ನಿಂಬಾಳ: ಪುರಾಣ ಮಂಗಲೋತ್ಸವ
Team Udayavani, Feb 26, 2017, 2:54 PM IST
ಕಲಬುರಗಿ: ಆಳಂದ ತಾಲೂಕಿನ ನಿಂಬಾಳದ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ 11ನೇ ವರ್ಷದ ಜಾತ್ರಾ ಮಹೋತ್ಸವ 11 ದಿನಗಳ ಕಾಲ ನಡೆದು ಬಂದ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಶಿವರಾತ್ರಿಯಂದು ನಡೆಯಿತು.
ಪಂಡಿತರಾದ ಶಿವಲಿಂಗಯ್ಯ ಶಾಸ್ತ್ರೀಗಳು ಗರೂರ ಅವರಿಂದ ಪುರಾಣ ನಡೆದು ಬಂದಿದ್ದರೆ ಶಿವಶರಣ ಸ್ವಾಮಿ ಅವರಿಂದ ಗವಾಯಿ ಹಾಗೂ ಷಣ್ಮುಖಯ್ಯ ಸ್ವಾಮಿ ಅವರಿಂದ ತಬಲಾಸಾತ್ ಜರುಗಿತು. ಶಿವರಾತ್ರಿಯಂದು ಬೆಳಗ್ಗೆ 6:00ಕ್ಕೆ ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಜರುಗಿದವು.
ತದನಂತರ ಮಲ್ಲಿಕಾರ್ಜುನ ದೇವರ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ಭಜನೆಯೊಂದಿಗೆ ಜರುಗಿತು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಯಶ್ವಂತ ಭತ್ತಾ, ಪರಮೇಶ್ವರ ಲೆಂಡೆ,
ಶಿವಲಿಂಗಪ್ಪ ಕಲಶೆಟ್ಟಿ, ದುಂಡಪ್ಪ ಶೆಟ್ಟಿಕಾರ, ಚಂದ್ರಶಾ ಪಾಗಾ, ಅಂಬಣ್ಣ ಬಮ್ಮಣಗಿ, ಶರಣಬಸಪ್ಪ ಭತ್ತಾ, ಬಸವರಾಜ ಶೆಟ್ಟಿಕಾರ, ಕಾಶಿರಾಯ ಬಮ್ಮಣಗಿ, ಹಣಮಂತ ಕಂಬಾರ, ಸಿದ್ಧಣ್ಣ ಸಾತಪೂರ, ಪ್ರಶಾಂತ ಪಾಗಾ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ
Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು