ನಾಗರಳ್ಳಿ : ಸಿದ್ದ ಲಿಂಗ ಶ್ರೀ ಬಂಧನಕ್ಕೆ ಆಕ್ರೋಶ
Team Udayavani, Mar 2, 2022, 10:08 AM IST
ಯಡ್ರಾಮಿ: ಕಲಬುರಗಿಯಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ, ಆಂದೋಲಾ ಕರುಣೇಶ್ವರ ಮಠದ ಪೀಠಾಧಿ ಪತಿ ಪೂಜ್ಯ ಸಿದ್ಧಲಿಂಗ ಸ್ವಾಮೀಜಿಗಳ ಬಂಧನ ಖಂಡಿಸಿ ಮಂಗಳವಾರ ನಾಗರಳ್ಳಿ ಕ್ರಾಸ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ವೇಳೆ ಶ್ರೀರಾಮ ಸೇನೆ ತಾಲೂಕು ಘಟಕದ ಕಾರ್ಯದರ್ಶಿ ರುದ್ರಗೌಡ ಬಿರಾದಾರ ಮಾತನಾಡಿ, ಹಿಂದೂಗಳಾಗಿ ದೇವರ ಪೂಜೆ ಮಾಡುವುದು ನಮ್ಮ ಹಕ್ಕು. ನಾವು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ತಡೆಯುವುದರ ಮೂಲಕ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಳಂದದಲ್ಲಿನ ಶಿವಲಿಂಗ ದೇವಾಲಯದ ಸ್ವತ್ಛತೆ ಹಾಗೂ ಪೂಜಾ ಕಾರ್ಯಕ್ಕಾಗಿ ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ಆಳಂದ ಕಡೆಗೆ ಹೋಗುವಾಗ ಮಾರ್ಗ ಮಧ್ಯೆ ಶ್ರೀಗಳನ್ನು ಕಲಬುರಗಿ ಪೊಲೀಸ್ ಸಿಬ್ಬಂದಿ ಬಂಧಿಸಿರುವುದು ಖಂಡನಾರ್ಹವಾಗಿದೆ. ಕೂಡಲೇ ಶ್ರೀಗಳನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ರಮೇಶ ಸಾಹು ಸೂಗೂರ, ಶಾಂತಗೌಡ ಬಿರಾದಾರ, ಸುರೇಶ ಸಾಹು ನಾಗರಾಳ, ಶಿವು ದೇಸಾಯಿ, ಬಸಲಿಂಗ ಸಾಹು ಕುಳಗೇರಿ, ಚಂದ್ರಕಾಂತ ಬಿರಾದಾರ, ಗೊಲ್ಲಾಳ ಅಲ್ಲಾಪುರ, ಅಂಬರೀಶ ಹಡಪದ, ಅಪ್ಪಣ್ಣ ಹಡಪದ, ಸೀತಾರಾಮ್ ಚೌವ್ಹಾಣ, ಕಿರಣ ರಾಠೊಡ, ಈರಣ್ಣ ಸಿಂದಗೇರಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.