ನೀರಿನ ಹಣ ನೀರಲ್ಲೇ ಮುಳುಗಿಸಿದ್ದೀರಿ

Team Udayavani, Mar 5, 2017, 2:57 PM IST

gul7.jpg

ವಾಡಿ: ಪುರಸಭೆಯಲ್ಲಿ ಅಧ್ಯಕ್ಷ ಭಾಗವತ ಸುಳೆ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಒಟ್ಟು 12 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಯಿತು. 2016/17ನೇ ಸಾಲಿನ 3ನೇ ಹಂತದ ನಗರೋತ್ಥಾನದ 7.5 ಕೋಟಿ ರೂ. ಹಾಗೂ ಪಜಾ/ಪಪಂ ಜನರ ಅಭಿವೃದ್ಧಿಗಾಗಿ ಬಿಡುಗಡೆಯಾದ 5 ಕೋಟಿ ರೂ. ಅನುದಾನ ಬಳಕೆ ಕುರಿತು ನಡೆದ ಚರ್ಚೆಯಲ್ಲಿ ಶುದ್ಧ ನೀರು ಸದ್ದು ಮಾಡಿತು.

ನೀರು ಶುದ್ಧೀಕರಣ ಘಟಕವಿದ್ದರೂ ಜನರು ಗೊಜ್ಜು ನೀರು ಕುಡಿಯಬೇಕಾದ ದುಸ್ಥಿತಿಯಿದೆ. ಒಮ್ಮೆ ಹಸಿರು ಮತ್ತೂಮ್ಮೆ ಹಳದಿ ಬಣ್ಣದಲ್ಲಿ ಹಳು ಸಮೇತ ನೀರು ಸರಬರಾಜಾಗುತ್ತಿದೆ. ಪುರಸಭೆಯ ನೀರು ಕುಡಿಯಲು ಜನ ಹಿಂಜರಿಯುತ್ತಿದ್ದಾರೆ ಎಂದು ಕಾಂಗ್ರೆಸ್‌ ಸದಸ್ಯ ಮಝರ್‌ ಹುಸೇನ್‌, ಅಧ್ಯಕ್ಷಭಾಗವತ ಸುಳೆ ವಿರುದ್ಧ ಹರಿಹಾಯ್ದರು.

ಬಿಜೆಪಿ ಸದಸ್ಯರಾದ ಕಿಶನ್‌ ಜಾಧವ, ಪ್ರಕಾಶ ನಾಯಕ, ಗರಿಮಲ್ಲಪ್ಪ ಕಟ್ಟಿಮನಿ, ನೀರಿನ ಬಾಟಲಿ ಪ್ರದರ್ಶಿಸಿ, ನೀರಿಗಾಗಿ ತೆಗೆದಿಟ್ಟ ಹಣ ನೀರಲ್ಲೇ ಮುಳುಗಿಸಿದ್ದೀರಿ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಧಿಕಾರಿ ಶಂಕರ ಕಾಳೆ, ನೀರು ಶುದ್ಧೀಕರಣ ಘಟಕ ಪರಿಶೀಲಿಸಲಾಗಿದ್ದು, ಕೊರತೆ ಪೂರೈಸಲಾಗಿದೆ. 

ಇನ್ನುಮುಂದೆ ಶುದ್ಧ ನೀರು ಸರಬರಾಜಾಗುತ್ತದೆ ಎಂದರು. ಜನತೆಗೆ ರಾಡಿ ನೀರು ಪೂರೈಕೆ ಮಾಡಿದರೆ ಸುಮ್ಮನಿರಲ್ಲ. ಪ್ರತಿ ಬಡಾವಣೆಗೂ ಶುದ್ಧ ನೀರು ತಲುಪಬೇಕು. ಜನರಿಂದ ದೂರುಗಳು ಬರದಂತೆ ಸೇವೆ ನೀಡಿ ಎಂದು ಅಧ್ಯಕ್ಷ ಭಾಗವತ ಸುಳೆ ಮುಖ್ಯಾಧಿಕಾರಿಗೆ ಸೂಚಿಸಿದರು. ಎಸ್‌ಸಿ/ ಸ್‌ಟಿ ಜನರ ಅಭಿವೃದ್ಧಿಗೆ ಬಿಡುಗಡೆಯಾದ 5 ಕೋಟಿ ರೂ. ಅನುದಾನದಲ್ಲಿ ಎಸ್‌ಸಿಗೆ 3 ಕೋಟಿ, ಎಸ್‌ ಟಿಗೆ 2 ಕೋಟಿ ಹಂಚಿಕೆಯಾಗಿದೆ.

ಈ ಎರಡೂ ಅನುದಾನ ಸೇರಿಸಿ ಜಮೀನು ಖರೀದಿಸುವ ಮೂಲಕ ವಸತಿ/ನಿವೇಶನ ರಹಿತ ಪಜಾ/ಪಪಂ ಜನರಿಗೆ ನಿವೇಶನ ಒದಗಿಸುವಂತೆ ಕಾಂಗ್ರೆಸ್‌ನ ಸುಮಿತ್ರಾ ದೊರೆ, ಸೂರ್ಯಕಾಂತ ರದ್ದೇವಾಡಿ ಸೂಚಿಸಿದರು. ನಗರೋತ್ಥಾನದ 7.5 ಕೋಟಿ ರೂ. ಅನುದಾನದಲ್ಲಿ 6.37 ಕೋಟಿ ರೂ. ಕುಡಿಯುವ ನೀರಿಗಾಗಿ ತೆಗೆದಿರಿಸಲಾಯಿತು. 

ವಿಜಯನಗರದ ಆಶ್ರಯ ಕಾಲೋನಿಯಲ್ಲಿ 10 ಲಕ್ಷ ಲೀ. ನೀರಿನ ಸಾಮರ್ಥ್ಯದ ಹಾಗೂ ಬಿರ್ಲಾ ಏರಿಯಾದಲ್ಲಿ 5 ಲಕ್ಷ ಲೀ. ಸಾಮಾರ್ಥ್ಯದ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಸಭೆಯಲ್ಲಿ ಸಮ್ಮತಿ ವ್ಯಕ್ತವಾಯಿತು. ಕಳೆದ ವರ್ಷ ಬಿಡುಗಡೆಯಾದ  ನಗರೋತ್ಥಾನ 2ನೇ ಹಂತದ 2.5 ಕೋಟಿರೂ. ಉಳಿದಿದೆ. ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ ಗುತ್ತಿಗೆದಾರನಿಗೆ ನೋಟಿಸ್‌ ಕೊಡಿ ಎಂದು ಸದಸ್ಯ ಚಾಂದ್‌ಮಿಯ್ನಾ ಒತ್ತಾಯಿಸಿದರು.

ಸೂಕ್ತ ನಿರ್ವಹಣೆಯಿಲ್ಲದ ಕಾರಣ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ ಎಂದು ಸದಸ್ಯೆ ಶ್ವೇತಾ ಜೈನ್‌ ದೂರಿದರು. ನಮ್ಮ ಐದು ವರ್ಷದ ಆಡಳಿತ ಅವಧಿ ಮಾ.24ಕ್ಕೆ ಕೊನೆಗೊಳ್ಳುತ್ತಿದೆ. ಪ್ರತಿಸಭೆಯಲ್ಲಿ ಪ್ರವಾಸದ ಬೇಡಿಕೆಯಿಡುತ್ತೇವೆ. ಅದನ್ನು ನೀವು ಕಡೆಗಣಿಸುತ್ತಾ ಬಂದಿದ್ದೀರಿ. 

ಕೊನೆ ಬಾರಿಯಾದರೂ ಎಲ್ಲ ಸದಸ್ಯರಿಗೆ ಎಲ್ಲಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಂದು ಕಾಂಗ್ರೆಸ್‌ ಸದಸ್ಯ ಮಲ್ಲೇಶಪ್ಪ ಚುಕ್ಕೇರ, ಮುಖ್ಯಾಧಿಕಾರಿಗೆ ಕೈಮುಗಿದು ಕೇಳಿಕೊಂಡರು. ಈ ಕುರಿತು ಜಿಲ್ಲಾಧಿಧಿಕಾರಿಗಳ ಗಮನಕ್ಕೆ ತಂದು ಪ್ರವಾಸದ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಾಧಿಕಾರಿ ಕಾಳೆ ತಿಳಿಸಿದರು.

ಕುಡಿಯುವ ನೀರಿನ ಕೋಟ್ಯಾಂತರ ರೂ. ಅನುದಾನಕ್ಕೆ ಹೊಸ ಯೋಜನೆಗಳನ್ನುರೂಪಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು, ಅಧಿಧಿಕಾರಿಗಳು ಸಿದ್ಧಪಡಿಸಿದ್ದ ಯೋಜನೆಗಳಿಗೆ ಅಂಕಿತ ಹಾಕುವ ಮೂಲಕ ತಮ್ಮ ಆಡಳಿತದ ಕೊನೆಯ ಸಭೆಗೆ ಅಂತ್ಯ ಹಾಡಿದರು.

ಜೆಇ ಅಶೋಕ ಪುಟ್‌ಫಾಕ್‌, ಸಮುದಾಯ ಸಂಘಟನಾಧಿ ಅಧಿಕಾರಿ ಕಾಶೀನಾಥ ಧನ್ನಿ, ಕಂದಾಯ ಅಧಿಧಿಕಾರಿ ಎ. ಪಂಕಜಾ, ಸದಸ್ಯರಾದ ಮುತ್ತಯ್ಯಸ್ವಾಮಿ, ಅಂಬಾದಾಸ ಜಾಧವ, ಭಾಗಮ್ಮ ನಾಟೀಕಾರ, ಲಕ್ಷಿ ಠಾಕೂರಸಿಂಗ್‌, ಅಶೋಕ ಪವಾರ, ಹರಿ ಜಾಧವ ಪಾಲ್ಗೊಂಡಿದ್ದರು. 

ಟಾಪ್ ನ್ಯೂಸ್

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.