ಕಲೆಗಾರಿಕೆಗೆ ಪ್ರೋತ್ಸಾಹ ಅಗತ್ಯ: ಪಾಟೀಲ
Team Udayavani, Jul 17, 2017, 3:34 PM IST
ಕಲಬುರಗಿ: ಕಲೆಗಾರಿಕೆಗೆ ಸೋಲದ ಮನಸ್ಸುಗಳೇ ಇಲ್ಲ. ಹೀಗಾಗಿ ಅದ್ಭುತ ಶಕ್ತಿ ಅಡಗಿರುವ ಕಲೆಗಾರಿಕೆಗೆ ಸಾರ್ವಜನಿಕವಾಗಿ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಮಾಜಿ ಶಾಸಕ ಎಂ.ವೈ. ಪಾಟೀಲ ಹೇಳಿದರು.
ರವಿವಾರ ಇಲ್ಲಿನ ಸೇಡಂ ರಸ್ತೆಯ ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಎ.ಜಿ. ನೆಲ್ಲಗಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲೆಗಾರಿಕೆಗೆ ದೊಡ್ಡ ಶಕ್ತಿಯಿದ್ದು, ಕಲೆಯು ಹೃದಯದಿಂದ ಬರುವ ಅಭಿವ್ಯಕ್ತವಾಗಿದೆ. ಅಲ್ಲದೇ ಕಲೆಗೆ ಎಲ್ಲೇ ಮೀರಿದ ಪ್ರತಿಭೆಯಿದೆ. ಕಲೆಗಾರಿಕೆಯು ಆತನ ಮನಸ್ಸಿನ ಅಂತರಾಳದಿಂದ ಹೊರಬಂದಲ್ಲಿ ಹೆಚ್ಚು ಪ್ರಭಾವಶಾಲಿ ಆಗಿರುತ್ತದೆ ಎಂದರು.
ಒಟ್ಟಾರೆ ಮನಸ್ಸಿನೊಳಗಿನ ಅಭಿವ್ಯಕ್ತಿಯನ್ನು ಹೊರಗಿನ ಪ್ರಪಂಚಕ್ಕೆ ತೋರಿಸುವುದೇ ಕಲೆಗಾರಿಕೆ ಆಗಿದೆ ಎಂದು ಹೇಳಿದರು.
ಚಿತ್ರ ಕಲೆಗಾರಿಕೆಯು ಒಬ್ಬರದ್ದು ಕಟ್ಟಿಗೆಯಲ್ಲಿ ಅರಳಿದರೆ, ಮತ್ತೂಬ್ಬರದ್ದು ಕಲ್ಲಿನಲ್ಲಿ ಪ್ರಕಾಶಿಸುತ್ತದೆ. ಮಗದೊಬ್ಬರದ್ದು ಬಣ್ಣದ ಕುಂಚದಲ್ಲಿ ಅರಳುತ್ತದೆ. ಈ ಮೂರು ಕಲೆಗಾರಿಕೆಗೆ ಸೋಲದ ಮನಸ್ಸುಗಳಿಲ್ಲ. ಆದರೆ ನಿರೀಕ್ಷೆಗೆ ತಕ್ಕಂತೆ ಕಲಾವಿದರಿಗೆ ಪ್ರೋತ್ಸಾಹ ದೊರೆಯದಿರುವ ಕುರಿತಾಗಿ ಕಲಾಸಕ್ತರು ವಿಚಾರಿಸಿ ಸೂಕ್ತ ಹೆಜ್ಜೆ ಇಡಬೇಕೆಂದು ಹೇಳಿದರು. ಚಿತ್ರಕಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿವಾನಂದ ಕೊಪ್ಪದ ಮುಖ್ಯ ಅತಿಥಿಯಾಗಿ, ಹಿಂದಿನ ಕಾಲದಲ್ಲಿ ಕಲೆಗಾರಿಕೆಗೆ ರಾಜಾಶ್ರಯ ಸಿಗುತ್ತಿತ್ತು. ಆದರೆ ಈಗ ಕಲಾವಿದರಿಗೆ ಸಾರ್ವಜನಿಕವಾಗಿ ಬೆಂಬಲ ಕಡಿಮೆಯಾಗುತ್ತಿದೆ. ಕಲೆಗಾರಿಕೆ ಬೆಳವಣಿಗೆಗೆ ಸೂಕ್ತ ಪ್ರೋತ್ಸಾಹ ಅಗತ್ಯವಾಗಿದೆ ಎಂದರು. ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿ, ಕಲಾಕೃತಿಯಲ್ಲಿ ಜೀವಂತಿಕೆ ಅಡಗಿದೆ. ಭಾವನೆಗಳು
ಮಾತನಾಡಿಸುತ್ತವೆ. ಇಂತಹ ಕಲೆಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೈಕ ಭಾಗದ ಲೇಖಕರ ಪುಸ್ತಕಗಳನ್ನು ಖರೀದಿ
ಮಾಡುವ ರೀತಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಈ ಭಾಗದ ಕಲಾವಿದರ
ಕಲಾಕೃತಿಗಳ ಖರೀದಿಗೆ ಮುಂದಾಗಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಸಹ ಮುಖ್ಯ ಅತಿಥಿಯಾಗಿದ್ದರು. ಚೈತನ್ಯಮಯಿ ಆರ್ಟ್ ಗ್ಯಾಲರಿಯ ನಿರ್ದೇಶಕ ಎ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರು ಪಾಠ-ಪ್ರವಚನಕ್ಕೆ ಮಾತ್ರ ತಮ್ಮ ಚಿತ್ರಕಲೆಗಾರಿಕೆ ಸಿಮೀತಗೊಳಿಸಿರುತ್ತಾರೆ. ಆದರೆ ಎ.ಜಿ. ನೆಲ್ಲಗಿ ಚಿತ್ರಕಲಾ ಶಿಕ್ಷಕ ವೃತ್ತಿಯೊಂದಿಗೆ ಇಷ್ಟೊಂದು
ಕಲಾಕೃತಿಗಳನ್ನು ರಚಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಹಿರಿಯ ಕಲಾವಿದರಾದ ಕೆ.ಎಸ್.ಸರೋದೆ, ಡಾ| ಡಿ.ಎಂ.ಮಿಣಜಗಿ, ಅಂಬಾರಾಯ ಚಿನಮಳ್ಳಿ, ಎಂ.ಸಂಜೀವ, ಡಾ| ರೆಹಮಾನ ಪಟೇಲ, ಸೂರ್ಯಕಾಂತ ನಂದೂರ, ಶಶಿಕಾಂತ ಪಾಟೀಲ, ವಿಟಿಎನ್, ನಾರಾಯಣ ಜೋಶಿ ಮುಂತಾದವರಿದ್ದರು.
ಕಲಾವಿದ, ಶಿಕ್ಷಕ ಎ.ಜಿ.ನೆಲ್ಲಗಿ ಪ್ರಾಸ್ತಾವಿಕ ಮಾತನಾಡಿದರು. ದೌಲತ್‌ರಾಯ ಎಸ್. ದೇಸಾಯಿ ನಿರೂಪಿಸಿ, ವಂದಿಸಿದರು.
ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮೂರು ದಿನಗಳ ಕಾಲ ಚಿತ್ರಕಲಾ
ಪ್ರದರ್ಶನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.