ರಾಷ್ಟ್ರೀಯ ಕ್ರೀಡಾ ದಿನಾಚರಣೆ:ರಸ್ತೆ ಓಟ-ಸ್ಕೇಟಿಂಗ್‌ ರೇಸ್‌


Team Udayavani, Aug 28, 2017, 10:20 AM IST

gul 2.jpg

ಕಲಬುರಗಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಯುವ ಜನಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡ ಬಾಲಕ-ಬಾಲಕಿಯರ ರಸ್ತೆ ಓಟ, ಸ್ಕೇಟಿಂಗ್‌ ರೇಸ್‌ ಹಾಗೂ ಕ್ರಾಸ್‌ ಕಂಟ್ರಿ ಓಪನ್‌ ರೇಸ್‌ ನಗರದಲ್ಲಿ ರವಿವಾರ ಬೆಳಗ್ಗೆ ನಡೆಯಿತು. ಕ್ರೀಡೆಗಳಿಗೆ ಜಿ.ಪಂ. ಸಿಇಒ ಹೆಬ್ಸಿಬಾರಾಣಿ ಕೋರ್ಲಪಾಟಿ ಚಾಲನೆ ನೀಡಿದರು. ಜಗತ್‌ ವೃತ್ತದಿಂದ ಸ್ಕೇಟಿಂಗ್‌ ರೇಸ್‌ ಆರಂಭವಾಗಿ ಗೋವಾ ಹೋಟೆಲ್‌, ಆನಂದ ಹೋಟೆಲ್‌, ನ್ಯಾಯಾಲಯ ರಸ್ತೆ, ಸರ್ದಾರ ಪಟೇಲ್‌ ವೃತ್ತ, ಮಿನಿ ವಿಧಾನಸೌಧ, ಲಾಹೋಟಿ ಪೆಟ್ರೋಲ್‌ ಪಂಪ್‌, ಎಸ್‌.ಎಂ.ಪಂಡಿತ ರಂಗಮಂದಿರ ಮಾರ್ಗದ ಮೂಲಕ ಮರಳಿ ಜಗತ್‌ ವೃತ್ತದಲ್ಲಿ ಕೊನೆಗೊಂಡಿತು. 17 ವರ್ಷಕ್ಕೂ ಮೇಲ್ಪಟ್ಟ ರೂಟ್‌ನಲ್ಲಿ ಜೇವರ್ಗಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಲಕ್ಷ್ಮಣ ಪ್ರಥಮ, ನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಶಶಾಂಕ ದ್ವಿತೀಯ, ಪೊಲೀಸ್‌ ಸಿಬ್ಬಂದಿ ಶರಣ ಇಜೇರಿ ಮೂರನೇ ಸ್ಥಾನ, ಜೇವರ್ಗಿ ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಬಣ್ಣ ನಾಲ್ಕನೇ ಸ್ಥಾನ ಪಡೆದರು. ರೂಟ್‌ 2ರಲ್ಲಿ ಬಾಲಕಿಯರ ಕ್ರಾಸ್‌ ಕಂಟ್ರಿ ಓಪನ್‌ ರೇಸ್‌ನಲ್ಲಿ ಮಹಾದೇವಿ ಶಾಲೆ ವಿದ್ಯಾರ್ಥಿನಿ ಕವಿತಾ ಎಸ್‌.ಜಿ., ಪ್ರಥಮ, ಸಿಪಿಎಸ್‌ ಶಾಲೆಯ ಅನಿಶಾ ದ್ವಿತೀಯ, ರೋಟರಿ ಕ್ಲಬ್‌ನ ಸುಹಾಸಿನಿ ತೃತೀಯ, ಕ್ರೀಡಾ ತರಬೇತಿ ಕೇಂದ್ರದ ರಾಧಿಕಾ ನಾಲ್ಕನೇ ಸ್ಥಾನ ಪಡೆದರು. ರೂಟ್‌ 3ರಲ್ಲಿ 17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಎಂಪಿಎಚ್‌ಎಸ್‌ನ ಜೈಭೀಮ ಪ್ರಥಮ, ಪ್ರಕಾಶ ದ್ವಿತೀಯ, ಭೀಮಾಶಂಕರ ತೃತೀಯ ಹಾಗೂ ಗೋವಿಂದ್ರ ದೇಸಾಯಿ ನಾಲ್ಕನೇ ಸ್ಥಾನ ಪಡೆದರು. ರೂಟ್‌ 4 ರಲ್ಲಿ 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಎಸ್‌ಬಿಆರ್‌ ಶಾಲೆಯ ಶಶಾಂಕ ಪ್ರಥಮ, ಸಿಪಿಇಎಂಎಸ್‌ನ ಆದಿತ್ಯ ದ್ವಿತೀಯ, ಎಸ್‌ಬಿಆರ್‌ನ ಸ್ವಸ್ತಿಕ ಮೂರನೇ ಹಾಗೂ ಭರತಕುಮಾರ ನಾಲ್ಕನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಸಿಪಿಇಎಂಎಸ್‌ನ ನಿಧಿ ಪ್ರಥಮ, ಎಸ್‌ಬಿಆರ್‌.ನ ನಿಧಿ ಆರ್‌.ಆರ್‌. ದ್ವಿತೀಯ, ಸಿಪಿಇಎಂಎಸ್‌ನ ಸಬೀಯಾ ಸುಲ್ತಾನ ತೃತೀಯ, ಎಸ್‌ಬಿಆರ್‌ನ ಕನಕಲತಾ ನಾಲ್ಕನೇ ಸ್ಥಾನ ಪಡೆದಿದ್ದಾರೆ. ರೂಟ್‌ 5 ರಲ್ಲಿ 8 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಸಿಪಿಎಎಂಎಸ್‌ನ ಭರತ ಪ್ರಥಮ, ಎಸ್‌ಬಿಆರ್‌ ವಿದ್ಯಾರ್ಥಿಗಳಾದ ಸಾಯಿಶಕ್ತಿ ದ್ವಿತೀಯ, ಸಮರ್ಥ ತೃತೀಯ, ರೋಹನ ನಾಲ್ಕನೇಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಎಸ್‌ಬಿಆರ್‌ನ ಖುಷಿ ಪ್ರಥಮ, ಓಂಕಾರಿ ದ್ವಿತೀಯ, ಅಪ್ಪಾ ಪಬ್ಲಿಕ್‌ ಶಾಲೆಯ ಲಕೀÒ$¾ ತೃತೀಯ ಹಾಗೂ ಎಸ್‌ ಆರ್‌ ಮೆಹತಾ ಶಾಲೆಯ ವರ್ಷಾ ನಾಲ್ಕನೇ ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ
ಹಾಗೂ ಪಾರಿತೋಷಕ ನೀಡಲಾಯಿತು. ನಾಗರಾಜ ಬಿ ಮಾಳಗೆ, ಅಶೋಕ, ಮಂಜುನಾಥ ಹಾಗೂ ಇತರರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

All set for the Indian Cultural Festival

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.