ಜನರ ಅನುಕೂಲಕ್ಕಾಗಿ ನೂತನ ತಾಲೂಕು ರಚನೆ
Team Udayavani, Mar 12, 2018, 12:49 PM IST
ಶಹಾಬಾದ: ಚಿತ್ತಾಪುರ ತಾಲೂಕು ಮೂರು ತಾಲೂಕು ಆಗಿ ವಿಂಗಡನೆಯಾಗಿರುವುದು ಐತಿಹಾಸಿಕ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ನೂತನ ತಾಲೂಕು ಮಾಡಿಕೊಟ್ಟಿದೆ ಎಂದು ಲೋಕಸಭಾ ಸದಸ್ಯ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ರವಿವಾರ ಆಯೋಜಿಸಲಾಗಿದ್ದ ನೂತನ
ಶಹಾಬಾದ ತಾಲೂಕು ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸರ್ಕಾರದಂದ ಈಗಾಗಲೇ ಗುರುಮಿಠಕಲ್, ಕಾಳಗಿ, ಕಮಲಾಪುರ, ಯಡ್ರಾಮಿ ಹಾಗೂ ಶಹಾಬಾದ ತಾಲೂಕು ಉದ್ಘಾಟನೆ ಮಾಡಲಾಗಿದೆ. ಶಹಾಬಾದ ಕಚೇರಿ ಪೀಠೊಪಕರಣಕ್ಕೆ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ ತಾವು 10 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ಘೋಷಿಸಿದರು.
371ನೇ(ಜೆ) ಕಲಂ ಜಾರಿಯಾಗಿದ್ದರಿಂದ ಬೇರೆಯವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್.ಕೆ.ಪಾಟೀಲ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಬೇಡ ಎಂದರೂ ಈ ಭಾಗದಿಂದ ಹರಪನಹಳ್ಳಿಯವರು ಹೊರ ಹೋದರು. ಈಗ ನಮ್ಮ ಭಾಗಕ್ಕೆ ಮತ್ತೆ ಬಂದಿರುವುದು ಸ್ವಾಗತ. ಆದರೆ ಮತ್ತೆ ಬೇರೆ ಹಳ್ಳಿಗಳನ್ನು ಸೇರಿಸುವುದಕ್ಕೆ ಈ ಭಾಗದ ಜನರು ಸಹಿಸಲ್ಲ. ಅಲ್ಲದೇ ನಾನೇ ಮೊದಲು ವಿರೋಧಿ ಸುತ್ತೇನೆ ಎಂದು ಹೇಳಿದರು.
ಒಂದು ಹನಿ ರಕ್ತ ಸುರಿಸದೇ ಎಲ್ಲರ ಮನವೊಲಿಸಿ, ಬೆಂಬಲ ಪಡೆದು 371ನೇ (ಜೆ) ಕಲಂ ಜಾರಿಗೆ ತಂದಿದ್ದೇವೆ. ಇದು
ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲೇ ಇದೆ. ಕೆಲವರು ಸಂವಿಧಾನವೇ ಬದಲಾಯಿಸುತ್ತೆವೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಬಿಟ್ಟರೆ ತಾನೇ ಬದಲಾಯಿಸಬಹುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ತಾಲೂಕು
ಕೇಂದ್ರಗಳು ಹತ್ತಿರವಾಗಿದ್ದರೆ ಜನರಿಗೆ ಅನುಕೂಲವಾಗುತ್ತದೆ. ನಗರದಲ್ಲಿ ತಹಶೀಲ್ದಾರ ಕಚೇರಿಯನ್ನು ತಾತ್ಕಾಲಿಕವಾಗಿ ರೈಲ್ವೆ ನಿಲ್ದಾಣದ ಬಳಿಯಿರುವ ಪ್ರೌಢಶಾಲೆ ಆವರಣದಲ್ಲಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ಸಂವಿಧಾನ ಬದಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದು ಬಿಜೆಪಿ ಇರಲಿ, ಕಾಂಗ್ರೆಸ್. ಜೆಡಿಎಸ್‌ಯೇ ಇರಲಿ. ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಹೇಳಿದವರು ಕ್ಷಮೆಯಾಚನೆ ಮಾಡಿದ್ದಾರೆ.ಅವರ ಹೇಳಿಕೆಗೆ ಬೆಲೆಯಿಲ್ಲದಂತಾಗಿದೆ. ಅದನ್ನು ಬದಲಾಯಿಸಲು ಹೋದರೆ ಅವರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್ ಎಂ. ಖರ್ಗೆ, ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ವಿಧಾನ ಪರಿಷತ್ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ, ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ, ಚಿತ್ತಾಪುರ ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ, ವಿಜಯಕುಮಾರ ರಾಮಕೃಷ್ಣ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಷಮ್ ಖಾನ್, ಜಿಪಂ ಸದಸ್ಯ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೆದಾರ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಭೀಮಣ್ಣ ಸಾಲಿ, ಚಂದ್ರಿಕಾ ಪರಮೇಶ್ವರ, ಡಾ| ರಶೀದ್ ಮರ್ಚಂಟ್, ಶಾಮ ನಾಟೇಕಾರ, ಬಾಲಕಿಶನ ವರ್ಮಾ, ಸಿ.ಎ. ಪಾಟೀಲ, ಜಗನ್ನಾಥ, ಮಾಪಣ್ಣ ಗಂಜಗೇರಿ, ಕಿರಣಬಾಬು ಕೋರೆ, ಶಿವರಾಜ ಕೋರೆ, ಶರಣಬಸಪ್ಪ ಪಗಲಾಪುರ, ನಾಮದೇವ ಸಿಪ್ಪಿ ಇದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ನೂತನ ಶಹಾಬಾದ ತಾಲೂಕು ವ್ಯಾಪ್ತಿಯಲ್ಲಿ 12 ಕಂದಾಯ ಗ್ರಾಮಗಳು, ಒಂದು ಜಿ.ಪಂ. ಕ್ಷೇತ್ರ, 3 ತಾಪಂ, 4 ಗ್ರಾಪಂ, 1 ನಗರಸಭೆ ಒಳಗೊಂಡಿದ್ದು, ನೂತನ ತಾಲೂಕಿನ ಜನಸಂಖ್ಯೆ 96,430 ಸಾವಿರಕ್ಕಿಂತ ಹೆಚ್ಚು ಇದೆ. ಈಗಾಗಲೆ ಖಜಾನೆ, ಎಪಿಎಂಸಿ, ಜೆಸ್ಕಾಂ ತಾಲೂಕು ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಕಚೇರಿ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಒಂದು ತಿಂಗಳಲ್ಲಿ ಎಲ್ಲ ಕಚೇರಿಗಳು ಕಾರ್ಯರಂಭ ಮಾಡಲಿವೆ ಎಂದು ಹೇಳಿದರು. ತಹಶೀಲ್ದಾರ ಮಲ್ಲೇಶಪ್ಪ ತಂಗಾ ಸ್ವಾಗತಿಸಿದರು. ತಾಪಂ ಅಧಿಕಾರಿ ಲಕ್ಷ್ಮಣ ಶೃಂಗೇರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.