ಕಮಿಷನರೇಟ್ ಕಚೇರಿಗೆ ನೂತನ ಕಟ್ಟಡ
Team Udayavani, Oct 22, 2019, 12:04 PM IST
ಕಲಬುರಗಿ: ಕಳೆದ ಫೆಬ್ರವರಿಯಲ್ಲಿ ಕಾರ್ಯಾರಂಭವಾಗಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, 18.05 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ ತಲೆ ಎತ್ತಲಿದೆ.
ನಗರದ ಸೂಪರ್ ಮಾರ್ಕೆಟ್‌ನ ಹಳೆ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಾಣವಾಗಲಿದೆ. ರಾಜ್ಯ ಪೊಲೀಸ್ ಗೃಹ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದೆ. ರಾಯಚೂರು ಜಿಲ್ಲೆ ಮಾನ್ವಿಯ ಎಂ. ಈರಣ್ಣ ಎಂಬುವರು ಗುತ್ತಿಗೆ ಪಡೆದಿದ್ದಾರೆ. ಹನ್ನೊಂದು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಫೆ.23ರಿಂದ ನಗರದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿ (ಹಳೆ ಐಜಿಪಿ ಕಚೇರಿ)ಯಲ್ಲಿ ಕಮಿಷನರೇಟ್ ಕಚೇರಿ ತಾತ್ಕಾಲಿಕವಾಗಿ ಆರಂಭವಾಗಿದೆ. ಸುಮಾರು 39.56 ಲಕ್ಷ ರೂ. ವೆಚ್ಚದಲ್ಲಿ ಕಚೇರಿ ನವೀಕರಿಸಿ ಅದರಲ್ಲೇ ಕಾರ್ಯಾಲಯನಡೆಸಲಾಗುತ್ತಿದೆ.
ಆರಂಭದಲ್ಲಿ ಈಶಾನ್ಯ ವಲಯದ ಐಜಿಪಿ ಮನೀಷ್ ಖಬೇಕರ್ ಪ್ರಭಾರಿ ಆಯುಕ್ತರಾಗಿ ಜವಾಬ್ದಾರಿ ನಿರ್ವಹಿಸಿಕೊಂಡಿದ್ದರು. ಈಗ ಆಯುಕ್ತಾಲಯದ ಮೊದಲ ಪೂರ್ಣಪ್ರಮಾಣದ ಆಯುಕ್ತರಾಗಿ ಎಂ.ಎನ್ .ನಾಗರಾಜು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆ.9ರಂದು ಅಧಿಕಾರ ವಹಿಸಿಕೊಂಡಿರುವ ಎಂ.ಎನ್.ನಾಗರಾಜು, ರವಿವಾರ (ಅ.20) ಆಯುಕ್ತಾಲಯಕ್ಕೆ ಗುರುತಿಸಿರುವ ಸ್ಥಳ ಪರಿಶೀಲಿಸಿದರು. ಅಲ್ಲಿ ಮುಳ್ಳು-ಕಂಟಿ ಬೆಳೆದಿದ್ದು, ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನುತ್ತವೆ ಪೊಲೀಸ್ ಇಲಾಖೆಯ ಮೂಲಗಳು.
ಸುಸಜ್ಜಿತ ಕಟ್ಟಡ: ಕಲಬುರಗಿ ಪೊಲೀಸ್ ಆಯುಕ್ತಾಲಯ ರಾಜ್ಯದ ಆರನೇ ಆಯುಕ್ತಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಆಯುಕ್ತಾಲಯವು ಒಟ್ಟು 8,720 ಚದರ ಮೀಟರ್ ವಿಸ್ತೀರಣೆದಲ್ಲಿ ತಲೆ ಎತ್ತಲಿದೆ. ಸ್ಟಿಲ್ಟ್ ಮಹಡಿ, ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಕಟ್ಟಡ ಇದಾಗಿದೆ.
ನೈಸರ್ಗಿಕ ಗಾಳಿ ಮತ್ತು ಬೆಳಕು ಹೊಂದಿರುವ ಕಟ್ಟಡ ವಿನ್ಯಾಸ ಮಾಡಲಾಗಿದೆ. ಸ್ಟಿಲ್ಟ್ ಮಹಡಿಯಲ್ಲಿ ವಾಹನ ನಿಲುಗಡೆ, ಚಾಲಕರು, ಭದ್ರತಾ ಸಿಬ್ಬಂದಿ ಮತ್ತು ಶೌಚಾಲಯದ ಕೋಣೆ ಹೊಂದಿರಲಿದೆ. ನೆಲ ಮಹಡಿಯಲ್ಲಿ ಮಹಿಳಾ ಪೊಲೀಸ್ ವಿಭಾಗ, ಸೈಬರ್ ವಿಭಾಗ, ಪಾಸ್‌ಪೋರ್ಟ್ ವಿಭಾಗ, ಅಕೌಂಟ್ ವಿಭಾಗ, ಕಂಪ್ಯೂಟರ್-ಸರ್ವರ್ ಕೋಣೆ, ದಾಖಲಾತಿ ಕೋಣೆ, ಸಿಸಿಆರ್‌ಬಿ ಮತ್ತು ಸಿಸಿಐ ಸಿಬ್ಬಂದಿ ಕೊಠಡಿ ಇರಲಿದೆ.
ಮೊದಲ ಮಹಡಿ ಆಯುಕ್ತಾಲಯದ ಮುಖ್ಯ ವಿಭಾಗಗಳನ್ನು ಹೊಂದಿರಲಿದೆ. ಆಯುಕ್ತರ ಕಚೇರಿ, ಮೀಟಿಂಗ್ ಹಾಲ್, ಕಾನೆ#ರನ್ಸ್ ಹಾಲ್, ಅಧಿಕಾರಿಗಳ ವಿಶ್ರಾಂತಿ ಕೋಣೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ನ್ಯಾಯಾಂಗ ವಿಭಾಗ, ನ್ಯಾಯಾಂಗ ಸಿಬ್ಬಂದಿ ಕೋಣೆ, ವೈರ್‌ಲೆಸ್ ವಿಭಾಗ, ಎಸಿಪಿ, ಡಿಸಿಪಿ 1, 2 ಮತ್ತು 3 ಕೊಠಡಿಗಳು, ಬೆರಳೆಚ್ಚು, ಫೋಟೋಗ್ರಫಿ, ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ಊಟದ ಕೋಣೆಗಳನ್ನು ನಿರ್ಮಿಸಲಾಗುತ್ತದೆ.
ಎರಡನೇ ಮಹಡಿಯಲ್ಲಿ ಕಂಪ್ಯೂಟರ್ ತರಬೇತಿ ವಿಭಾಗ, ಸಿಸಿಟಿವಿ ನಿಗಾ ವಿಭಾಗ, ಟ್ರಾಫಿಕ್ ನಿಯಂತ್ರಣ ಕೊಠಡಿ, ಎಸಿಪಿ, ಡಿಸಿಪಿ 4, 5 ಮತ್ತು 6 ಕೋಣೆ ಮತ್ತು ಗ್ರಂಥಾಲಯ ಇರಲಿದೆ. ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಎ, ಬಿ, ಸಿ ಮತ್ತುಡಿ ಹೀಗೆ ನಾಲ್ಕು ಉಪ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಉಪ ವಿಭಾಗದ ನಾಲ್ಕು (ಗ್ರಾಮೀಣ, ವಿಶ್ವವಿದ್ಯಾಲಯ, ಫರತಾಬಾದ್ ಮತ್ತು ಎಂ.ಬಿ.ನಗರ) ಠಾಣೆಗಳು ಸಹ ಆಯುಕ್ತಾಲಯದ ವ್ಯಾಪ್ತಿಗೆ ಒಳಪಟ್ಟಿವೆ.
-ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.