ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!
Team Udayavani, Oct 4, 2024, 4:45 PM IST
ಉದಯವಾಣಿ ಸಮಾಚಾರ
ಕಲಬುರಗಿ: ಇಲ್ಲಿನ ಕಲಬುರಗಿ-ಬೀದರ್ -ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಲು ಗುಣಮಟ್ಟದಲ್ಲಿ ಹೆಚ್ಚಳದ ಸಾಧನೆ ಮಾಡಿದ್ದು, ಒಕ್ಕೂಟದ ಹಾಲಿಗೆ ನೆರೆಯ ಮಹಾರಾಷ್ಟ್ರದಲ್ಲೂ ಬೇಡಿಕೆ ಬಂದಿದೆ. ಕಳೆದ ಒಂದೂವರೆ ದಶಕದಿಂದ ಕಲಬುರಗಿಗೆ ಮಹಾರಾಷ್ಟ್ರದ ಹಾಲು ಎಗ್ಗಿಲ್ಲದೆ ಪೂರೈಕೆ ಯಾಗುತ್ತಿತ್ತು. ಹತ್ತಾರು ಖಾಸಗಿ ಕಂಪನಿಗಳು
ತಮ್ಮ ಉತ್ಪನ್ನಗಳಿಗೆ ಕಲಬುರಗಿಯನ್ನೇ ಪ್ರಮುಖ ಮಾರುಕಟ್ಟೆಯಾಗಿಸಿಕೊಂಡಿದ್ದವು. ಈಗಲೂ ಹಾಲು ಬರುತ್ತದೆಯಾದರೂ ಮೊದಲಿನಷ್ಟಿಲ್ಲ.
ಈಗ ಗ್ರಾಹಕರು “ನಂದಿನಿ’ ಹಾಲಿಗೆ ಹೆಚ್ಚಾಗಿ ಮೊರೆ ಹೋಗುತ್ತಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ಕಲಬುರಗಿ-ಬೀದರ್-ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಗುಣಮ ಟ್ಟದಲ್ಲಿ ಶ್ರೇಷ್ಠತೆ ಹೆಚ್ಚಿಸಿಕೊಂಡ ಪರಿಣಾಮ ಇದೇ ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಸರಬರಾಜು ಆಗುತ್ತಿದೆ. ಒಕ್ಕೂಟದ ಎಮ್ಮೆಯ ಹಾಲು ದಿನಾಲು 15 ಸಾವಿರ ಲೀಟರ್‌ನಷ್ಟು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಸರಬರಾಜು ಆಗುತ್ತಿದೆ.
ಕೊಲ್ಹಾಪುರದ ಶರದ್ ಮಲ್ಟಿ ಕೋ-ಆಪರೇಟಿವ್ ಸೊಸೈಟಿಗೆ ಕಲಬುರಗಿ ಯಿಂದ ದಿನಾಲೂ ಹಾಲು ಪೂರೈಕೆಯಾಗುತ್ತಿದೆ. ಇದು ಒಕ್ಕೂಟಕ್ಕೆ ಲಾಭ ತರುವಂತಾಗಿದೆ. ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ಹಾಗೂ ತುಪ್ಪದ ದರ ಕಡಿಮೆಯಾಗಿರುವಾಗ ಈ ಹಾಲು ಪೂರೈಕೆ ಒಕ್ಕೂಟಕ್ಕೆ ಬಲ ತುಂಬಿದಂತಾಗಿದೆ.
ಹಾಲಿನ ಗುಣಮಟ್ಟತೆ ಹೆಚ್ಚಿಸಲು ಹಾಗೂ ನಿಖರವಾಗಿ ಅಳೆಯಲು ಒಕ್ಕೂಟದಲ್ಲಿ 1.50 ಕೋಟಿ ರೂ. ಮೊತ್ತದ ಯಂತ್ರವನ್ನು
ಅಳವಡಿಸಲಾಗಿದೆ. ಅಲ್ಲದೇ ಹಾಲಿನ ಉತ್ಪಾದನೆ ಹೆಚ್ಚಿಸಲು ಹೊಸದಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ರಚನೆ, ಸಂಘಗಳ ಸದಸ್ಯರಿಗೆ ಪರಿಣಾಮಕಾರಿ ತರಬೇತಿ, ಕೃತಕ ಗರ್ಭದಾರಣೆ ಕೇಂದ್ರಗಳ ಹೆಚ್ಚಳ ಸೇರಿ ಹತ್ತಾರು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 85 ಸಾವಿರ ಲೀಟರ್ ಹಾಲಿಗೆ ಬೇಡಿಕೆಯಿದ್ದು, ಈಗ 70 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಇನ್ನುಳಿದ
15 ಸಾವಿರ ಲೀಟರ್ ಹಾಲನ್ನು ಶಿವಮೊಗ್ಗದಿಂದ ತರಿಸಲಾಗುತ್ತಿದೆ.
ಈಚೆಗೆ ನಡೆದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಕಾರ್ಯ ನಿರೂಪಣಾ ಸಮಿತಿ ಸಭೆಯಲ್ಲಿ ಪ್ರಥಮ ಬಾರಿಗೆ ಶೇ.96ರಷ್ಟು ಗುಣಮಟ್ಟ ಸಾಧನೆಗೆ ಸಂಬಂಧಿಸಿದಂತೆ ಶ್ರೇಷ್ಠತೆ ಪ್ರಮಾಣ ದೊರೆತಿದೆ. 1985ರಲ್ಲಿ ಆರಂಭವಾದ ಈ ಒಕ್ಕೂಟ ನಾಲ್ಕು ದಶಕಗಳ ಅವಧಿದಲ್ಲಿ ಇಂತಹ ಪ್ರಶಂಸೆ ಪಡೆದಿರುವುದು ಇದೇ ಮೊದಲು. ಈ ಹಿಂದೆ ಅಗತ್ಯಕ್ಕೆ ತಕ್ಕ ಹಾಲು ಉತ್ಪಾದನೆ ಹಾಗೂ ಶೇಖರಣೆ ಒತ್ತಟ್ಟಿಗಿರಲಿ, ಬೇಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಬೇರೆ ಕಡೆಯಿಂದ ತರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
*ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.