ಹದಗೆಟ್ಟ ಹೆದ್ದಾರಿಗಳಿಗೆ ಬೇಕಿದೆ ಕಾಯಕಲ್ಪ
Team Udayavani, Jun 8, 2022, 3:06 PM IST
ಅಫಜಲಪುರ: ತಾಲೂಕಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗಿದ್ದು, ಅವೀಗ ಹದಗೆಟ್ಟು ವರ್ಷಗಳೇ ಗತಿಸಿವೆ. ಆದರೆ ಸಂಬಂಧಪಟ್ಟವರು ಹೆದ್ದಾರಿಗಳನ್ನು ದುರಸ್ತಿ ಮಾಡುವ ಗೋಜಿಗೆ ಹೋಗುತ್ತಿಲ್ಲ. ಅವೀಗ ಕಾಯಕಲ್ಪಕ್ಕಾಗಿ ಕಾಯುತ್ತಿವೆ.
ತಾಲೂಕಿನ ಹೊಸೂರನಿಂದ ಕಲಬುರಗಿ ವರೆಗೆ ರಾಜ್ಯ ಹೆದ್ದಾರಿ, ಮಹಾರಾಷ್ಟ್ರ ಗಡಿಯಿಂದ ಅಫಜಲಪುರ ಮಾರ್ಗವಾಗಿ ಕಲಬುರಗಿ ವರೆಗೆ ರಾಷ್ಟ್ರೀಯ ಹದ್ದಾರಿ ಜಾಲವಿದೆ. ಉಳಿದ ಅನೇಕ ಕಡೆಗಳಲ್ಲಿ ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗಳಿವೆ. ಅವುಗಳು ನಿರ್ಮಾಣವಾಗಿ ಅನೇಕ ವರ್ಷಗಳೇ ಕಳೆದಿವೆ. ಈಗ ಅವು ಕಿತ್ತುಕೊಂಡು ಹೋಗಿ ಮೊಳಕಾಲುದ್ದ ಹೊಂಡಗಳು ಬಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ತಂದಿವೆ. ಹೆದ್ದಾರಿಗಳನ್ನು ಸರಿ ಮಾಡಬೇಕಿರುವ ಹೆದ್ದಾರಿ ಪ್ರಾಧಿಕಾರದವರು ಮತ್ತು ಇನ್ನಿತರ ಸಂಬಂಧಪಟ್ಟ ಇಲಾಖೆಯವರು ಸಮಸ್ಯೆ ಕಂಡು ಮೌನಕ್ಕೆ ಜಾರಿದ್ದಾರೆ. ಇವರು ಮೌನಕ್ಕೆ ಜಾರಿದ್ದರಿಂದ ನಿತ್ಯ ಒಂದಿಲ್ಲೊಂದು ರಸ್ತೆ ಅಪಘಾತಗಳು ಸಂಭವಿಸಿ ಜೀವ ಹಾನಿ ಸಂಭವಿಸುತ್ತಿವೆ.
ರಾಜಕಾರಣಿಗಳು ಬರುವಾಗಲಷ್ಟೇ ದುರಸ್ತಿ
ತಾಲೂಕಿಗೆ ಯಾವುದಾದರೂ ಕಾರ್ಯಕ್ರಮಗಳ ನಿಮಿತ್ತ ಬರುವ ಮಂತ್ರಿಗಳು, ದೊಡ್ಡ ರಾಜಕಾರಣಿಗಳು ಬರುವಾಗ ಮಾತ್ರ ಹೊಂಡ ಬಿದ್ದ ಹೆದ್ದಾರಿಗಳಲ್ಲಿ ಮಣ್ಣು ಮುಚ್ಚಲಾಗುತ್ತದೆ. ಆನಂತರ ಮತ್ತೆ ಅದೇ ದುಸ್ಥಿತಿ ಮುಂದುವರಿದಿರುತ್ತದೆ.
ನಿತ್ಯ ನರಕ ದರ್ಶನ
ಹದಗೆಟ್ಟ ಹೆದ್ದಾರಿಗಳು, ರಸ್ತೆಗಳಿಂದಾಗಿ ಜನಸಾಮಾನ್ಯರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಹಾಳಾದ ರಸ್ತೆಗಳಲ್ಲಿ ವಾಹನ ಸವಾರಿ ಮಾಡುವುದು ದುಸ್ತರವಾಗಿದೆ. ನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ವಾಹನ ಚಾಲಕರು ಅಫಜಲಪುರದ ರಸ್ತೆಗಳೆಂದರೆ ಭಯಗೊಳ್ಳುವಂತ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಜನಸಾಮಾನ್ಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಜಿಲ್ಲೆಗೆ ಬಂದಿದ್ದಾಗ ತಾಲೂಕಿನಲ್ಲಿರುವ ಹೆದ್ದಾರಿಗಳ ದುರಸ್ತಿಗೆ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳ ಲಾಗಿದೆ. ಅನುದಾನ ಬಂದ ಬಳಿಕ ಆದಷ್ಟು ಬೇಗ ಹೆದ್ದಾರಿಗಳನ್ನು ದುರಸ್ತಿ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. -ಎಂ.ವೈ. ಪಾಟೀಲ, ಶಾಸಕ
ಹೆದ್ದಾರಿಗಳು ಕೇವಲ ಹೆಸರಿಗಷ್ಟೇ ಇವೆ. ಇವು ಗ್ರಾಮೀಣ ರಸ್ತೆಗಳಿಗಿಂತ ಕಡೆಯಾಗಿವೆ. ಎಲ್ಲಿ ನೋಡಿದರೂ ಹೊಂಡಗಳು ತುಂಬಿದ ಹೆದ್ದಾರಿಯಲ್ಲಿ ಹಗಲಿನಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ರಾತ್ರಿ ಸಂದರ್ಭದಲ್ಲಿ ಸಂಚರಿಸೋದರಿಂದ ಯಮಲೋಕದ ಬಾಗಿಲು ಬಡಿದು ಬಂದಂತಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಹೆದ್ದಾರಿಗಳ ದುರಸ್ತಿ ಮಾಡಿಸಬೇಕು. -ಜೆ.ಎಂ. ಕೊರಬು, ಸಮಾಜ ಸೇವಕ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.