ಮಳಖೇಡ ಅಭಿವೃದಿಗೆ ಒತ್ತಾಯ
Team Udayavani, Jun 30, 2021, 7:14 PM IST
ಕಲಬುರಗಿ: ಕನ್ನಡದ ಮೊದಲು ಗದ್ಯ ಕೃತಿ ಕವಿರಾಜಮಾರ್ಗ ರಚನೆಯಾದ ಐತಿಹಾಸಿಕ ಸ್ಥಳ, ಕನ್ನಡದ ಹಿರಿಮೆಯನ್ನು ವಿಶ್ವಕ್ಕೆ ತಿಳಿಸಿಕೊಟ್ಟ ನೆಲ ರಾಷ್ಟ್ರಕೂಟರ ರಾಜಧಾನಿ ಮಳಖೇಡವನ್ನು ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಪಟ್ಟಿಗೆ ಸೇರಿಸಿ ಅಭಿವೃದ್ಧಿಪಡಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ವತಿಯಿಂದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸಚಿವರನ್ನು ಸಂಘಟನೆಯ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಮಳಖೇಡ ತಾಣವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ತನ್ನ ಆಳ್ವಿಕೆಯ ಅವ ಧಿಯಲ್ಲಿ ಜನಪರ ಕೆಲಸಗಳ ಮೂಲಕ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟದಂತೆ ನಿರ್ಮಿಸಿ ಸುಭಿಕ್ಷೆಯನ್ನಾಗಿಸಿದ ದೊರೆ ಅಮೋಘವರ್ಷ ನೃಪತುಂಗರ ಪ್ರತಿಮೆಯನ್ನು ಕಲಬುರಗಿ ನಗರದಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವ ರಾಷ್ಟ್ರಕೂಟ ಸಾಮ್ರಾಜ್ಯದ ಮೂಲ ನೆಲವನ್ನು ಇಲ್ಲಿಯವರೆಗೂ ಆಳಿರುವ ಎಲ್ಲ ಸರ್ಕಾರಗಳು ಮರೆಯುವ ಕೆಲಸ ಮಾಡಿಕೊಂಡೆ ಬಂದಿವೆ. ಇತಿಹಾಸ ಪುಟದಲ್ಲಿ ಕಲಬುರಗಿ ಎಂದರೇ ನೆನಪಾಗುವುದು ರಾಷ್ಟ್ರಕೂಟ ರಾಜ್ಯ ಮನೆತನದಿಂದ. ಇಂತಹ ರಾಜ್ಯ ಮನೆತನ ಆಳಿದ ರಾಜ್ಯಧಾನಿ ಕೇಂದ್ರ ನೋಡಿದರೆ ಇತಿಹಾಸ ಪ್ರೇಮಿಗಳಿಗೆ ಕಣ್ಣೀರು ಬರುವಂತಹ ಸ್ಥಿತಿಯಲ್ಲಿ ಇದೆ.
ತಮ್ಮ ಅವ ಧಿಯಲ್ಲಿ ಆದರೂ ಮಳಖೇಡವನ್ನು ಅಭಿವೃದ್ಧಿಪಡಿಸಿ ಅದಕ್ಕೆ ಪ್ರವಾಸೋದ್ಯಮದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ, ಮುಖಂಡರಾದ ಸಂತೋಷ ಪಾಟೀಲ, ಮಹಾಂತೇಶ ಹರವಾಳ, ಋಷಿ ಬೆನಕನಳ್ಳಿ, ಶ್ರೀಕಾಂತ್ ರೆಡ್ಡಿ, ದೀಲಿಪ್ ಕಿರಸವಳಗಿ, ಮಹೇಶ್ ಫರತಾಬಾದ ಮತ್ತು ನೂರ ಹೈಮದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.