ಕೆಲಸದ ಆಮಿಷ: ಬೆತ್ತಲೆ ವಿಡಿಯೋ ಮಾಡಿಸಿ, ಗ್ರೂಪ್ ಗೆ ಶೇರ್ ಮಾಡಿದ ಆರೋಪಿ ಬಂಧನ!
Team Udayavani, Apr 6, 2021, 7:47 PM IST
ಕಲಬುರಗಿ : ನೌಕರಿ ಖಾಯಂ ಮಾಡಿಸುತ್ತೇನೆ, ಬೆತ್ತಲೆಯ ವಿಡಿಯೋ ಮಾಡಿ ಕಳುಹಿಸಿ ಎಂದು ಗುತ್ತಿಗೆ ನೌಕರ ಮಹಿಳೆಯಿಂದ ಬೆತ್ತಲೆ ವಿಡಿಯೋ ಪಡೆದು ಗ್ರೂಪ್ ಗಳಿಗೆ ಶೇರ್ ಮಾಡಿರುವ ಲೈಂಗಿಕ ಕಿರುಕುಳ ಪ್ರಕರಣ ಗುಲ್ಬರ್ಗಾ ವಿವಿಯಲ್ಲಿ ಬೆಳಕಿಗೆ ಬಂದಿದೆ.
ಗುಲ್ಬರ್ಗಾ ವಿವಿ ಗ್ರಂಥಾಲಯದಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುವ ಮಹಿಳೆಗೆ ವಂಚಿಸಲಾಗಿದೆ. ಉದ್ಯೋಗ ಕೊಡಿಸುವುದಾಗಿ ವಿವಿಯ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಈಗ ಪೊಲೀಸರಿಗೆ ಅತಿಥಿಯಾಗಿದ್ದಾನೆ.
ವಿಡಿಯೋ ಶೂಟ್ ಮಾಡಿ ಕಳಿಸಿದ್ರೆ ಪರ್ಮನೆಂಟ್ ಜಾಬ್ ನೀಡುವ ಆಮಿಷವೊಡ್ಡಿದ್ದ. ಹೀಗಾಗಿ ವಿವಿ ಗ್ರಂಥಾಲಯ ಅಧೀಕ್ಷನ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವಿಡಿಯೋ ಶೂಟ್ ಮಾಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಮಹಿಳೆ ಕಳುಹಿಸಿದ್ದಾರೆ.
ಗ್ರಂಥಾಲಯ ಅಧೀಕ್ಷಕ ವಿಡಿಯೋವನ್ನು ಗ್ರೂಪ್ ಗೆ ಶೇರ್ ಮಾಡಿದ್ದು, ತನ್ನ ಮಾನ ಮರ್ಯಾದೆ ಹಾಳಾಗಿದೆ ಎಂದು ಮಹಿಳೆ ಪೊಲೀಸ್ ಠಾಣೆ ಗೆ ದೂರು ಸಲ್ಲಿಸಿದ್ದಾರೆ. ಆರೋಪಿ ಶರಣಪ್ಪ ಮುಂದಿನ ಮೇ ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 292, 407, 420, 354 (ಎ) ಅಡಿ ಶರಣಪ್ಪ ಮಾಕುಂಡಿ ವಿರುದ್ಧ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.