ನಿತೀನ ಗುತ್ತೇದಾರ ಜನ್ಮ ದಿನಾಚರಣೆ
Team Udayavani, Sep 30, 2018, 11:03 AM IST
ಕಲಬುರಗಿ: ಜಿಪಂ ಮಾಜಿ ಅಧ್ಯಕ್ಷ, ಯುವ ನೇತಾರ ನಿತೀನ ವಿ. ಗುತ್ತೇದಾರ ಅವರ 36ನೇ ಜನ್ಮ ದಿನಾಚರಣೆ ಶನಿವಾರ ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ನಡೆಯಿತು. ನಗರದ ಯಶ್ ಕೋಠಾರಿ ಭವನದಲ್ಲಿ ಯುವ ನಾಯಕ ನಿತಿನ್ ಗುತ್ತೇದಾರ ಅಭಿಮಾನಿಗಳು ಜನ್ಮದಿನ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ, ಮಾಜಿ ಸಚಿವರಾದ ಕೆ.ಬಿ. ಶಾಣಪ್ಪ, ಬಾಬುರಾವ್ ಚಿಂಚನಸೂರ, ಬಾಬುರಾವ ಚವ್ಹಾಣ, ಮುಖಂಡರಾದ ಚಂದು ಪಾಟೀಲ, ಸುಭಾಷ
ರಾಠೊಡ ಹಾಗೂ ನಾಮದೇವ ರಾಠೊಡ ಮಾತನಾಡಿ, ಕಿರಿಯ ವಯಸ್ಸಲ್ಲೇ ರಾಜಕೀಯದಲ್ಲಿ ಉತ್ತಮ ಹೆಸರು ಮಾಡಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.
ಗುತ್ತೇದಾರ ಬಿಜೆಪಿ ಸೇರ್ಪಡೆಯಿಂದ ಆನೆಬಲ ಬಂದಂತಾಗಿದೆ. ಪಕ್ಷ ಸಹ ಅವರಿಗೆ ಎಲ್ಲ ಸ್ಥಾನಮಾನ ನೀಡಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳಿಗೆ ಹೋಗಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ನಂತರ ನಿತೀನ್ ಗುತ್ತೇದಾರ ಮಾತನಾಡಿ, ತಮ್ಮೆಲ್ಲರ ಪ್ರೀತಿ ಪಾತ್ರದಿಂದ ಹಾಗೂ ಹಿತೈಷಿಗಳ ಶುಭಹಾರೈಕೆಯಿಂದ ಸಾಧ್ಯವಾದ ಮಟ್ಟಿಗೆ ಕೆಲಸ ಮಾಡುತ್ತಿದ್ದೇನೆ. ಮುಂದಿನ ವರ್ಷ ಸಮಾಜಮುಖೀ ಕೆಲಸಗಳ ಮೂಲಕ ಜನ್ಮ ದಿನವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು.
ಮುಖಂಡರಾದ ಸೂರ್ಯಕಾಂತ ನಾಕೇದಾರ, ಮಹಾದೇವ ಗುತ್ತೇದಾರ್, ವಿಶ್ವನಾಥ ರೇವೂರ, ಕಲ್ಯಾಣರಾವ ನಾಗೋಜಿ, ಗುರು ಸಾಲಿಮಠ, ಸುನೀಲ್ ಶೆಟ್ಟಿ, ದತ್ತು ಪಾಟೀಲ್ ಗೌಡಗಾಂವ, ವಿನಯ ಗುತ್ತೇದಾರ, ವಿಶಾಲ್ ಗುತ್ತೇದಾರ, ಸಂತೋಷ ಗುತ್ತೇದಾರ, ನಿತಿನ್ ವಿ.ಎಸ್., ಸುನೀಲ ಸಜ್ಜನ್, ವಿಶ್ವನಾಥ ಹೇರೂರ, ಯಲ್ಲನಗೌಡ ಬಿರಾದಾರ, ರತನ ಪಾಟೀಲ, ಬಸವರಾಜ ಪಡಶೆಟ್ಟಿ, ರಾಜಶೇಖರ ಹಿರೇಮಠ ಹಾಗೂ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಕ್ತದಾನ ಶಿಬಿರ, ಅಂಧ ಮಕ್ಕಳಿಗೆ ಬ್ಲಾಂಕೆಟ್
ವಿತರಣೆ: ಇದಕ್ಕೂ ಮುಂಚೆ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು. ಅದೇ ರೀತಿ ಅಂಧ ಮಕ್ಕಳಿಗೆ ಬ್ಲಾಂಕೆಟ್ ಹಾಗೂ ಅನ್ನ ಸಂತರ್ಪಣೆಯಂಥ ಸಮಾಜಮುಖೀ ಕಾರ್ಯಕ್ರಮಗಳು ನಡೆದವು. ಗೊಬ್ಬೂರದಲ್ಲಿಯೂ ನಿತೀನ ಗುತ್ತೇದಾರ ಅವರ 100ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.