ವಿಶ್ವ ವಿದ್ಯಾಲಯಗಳಿಗೆ ನ್ಯಾಕ್ ಮಾನ್ಯತೆ ಕಡ್ಡಾಯ
Team Udayavani, Aug 30, 2022, 1:38 PM IST
ಕಲಬುರಗಿ: ಮುಂಬರುವ ದಿನಗಳಲ್ಲಿ ನ್ಯಾಕ್ ಮಾನ್ಯತೆ ಹೊಂದುವುದು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ವಿವಿಗಳಿಗೆ ಕಡ್ಡಾಯವಾಗಲಿದೆ. ಅದಕ್ಕಾಗಿ ಅತ್ಯಂತ ಜಾಗರೂಕವಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಬಟ್ಟು ಸತ್ಯನಾರಾಯಣ ಹೇಳಿದರು.
ಗುಲ್ಬರ್ಗ ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ನ್ಯಾಕ್ ಕುರಿತು ಒಂದು ದಿನದ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಕ್ ಮಾನ್ಯತೆ ಎನ್ನುವುದು ಸರಕಾರದ ಅಭಯವೂ ಇದ್ದಂತೆ. ಆ ಮುಖೇನ ವಿವಿಗಳಲ್ಲಿ ನಡೆಯುವ ಎಲ್ಲ ಶೈಕ್ಷಣಿಕ ಕಾರ್ಯಗಳಿಗೆ ಒಳ್ಳೆಯ ಅರ್ಹತೆ ಮತ್ತು ಇಲ್ಲಿ ಶಿಕ್ಷಣ ಪಡೆದು ವಿದ್ಯಾರ್ಥಿಗಳಿಗೆ ದೇಶದ ಉದ್ದಗಲಕ್ಕೂ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಶೇಷ ಗಮನಿಕೆ ಸಿಗುತ್ತದೆ. ನ್ಯಾಕ್ ಪಡೆದುಕೊಳ್ಳಲು ದಾಖಲೆಗಳು ಅತ್ಯಂತ ಮಹತ್ವದ ಪಾತ್ರವಹಿಸಲಿವೆ. ಆ ನಿಟ್ಟಿನಲ್ಲಿ ಗುವಿವಿ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳ ಮಾಹಿತಿ, ವಿದ್ಯಾರ್ಥಿಗಳ ಪ್ರಗತಿ, ಶಿಕ್ಷಕರ ಶೈಕ್ಷಣಿಕ ಅರ್ಹತೆ ಮತ್ತು ಕಲಿಕೆಯ ಗುಣಮಟ್ಟದ ದಾಖಲೆಗಳನ್ನು ಸಜ್ಜು ಮಾಡುವುದೇ ದೊಡ್ಡ ಚಾಲೆಂಜ್ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್ ಮಾತನಾಡಿ, ನಾವು ಈಗಾಗಲೇ ಬಹುತೇಕ ಕೆಲಸವನ್ನು ಪೂರ್ಣ ಮಾಡಿದ್ದೇವೆ. ಖಂಡಿತವಾಗಿ ಈ ಬಾರಿ ನ್ಯಾಕ್ 4ನೇ ಸೈಕಲ್ ತಲುಪಲಿದ್ದೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನ್ಯಾಕ್ ಹೊಂದಲು ಈಗಾಗಲೇ ವಿವಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅನುಭವ ಮತ್ತು ತಿಳಿವು ಇರುವ ಪ್ರೋಫೆಸರ್‌ಗಳು ಇದ್ದಾರೆ. ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಡಿಸೆಂಬರ್ ಒಳಗೆ ನಾವು ನ್ಯಾಕ್ ಮಾನ್ಯತೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದರು.
ಗುಲ್ಬರ್ಗ ವಿವಿ ಕುಲಸಚಿವ ಪ್ರೊ| ವಿ.ಟಿ. ಕಾಂಬಳೆ ಸ್ವಾಗತಿಸಿದರು. ಐಕ್ಯೂಐಸಿ ನಿರ್ದೇಶಕ ಪ್ರೊ| ಬಿ.ಆರ್. ಕೆರೂರ್ ಪ್ರಾಸ್ತಾವಿಕ ಮಾತನಾಡಿದರು. ಉಪ ನಿರ್ದೇಶಕ ಡಾ.ಸುರೇಶ ಜಂಗೆ ವಂದಿಸಿದರು. ಗುಲ್ಬರ್ಗ ವಿವಿ ವ್ಯಾಪ್ತಿಯ ಮಹಾವಿದ್ಯಾಲಯಗಳ ಪೈಕಿ ಸುಮಾರು 170 ಜನ ಪ್ರಾಚಾರ್ಯರು, ಐಕ್ಯೂಐಸಿ ನಿರ್ದೇಶಕರು ಪಾಲ್ಗೊಂಡಿದ್ದರು. ವಿದ್ಯಾವಿಷಯಕ್ ಸದಸ್ಯ ರಮೇಶ ಧುತ್ತರಗಿ, ಪ್ರೊ| ಚಂದ್ರಕಾಂತ ಕೆಳಮನಿ, ನ್ಯಾಕ್ ಸಹಾಯಕ ಸಲಹೆಗಾರ ಡಾ. ಡಿ.ಕೆ.ಕಾಂಬ್ಳೆ ಇತರರು ಇದ್ದರು.
ಕಳೆದ ಬಾರಿಯಂತೆ ಈ ಬಾರಿಯೂ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಅರ್ಹ ಸಿಬ್ಬಂದಿ, ಪ್ರಾಧ್ಯಾಪಕರು ಇದ್ದು, ಹಲವಾರು ಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿ ದಾಖಲಿಸಲಾಗಿದೆ. ಆ ಆಧಾರದಲ್ಲಿ ನಾವು ನ್ಯಾಕ್ ಸಮಿತಿಯ ಸೈಕಲ್ ತಲುಪುತ್ತೇವೆ ಎನ್ನುವ ಭರವಸೆ ನನಗಿದೆ. –ಪ್ರೊ| ದಯಾನಂದ ಅಗಸರ್ ಗುವಿವಿ ಕುಲಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.