ಮರು ಕ್ರಿಯಾ ಯೋಜನೆ ರೂಪಿಸಲು ಸೂಚನೆ
Team Udayavani, Jul 24, 2020, 10:06 AM IST
ಕಲಬುರಗಿ: ಕೋವಿಡ್ ವ್ಯಾಪಕ ವಿಸ್ತರಿಸುತ್ತಿರುವುದರಿಂದ ಜತೆಗೆ ಈಗ ಮಳೆಗಾಲ ಬಂದಿರುವುದರಿಂದ ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಈಗ ಅಗತ್ಯ ಕಾರ್ಯಗಳಿಗುಣವಾಗಿ ಮರು ಕ್ರಿಯಾ ಯೋಜನೆ ರೂಪಿಸುವಂತೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಕಲಬುರಗಿ, ಶಹಬಾದ್, ಕಮಲಾಪುರ ಹಾಗೂ ಕ್ಷೇತ್ರಕ್ಕೆ ಒಳಪಡಿಸುವ ಆಳಂದ ತಾಲೂಕಿನ ಗ್ರಾಪಂ ಆಡಳಿತಾಧಿಕಾರಿ, ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಳೆಗಾಲದಿಂದ ಅಲ್ಲಲ್ಲಿ ಕಸ ನಿಂತಿರುವುದನ್ನು ಸ್ವಚ್ಛಗೊಳಿಸುವುದು, ಚರಂಡಿ ಸಹ ಸ್ವಚ್ಛಗೊಳಿಸುವುದು, ರಸ್ತೆ ತೆಗ್ಗುಗಳನ್ನು ಮುಚ್ಚುವುದು ಜತೆಗೆ ಮುಖ್ಯವಾಗಿ ವ್ಯಾಪಕ ಸ್ವಚ್ಛತೆ ಕೈಗೊಂಡರೆ ಕೊರೊನಾ ತಡೆಗಟ್ಟುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಂತಾಗುತ್ತದೆ ಎಂದು ಶಾಸಕರು ಅಧಿಕಾರಿಗಳ ಗಮನಕ್ಕೆ ತಂದರು.
ಆಡಳಿತಾಧಿಕಾರಿಗಳು ಪಿಡಿಒ ತರುವ ಎಲ್ಲ ಕಾರ್ಯಸೂಚಿಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ. ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿದಲ್ಲಿ ತಮ್ಮತ್ತ ಬರುವ ದೂರುಗಳು ಕಡಿಮೆಯಾಗುತ್ತವೆ. ಉದ್ಯೋಗ ಖಾತ್ರಿ ಯೋಜನೆಯನ್ನು ಈಗ ಹೊಲಗಳ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬರುವಂತಾಗಲು ಮುಂದಾಗಿ. ಹೀಗಾದಲ್ಲಿ ರೈತರಿಗೂ ಅನುಕೂಲವಾಗುತ್ತದೆ ಜತೆಗೆ ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗುತ್ತದೆ. ಇದು ಯಾವ ರೂಪದಲ್ಲಿ ಮಾಡಬಹುದು ಎಂಬುದನ್ನು ಯೋಚಿಸಿ ಎಂದರು.
ಮಳೆಯಿಂದ ಎಲ್ಲ ರಸ್ತೆಗಳೆಲ್ಲ ಹಾಳಾಗಿವೆ. ಹೀಗಾಗಿ ಲೋಕೋಪಯೋಗಿ ಹಾಗೂ ಜಿಪಂ ಇಂಜನಿಯರಿಂಗ್ ಇಲಾಖೆಯವರು ಹಾನಿಯ ಕುರಿತಾಗಿ ಅಂದಾಜು ಹಾನಿ ವರದಿ ರೂಪಿಸುವಂತೆ ಸೂಚನೆ ನೀಡಿದ ಶಾಸಕರು, ಅಧಿಕಾರಿಗಳಾÂರು ಅಭಿವೃದ್ಧಿ ಕಾರ್ಯಗಳಲ್ಲಿ ಉದಾಸೀನತೆ ತೋರಬಾರದೆಂದು ಕಿವಿಮಾತು ಹೇಳಿದರು. ಸೊಂತ ಪಿಡಿಒ ಮಹಾಂತೇಶ ಅವರು, ಕೊವಿಡ್-19 ನಿಯಂತ್ರಣದಲ್ಲಿ ಹೆಚ್ಚು ಕ್ವಾರಂಟೈನ್ ಗಳನ್ನು ನಿಭಾಯಿಸಲಾಗಿದೆ. ಆದರೆ ತಮಗಿಂತ ಕಡಿಮೆ ಕ್ವಾರಂಟೈನ್ ನಿಭಾಯಿಸಿರುವ ಕಲ್ಮೂಡ ಗ್ರಾಪಂ ತಮಗಿಂತ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ ಘಟನೆ ಸಭೆಯಲ್ಲಿ ನಡೆಯಿತು.
ಕೆಳಗೆ ಕುಳಿತ ತಹಶೀಲ್ದಾರ್: ಕಮಲಾಪುರ ತಹಶೀಲ್ದಾರ್ ಅಂಜುಂ ತಬಸ್ಸುಮ್ ಅವರು ಓಕಳಿ, ಕಲ್ಮೂಡ ಹಾಗೂ ಸೊಂತ ಗ್ರಾಪಂ ಆಡಳಿತಾಧಿಕಾರಿಯಾಗಿದ್ದರಿಂದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಶಾಸಕರ ಹಾಗೂ ತಾಪಂ ಇಒ ಪಕ್ಕ ಕೂಡದೇ ಕೆಳಗಡೆ ಕುಳಿತ್ತಿರುವುದು ಶಿಷ್ಟಾಚಾರವನ್ನೇ ಪ್ರಶ್ನಿಸುವಂತಿತ್ತು. ಆದರೆ ತಬಸ್ಸುಮ ಅವರು ಸಭೆಗೆ ತಹಶೀಲ್ದಾರರಾಗಿ ಪಾಲ್ಗೊಳ್ಳದೇ ಗ್ರಾಪಂ ಆಡಳಿತಾಧಿಕಾರಿಯಾಗಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.