ಇಎಸ್‌ಐಯಲ್ಲಿ ನಿಮ್ಹಾನ್ಸ್ ಶಾಖೆ: ಡಾ| ಜಾಧವ
Team Udayavani, Jun 24, 2020, 8:04 AM IST
ಕಲಬುರಗಿ: ಇಲ್ಲಿನ ಇಎಸ್‌ಐ (ವೈದ್ಯಕೀಯ ಕಾಲೇಜು)ದಲ್ಲಿ ನಿಮ್ಹಾನ್ಸ್ ಶಾಖೆ ಪ್ರಾರಂಭಿಸುವ ನಿಟ್ಟಿನಲ್ಲಿ ನಿರ್ದೇಶಕ ಡಾ| ಬಿ.ಎನ್. ಗಂಗಾಧರ ಅವರನ್ನು ಸಂಸದ ಡಾ| ಉಮೇಶ ಜಾಧವ ಮಂಗಳವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದರು.
ಸುಸಜ್ಜಿತ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಲೇಜಿನ ಯಾವ ಕಟ್ಟಡದಲ್ಲಿ ಶಾಖೆ ಪ್ರಾರಂಭಿಸುವ ಜತೆಗೆ ಅಗತ್ಯ ಅನುದಾನ ಒದಗಿಸುವ ಕುರಿತಾಗಿ ಸಂಸದರು ನಿಮ್ಹಾನ್ಸ್ ನಿರ್ದೇಶಕರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದರು. ಇಎಸ್‌ಐಯಲ್ಲಿ ನಿಮ್ಹಾನ್ಸ್ ಶಾಖೆಯಾದರೆ ಮಾನಸಿಕ ರೋಗಿಗಳು ಹಾಗೂ ಮೆದುಳು ಜ್ವರದ ರೋಗಿಗಳು ದೂರದ ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಮೆದುಳು ಜ್ವರಕ್ಕೆ ತುರ್ತಾಗಿ ಚಿಕಿತ್ಸೆ ದೊರಕಬೇಕಾಗುತ್ತದೆ. ಹೀಗಾಗಿ ಶಾಖೆಯಾದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಸಂಸದರು ನಿರ್ದೇಕರ ಗಮನಕ್ಕೆ ತಂದರು.
ನಿಮ್ಹಾನ್ಸ್ ನಿರ್ದೇಶಕ ಡಾ| ಬಿ.ಎನ್. ಗಂಗಾಧರ ಅವರು ಕಲಬುರಗಿಯ ಇಎಸ್‌ಐಯಲ್ಲಿ ನಿಮಾನ್ಸ್ ಶಾಖೆ ಪ್ರಾರಂಭ ಮಾಡಲು ಬೇಕಾಗಿರುವ ಎಲ್ಲ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮುಖ್ಯವಾಗಿ ಕಟ್ಟಡವನ್ನು ಗುರುತಿಸಲಾಗಿದೆ. ಜತೆಗೆ ತಾಂತ್ರಿಕ ಬದಲಾವಣೆ ಬಗ್ಗೆಯೂ ಸಮಾಲೋಚಿಸಲಾಗಿದೆ. ಸಿಬ್ಬಂದಿ ನಿಯೋಜನೆಯೂ ಅಂತಿಮ ಹಂತದಲ್ಲಿದೆ. ಒಟ್ಟಾರೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಮನ್ವಯ ಹೊಂದಿ ಕಾರ್ಯಾರಂಭಕ್ಕೆ ಮುಂದಾಗಲಾಗುವುದು ಎಂದರು. ಎಲ್ಲೂ ಅಡೆತಡೆಯಾಗದು: ಕಲಬುರಗಿ ಇಎಸ್‌ಐಯಲ್ಲಿ ನಿಮ್ಹಾನ್ಸ್ ಶಾಖೆ ಆರಂಭವಾಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಳಿ ಎಲ್ಲಾದರೂ ಸ್ವಲ್ಪ ತಡೆಯಾದರೂ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸದ ಡಾ| ಉಮೇಶ ಜಾಧವ ನಿಮ್ಹಾನ್ಸ್ ನಿರ್ದೇಶಕರಿಗೆ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.