ನೆಟೆರೋಗದಿಂದ ಹಾಳಾಗಿರುವ ತೊಗರಿಗೆ ಸರ್ಕಾರದಿಂದ ಪರಿಹಾರ: ಸಚಿವ ನಿರಾಣಿ
Team Udayavani, Dec 30, 2022, 6:02 PM IST
ಕಲಬುರಗಿ: ನೆಟೆರೋಗದಿಂದ ಹಾಳಾಗಿರುವ ತೊಗರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬಿಜೆಪಿಯ ಬೂತ್ ವಿಜಯ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತೊಗರಿ ನೆಟೆರೋಗ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದೆ. ಆದರೆ ಯಾವುದೇ ಅಂತೀಮ ನಿರ್ಧಾರವಾಗಿಲ್ಲ. ವಿಶೇಷ ಪ್ಯಾಕೇಜ್ ಕೊಡಬೇಕೋ ಇಲ್ಲವೇ ಪರಿಹಾರ ನೀಡಬೇಕೆಂಬುದನ್ನು ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು.
ನೆಟೆರೋಗ ದಿಂದ ತೊಗರಿ ಹಾನಿಯಾಗಿರುವುದನ್ನು ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ. ಇನ್ನೊಮ್ಮೆ ವರದಿ ತರಿಸಿಕೊಳ್ಳಲಾಗುವುದು. ಈ ಭಾಗದಲ್ಲಿ ಬೆಳೆಯುವುದು ತೊಗರಿವಂದೇ ಅದೇ ಬೆಳೆ ಹಾನಿ ಯಾಗಿರುವುದರಿಂದ ರೈತ ಸಂಕಷ್ಟಕ್ಕೆ ಒಳಗಾಗಿರುವುದು ಸರ್ಕಾರದ ಗಮನಕ್ಕಿದೆ ಎಂದು ಸಚಿವ ನಿರಾಣಿ ಹೇಳಿದರು.
ವೀರಶೈವ- ಲಿಂಗಾಯತ ಎಲ್ಲ ಒಳಪಂಗಡಗಳು ಅಂದರೆ 3 ಬಿ.ದಲ್ಲಿದ್ದ ಸಮುದಾಯಗಳು ಹೊಸ ಕೆಟೆಗರಿ 2ಡಿಯಲ್ಲಿ ಸೇರಲಿವೆ. ಈ ಮೊದಲು ಒಂದೇ ಸಮುದಾಯ ಎರಡು ಕೆಟೆಗರಿಯಲ್ಲಿ ಬರುತ್ತವೆ ಎಂಬ ಗೊಂದಲವಿತ್ತು. ಆದರೆ ಹೊಸ ಕೆಟಗೇರಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಒಟ್ಟಾರೆ ಹೊಸ ಕೆಟಗೇರಿಯಿಂದ ವೀರಶೈವ- ಲಿಂಗಾಯತ ಮೀಸಲಾತಿ ಪ್ರಮಾಣ 6ರಿಂದ 7ಕ್ಕೆ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯಿಸಿದರು.
ಪ್ರಿಯಾಂಕ್ ಸೋಲ್ತಾರೆ: ನಮಗೀಗ ಪರೀಕ್ಷೆ ಸಮಯ.ಇದಕ್ಕಾಗಿಯೇ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾಯದರ್ಶಿ ಬಿ.ಎಲ್. ಸಂತೋಷ ಸಭೆ ನಡೆಸಲು ಕಲಬುರಗಿ ಗೆ ಆಗಮಿಸಿದ್ದಾರೆ. ಎಲ್ಲ 224 ಕ್ಷೇತ್ರಗಳನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಜಿಲ್ಲೆಯ ಚಿತ್ತಾಪುರದಲ್ಲಿ ಈ ಸಲ ಪ್ರಿಯಾಂಕ್ ಖರ್ಗೆ ಸೋಲ್ತಾರೆ. ಅವರ ತಂದೆಗೆ ಸೋಲಿಸಿರುವಾಗ ಇವರಿಗೆ ಸೋಲಿಸುವುದು ದೊಡ್ಡದಲ್ಲ ಎಂದು ಸಚಿವ ನಿರಾಣಿ ಇದೇ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಭರದಿಂದ ಸಾಗುತ್ತಿರುವ ಕಾಮಗಾರಿ: ಹೊಸ ಸಂಸತ್ ಕಟ್ಟಡದಲ್ಲಿ ಬಜೆಟ್ ಅಧಿವೇಶನ ಸಾಧ್ಯತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.