತೊಡಗಿವೆ. ನಾವೆಲ್ಲರೂ ಸೇರಿ ಜಾತಿ ತೊಲಗಿಸಿ ಜ್ಯೋತಿ ಬೆಳಗಿಸುವ ಸಾರ್ಥಕ ಕಾರ್ಯ ಮಾಡಬೇಕು ಎಂದರು.
5 ದಿನಗಳ ಪ್ರವಚನದಲ್ಲಿ ಸ್ತ್ರೀ ಸಮಾನತೆ, ಭಾರತದ ಧರ್ಮಗಳು, ಸಂಸಾರ, ಹಣ, ನಿಂದೆ, ಜಾತಿ, ಕಲ್ಯಾಣ ದರ್ಶನ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಗ್ರಾಮದ ಮಾರುತೇಶ್ವರ ಭಜನಾ ಮಂಡಳಿಯವರು ಸ್ವಾಮೀಜಿಗಳು ಸೇರಿದಂತೆ ಸರ್ವ ಗಣ್ಯರನ್ನೂ ಸನ್ಮಾನಿಸಿದರು. ಪಂಚಾಯತ್ ಅಭಿವೃದ್ಧಿ ಅ ಧಿಕಾರಿ ಆನಂದ ಮಠ ದಂಪತಿ ಮುತ್ತೈದೆಯರಿಗೆ ಉಡಿ ತುಂಬುವ ಹೊಣೆ ನಿಭಾಯಿಸಿದರು.
ಪ್ರಮುಖರಾದ ಸಾಯಬಣ್ಣ ತಳವಾರ, ನಾಗರಾಜ ಕನ್ನೊಳ್ಳಿ,
ಮಲ್ಲನಗೌಡ ಪಾಟೀಲ, ಬಸವರಾಜ ತಾಳಿಕೋಟೆ, ವೀರೇಶ ಕೈನೂರ, ವಿ.ಕೆ. ದೇಶಪಾಂಡೆ, ನಿಂಗನಗೌಡ ಪಾಟೀಲ, ಮಲ್ಲಪ್ಪ ಝೈನೂರ, ಹನುಮಂತ ಕನ್ನೊಳ್ಳಿ, ಹನುಮಂತ ಭೆ„ರವಾಡಗಿ, ಸಯ್ಯ ಹಿರೇಮಠ, ನಿಂಗಪ್ಪ ಮೇಟಿ, ಸಾಹೇಬಗೌಡ ತಾಳಿಕೋಟಿ, ಶಬ್ಬೀರ್ ಇನಾಮದಾರ ಸೇರಿದಂತೆ ಹಲವು ಗಣ್ಯರು ವಿವಿಧ ಧಾರ್ಮಿಕ, ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.