ನೆಹರು ವಿಶ್ವಕಂಡ ಅಪರೂಪದ ದಾರ್ಶನಿಕ
Team Udayavani, May 28, 2022, 11:35 AM IST
ಕಲಬುರಗಿ: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ವಿಶ್ವ ಕಂಡ ಅಪರೂಪದ ದಾರ್ಶನೀಕ ರಾಜಕಾರಣಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ನೆಲೋಗಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದ ಮೊದಲ ಮತ್ತು ದೀರ್ಘಾವಧಿ ಪ್ರಧಾನ ಮಂತ್ರಿ ನೆಹರು. ಅವರ ದೂರದೃಷ್ಟಿಯಿಂದ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿಸಲು ಸುದೀರ್ಘ ಹೋರಾಟದಲ್ಲಿ ಭಾಗವಹಿಸಿದ್ದ ನೆಹರು, ಯುವ ಭಾರತ ಪ್ರಯತ್ನಗಳಿಂದ ಮಾತ್ರವೇ ರೂಪುಗೊಳ್ಳುತ್ತದೆಂದು ನಂಬಿದ್ದರು ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ ಮಾತನಾಡಿ, 1950ರಲ್ಲಿ ವಲ್ಲಭಭಾಯಿ ಪಟೇಲ್ ಅವರ ಮರಣದ ನಂತರ, ಕಾಂಗ್ರೆಸ್‌ನಲ್ಲಿ ತಮ್ಮ ಸಹೋದ್ಯೋಗಿಗಳ ನಡುವೆ ಎತ್ತರಕ್ಕೆ ಏರಿದರು. ಶಿಕ್ಷಣ ಸಂಸ್ಥೆಗಳು, ಉಕ್ಕಿನ ಸ್ಥಾವರಗಳು ಮತ್ತು ಅಣೆಕಟ್ಟುಗಳಿಂದ ಶಕ್ತಿಯುತವಾದ ಭಾರತದ ಬಗ್ಗೆ ಅವರ ದೃಷ್ಟಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿತ್ತು. ಅಂತಹ ಶಕ್ತಿ ಅವರಿಗೆ ಮಾತ್ರವೇ ಇತ್ತು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಭಾರತವು ರೋಮಾಂಚಕ ಪ್ರಜಾಪ್ರಭುತ್ವ, ಕೈಗಾರಿಕಾ ಶಕ್ತಿ ಕೇಂದ್ರ, ಜ್ಞಾನದ ಪಾಲುದಾರ, ಜಾಗತಿಕವಾಗಿ ಗೌರವಾನ್ವಿತ ಮಿಲ್ಟ್ರಿ ಶಕ್ತಿ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಆವಿಷ್ಕಾರದ ಹೆಗ್ಗಳಿಕೆ ನೆಹರು ಅವರಿಗೆ ಸಲ್ಲಬೇಕು ಎಂದರು.
ದಕ್ಷಿಣ ನಗರ ಬ್ಲಾಕ್ ಸಮಿತಿ ಹಿಂದುಳಿದ ವಿಭಾಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮಹಿಳಾ ಅಧ್ಯಕ್ಷೆ ಲತಾ ರವಿ ರಾಠೊಡ, ರೇಣಿಕಾ ಸಿಂಗೆ ಮತ್ತಿತರರು ಇದ್ದರು.
ಮಹಾತ್ಮ ಗಾಂಧಿ ಅವರ ರಾಜಕೀಯ ಉತ್ತರಾಧಿಕಾರಿ ಆಗಿದ್ದ ನೆಹರು ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದ್ದರು. ನೆಹರು ಅವರ ಮೊದಲ ಬದ್ಧತೆ ಭಾರತವನ್ನು ಸ್ವಾವಲಂಬಿ, ಆರ್ಥಿಕತೆ ರಾಷ್ಟ್ರವನ್ನಾಗಿಸುವುದೇ ಆಗಿತ್ತು. ಆಧುನಿಕ ಕಲಿಕೆ ಮತ್ತು ದೈತ್ಯ ಸಾರ್ವಜನಿಕ ವಲಯದ ಉದ್ಯಮಗಳ ದೇವಾಲಯಗಳನ್ನು ಸ್ಥಾಪಿಸಿದರು. ದೂರ ದೃಷ್ಟಿಯಿಂದ ಭಾರತ ಪ್ರಕಾಶಿಸುವಂತೆ ಮಾಡಿದ್ದರು. –ಶರಣಕುಮಾರ ಮೋದಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.