ನಗರಸಭೆ ಆಡಳಿತಕ್ಕೆ ಬೇಕು ಸರ್ಜರಿ


Team Udayavani, Jan 27, 2018, 12:12 PM IST

gul-9.jpg

ಶಹಾಬಾದ: ಪದೇ ಪದೇ ಚರಂಡಿ ತ್ಯಾಜ ವಸ್ತುಗಳಿಂದ ಕಟ್ಟಿಕೊಳ್ಳವುದು. ಚರಂಡಿಯಲ್ಲಿ ನೀರು ಹರಿಯದೇ ಮನೆಯ ಎದುರು ಮತ್ತು ರಸ್ತೆಯ ಮೇಲೆ ಹರಿದಾಡುವುದು. ಮೂಗು ಮುಚ್ಚಿಕೊಂಡು ಇದೇ ಕೊಳಚೆ ನೀರನ್ನೇ ದಾಟಿಕೊಂಡು ಹೋಗುವುದು ಇಲ್ಲಿನ ಜನರ ದಿನನಿತ್ಯದ ದಿನಚರಿಯಾಗಿದೆ. ಇದು ನಗರಸಭೆಯ ವ್ಯಾಪ್ತಿಯ ಬಹತೇಕ ವಾರ್ಡ್‌ಗಳಲ್ಲಿ ಕಂಡು ಬರುವ ಸಾನಾನ್ಯ ದೃಶ್ಯ.

ನಗರದ ಗಂಜ್‌ ಬಡಾವಣೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚರಂಡಿಯಲ್ಲಿ ಕಸಕಡ್ಡಿ, ಪ್ಲಾಸಿಕ್‌ ವಸ್ತುಗಳು ಸೇರಿಕೊಂಡು ನೀರು ಸರಾಗವಾಗಿ ಹರಿಯದ ಪರಿಣಾಮ ಕೊಳಚೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಬಂದಿದೆ. ವಾರ್ಡ್‌ ನಂ.18ರಲ್ಲಿ ಬಡಾವಣೆಯ ಜನರು ನಿತ್ಯ ದುರ್ವಾಸನೆ ಸೇವಿಸಿಕೊಂಡೆ ಬದುಕಬೇಕಾಗಿದೆ. ಕಸ ವಿಲೇವಾರಿ, ಹೂಳು ತೆಗೆಯುವ ಕಾರ್ಯದಲ್ಲಿ ಪೌರಕಾರ್ಮಿಕರು ಸರಿಯಾಗಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ನಾಗರಿಕರು ದೂರುತ್ತಿದ್ದಾರೆ.

ಚರಂಡಿಯಲ್ಲಿ ಮಲ, ಮೂತ್ರ ಮಿಶ್ರಿತ ನೀರು ಚರಂಡಿಯಲ್ಲಿ ಹರಿಯುತ್ತಿದೆಯಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿ, ಮಲೀನ ವಾತಾವರಣ ಸೃಷ್ಟಿಸಿದೆ. ಈ ಬಗ್ಗೆ ವಾರ್ಡ್‌ ಸದಸ್ಯರಿಗೆ ತಿಳಿಸಿದರೆ, ನಾವು ಬಹಳಷ್ಟು ಬಾರಿ ಪೌರಾಯುಕ್ತರಿಗೆ ತಿಳಿಸಿದ್ದೇವೆ. ಆದರೆ ಅವರು ನಮ್ಮ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ನೀವೇ ಹೋಗಿ ಹೇಳಿ ಎಂದು ಹಾರಿಕೆ ಉತ್ತರ ನೀಡಿ ಸ್ಥಳದಿಂದ ಕಾಲ್ಕಿತ್ತುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಬಂದು ಮತ ನೀಡುವಂತೆ ಅಂಗಲಾಚುತ್ತಾರೆ. ನಂತರ ಈ ಕಡೆಗೆ ತಲೆ ಹಾಕದ ಸದಸ್ಯರ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ. 

ಹರಿದಾಡಿತು ಕೊಳಚೆ ನೀರು: ನಗರಸಭೆಯ ಮುಂಭಾಗದ ಚರಂಡಿಯ ನೀರು ರಸ್ತೆಯನ್ನೆಲ್ಲ ಆವರಿಸಿ ಅವಾಂತರಗೊಳಿಸಿತ್ತು. ನಗರಸಭೆಯಿಂದ ಮಜ್ಜಿದ್‌ ವೃತ್ತದ ಸಮೀಪದವರೆಗೆ ಕೊಳಚೆ ನೀರು ಹರಿದಾಡಿತು. ರವಿವಾರ ಸಂತೆಗೆ ಬಂದ ಜನರು ಕೊಳಚೆ ನೀರಿನಲ್ಲಿಯೇ ಕಾಲನ್ನಿಟ್ಟು ಹೋಗುವಂತಾಯಿತು. ಇಡೀ ರಾತ್ರಿ ಜನರು ಗಬ್ಬು ವಾಸನೆಯಲ್ಲಿಯೇ ತೆರಳುವ ಪ್ರಸಂಗ ಎದುರಿಸಿದರು.

ನಗರಸಭೆಯ ಮುಂಭಾಗದ ಚರಂಡಿ ಸ್ಥಿತಿ ಹೀಗಾದರೆ ಇಡೀ ನಗರದ ದುಸ್ಥಿತಿ ಹೇಗಿರಬಹುದು ಎಂದು ಇಲ್ಲಿನ ಚಿತ್ರಣದಿಂದ ಅಂದಾಜಿಸಬಹುದು. ಅಲ್ಲದೇ ನಗರಸಭೆಯ ಮುಂಭಾಗದ ಚರಂಡಿ ಸ್ವತ್ಛಗೊಳಿಸಲಾಗದ ನಗರಸಭೆಯ ಅಧಿಕಾರಿಗಳು ಇತರ ಬಡಾವಣೆಯನ್ನು ಹೇಗೆ ಸರಿಪಡಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ನಗರದ 31 ವಾರ್ಡ್‌ಗಳ ಚರಂಡಿಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಬಹುತೇಕ ಬಡಾವಣೆಗಳು ತಿಪ್ಪೆ ಗುಂಡಿಯಾಗಿವೆ.

ಸೂಕ್ಷ್ಮತೆ ಅರಿತು ಕ್ರಮ ಕೈಗೊಳ್ಳಿ ವಾರ್ಡ್‌ ನಂ.18ರಲ್ಲಿ ಚರಂಡಿ ತುಂಬಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದರಿಂದ ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದು, ಕೂಡಲೇ ನಗರಸಭೆಯ ಪೌರಾಯುಕ್ತರು ಸೂಕ್ಷ್ಮತೆ ಅರಿತು ಚರಂಡಿಯನ್ನು ಸ್ವತ್ಛಗೊಳಿಸಲು ಕ್ರಮಕೈಗೊಳ್ಳಬೇಕು
∙ಈಶ್ವರರಾಜ ಇಂಗಿನಶೆಟ್ಟಿ , ಉದ್ದಿಮೆದಾರರು

ಕುಸಿದ ನಗರಸಭೆ ಆಡಳಿತ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಮನೆ ಮುಂಭಾಗದಲ್ಲೇ ಕಸದ ತಿಪ್ಪೆ ಆವರಿಸಿದೆ. ಇನ್ನು ಇತರ ಬಡಾವಣೆ ಸಮಸ್ಯೆ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು. ನಗರಸಭೆ ಆಡಳಿತ ಸಂಪೂರ್ಣ ಕುಸಿದಿದೆ. ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು, ಕಚೇರಿಗೆ ಬಂದು ಚಕ್ಕರ್‌ ಹೊಡೆಯುವ ಸಿಬ್ಬಂದಿ, ಜನರ ಸಮಸ್ಯೆಗೆ ಸ್ಪಂದಿಸದ ಅಧ್ಯಕ್ಷೆ ಇರುವುದರಿಂದ ಜನರ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಜಿಲ್ಲಾ ಧಿಕಾರಿಗಳು ಆದಷ್ಟು ಬೇಗ ನಗರಸಭೆಗೆ ಸರ್ಜರಿ ಮಾಡಬೇಕು
 ಲೋಹಿತ್‌ ಕಟ್ಟಿ , ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌

„ ಮಲ್ಲಿನಾಥ ಪಾಟೀಲ

ಟಾಪ್ ನ್ಯೂಸ್

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

1(1

Madanthyar: ಬಾಲಕಿಯರ ಹಾಸ್ಟೆಲ್‌ ಕಟ್ಟಡ ಅನಾಥ!

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Rashmika Mandanna gave hint of Pushpa 3

Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.