ನೀರಿನ ತೊಂದರೆ ಆಗದಂತೆ ಎಚರಿಕೆ ವಹಿಸಲು ಸೂಚನೆ
Team Udayavani, Apr 25, 2017, 4:18 PM IST
ಆಳಂದ: ಒಂದು ಕೋಟಿ ರೂ. ಖರ್ಚಾದರೂ ಶಾಸಕ ಬಿ.ಆರ್. ಪಾಟೀಲ ಸ್ವಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿ ಆಗದೆ ಇರುವುದು ಸೇರಿದಂತೆ ನಿಂಬರಗಾ ಮತ್ತು ಕೊಡಲಂಗರಗಾ ಸೇರಿ ಇನ್ನಿತರ ಕಡೆ ಶಾಸಕರ ಗಮನಕ್ಕೆ ಇಲ್ಲದೆ ಕಾಮಗಾರಿ ಜಾರಿಗೆ ತಂದಿರುವ ಅಧಿಕಾರಿಗಳು ಅದನ್ನು ಪೂರ್ಣವಾಗಿ ಯಶಸ್ವಿಯೂ ಮಾಡದ ಸಂಗತಿ ಟಾಸ್ಕ್ಫೋರ್ಸ್ ಸಭೆಯಲ್ಲಿ ಬೆಳಕಿಗೆ ಬಂದಿದೆ.
ಪಟ್ಟಣದ ತಾಪಂ ಕಚೇರಿಯಲ್ಲಿ ಸೋಮವಾರ ಶಾಸಕರೂ ಮತ್ತು ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ವರದಿ ಮಂಡಿಸುವಾಗ ಮಧ್ಯ ಪ್ರವೇಶಿಸಿದ ಸರಸಂಬಾ ಪಿಡಿಒ ಅವರು ಕಳೆದ ಸಾಲಿನಲ್ಲಿ ಸರಸಂಬಾ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಂಡರು ಅವೈಜ್ಞಾನಿಕವಾಗಿದ್ದರಿಂದ ನೀರು ಹರಿದು ಬರುತ್ತಿಲ್ಲ.
ಇದರಿಂದ ಮತ್ತೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಗಮನ ಸೆಳೆದರು. ಈ ಕುರಿತು ಶಾಸಕ ಪಾಟೀಲ ಅವರು ಎಇಇ ಅಬ್ದುಲ್ ಸಲಾಂ, ಇಂಜಿನಿಯರ್ ತಾನಸಿಂಗ್ ಅವರನ್ನು ಪ್ರಶ್ನಿಸಿ ಸಂಬಂಧಿತರಿಂದ ಶೀಘ್ರವೇ ವೈಜ್ಞಾನಿಕ ಕಾಮಗಾರಿ ಕೈಗೊಂಡು ನೀರು ಹರಿಸಬೇಕು ಎಂದು ತಾಕೀತು ಮಾಡಿದರು. ಬೇಸಿಗೆ 2 ತಿಂಗಳ ಕಾಲ ಕುಡಿಯುವ ನೀರಿನ ತೊಂದರೆ ಆಗದಂತೆ ಗ್ರಾಪಂ ಅಧಿಕಾರಿಗಳು ಮುಂಜಾಗೃತೆ ಕ್ರಮ ವಹಿಸಿ ವರದಿ ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.
ನಿರ್ಲಕ್ಷವಹಿಸಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕಾಗುತ್ತದೆ. ನೀರಿನ ಕೆಲಸಕ್ಕೆ ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಮಟ್ಟದ ಸಭೆಯಲ್ಲಿ ಕಂದಾಯ ಖಾತೆ ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಕಾರ್ಯಪ್ರವರ್ತರಾಗಬೇಕು ಎಂದು ಶಾಸಕ ಪಾಟೀಲ ಎಚ್ಚರಿಸಿದರು. ಶಖಾಪುರಕ್ಕೆ 16 ಲಕ್ಷ ರೂ. ಖರ್ಚಾದರು ನೀರಿನ ವ್ಯವಸ್ಥೆ ಆಗಿಲ್ಲ.
ನಿಂಬರಗಾ ಗ್ರಾಮಕ್ಕೆ ದೊಡ್ಡ ಪ್ರಮಾಣದ ನೀರಿನ ಯೋಜನೆ ಕೈಗೆತ್ತಿಕೊಂಡರು ಕಾಮಗಾರಿ ಸಮರ್ಪಕವಾಗಿಲ್ಲ ಎಂಬುದನ್ನು ಅವಲೋಕಿಸಿದ ಶಾಸಕರು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭದ ಬಗ್ಗೆ ಪ್ರತಿ ಗ್ರಾಮದಲ್ಲಿ ಡೊಂಗರ ಸಾರಬೇಕು. ಅರ್ಜಿ ಕೊಟ್ಟ ಕಾರ್ಮಿಕರಿಗೆ ತಕ್ಷಣವೇ ಕೆಲಸ ಕೊಡಬೇಕು.
ಬರುವ ಜೂನ್ ತಿಂಗಳಲ್ಲಿ ಒಂದು ಲಕ್ಷ ಸಸಿ ನೆಟ್ಟು ಮಾದರಿ ಕೆಲಸಕ್ಕೆ ಮುಂದಾಗಬೇಕು ಶಾಸಕರು ಅರಣ್ಯಾಧಿಕಾರಿ ರೇವಣಸಿದ್ದ ತಾವರಖೇಡ ಅವರಿಗೆ ಸೂಚಿಸಿದರು. ಕಳೆದ ಸಾಲಿನಂತೆ ಈ ಬಾರಿ ಟ್ಯಾಂಕರ್ ನೀರು ಪೂರೈಸುವುದು ಅಸಾಧ್ಯವಾಗಿದೆ. ಗ್ರಾಪಂ ಮಟ್ಟದಲ್ಲೇ ಸಮಸ್ಯೆ ಇತ್ಯರ್ಥಪಡಿಸಿ ನೀರು ಒದಗಿಸಲು ಮುಂದಾಗಬೇಕು. ಈಗಾಗಲೇ ಬಹುತೇಕ ಕಡೆ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಕಾಮಗಾರಿ ಕೈಗೆತ್ತಿಕೊಂಡರು ಪೂರ್ಣಗೊಳಿಸಿಲ್ಲ.
ಮತ್ತೆ ಟಾಸ್ಕ್ಫೋರ್ಸ್ ಹಣ ಏಕೆ ಕೇಳುತ್ತೀರಿ. ಈಗಾಗಲೇ ಇರುವ ಹಣದಿಂದ ಕಾಮಗಾರಿ ಡಿಕೊಳ್ಳಬೇಕು ಎಂದು ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಮಾತನಾಡಿ, ಕುಡಿಯುವ ನೀರಿಗಾಗಿ ಕೇಳಲಾದ ಕೊಳವೆಬಾವಿ ಮತ್ತು ತೆರೆದ ಬಾವಿಗಳ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು.
ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆದು ಸಂಪರ್ಕಕಕ್ಕೆ ದೂರವಾಣಿ ಸಂಖ್ಯೆ 08477-202428 ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಅಧಿಕಾರಿಗಳು ಮಾತ್ರ ಕೇಂದ್ರ ಸ್ಥಾನದಲ್ಲಿದ್ದು ಬೇಸಿಗೆ ಗಂಭೀರ ಸಮಸ್ಯೆ ನಿವಾರಿಸಲು ಸಜ್ಜಾಗಿರಬೇಕು. ಯಾವುದೇ ಕುಂಟು ನೆಪ ಹೇಳಿಕೊಂಡು ಜಾರಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ವಿಫಲಗೊಂಡ ಕೊಳವೆ ಬಾವಿಗಳನ್ನು ಮುಚ್ಚಿಹಾಕಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಾಪಂ ಇಒ ಡಾ| ಸಂಜಯ ರೆಡ್ಡಿ ಅವರು ಸಭೆಯಲ್ಲಿ ಹಾಜರಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು. ಇಂಜಿನಿಯರ್ ಸಂಗಮೇಶ ಬಿರದಾರ, ಜಿಡಗಾ ಗ್ರಾಪಂ ಅಧಿ ಕಾರಿ ಧರ್ಮಣ್ಣ ಯಾಳವಾರ, ಕೊರಳ್ಳಿ ಅಧಿಕಾರಿ ಶರಣಬಸಪ್ಪ ದೇವಂತಗಿ, ಹಣಮಂತರಾವ ಪಾಟೀಲ, ಮರುತಿ ಪ್ರಸಾದ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.