ಅತಿವೃಷ್ಟಿ ಹಾನಿ ವೀಕ್ಷಿಸಿದ ಶಾಸಕ ಮತ್ತಿಮಡು-ಸಮೀಕ್ಷೆಗೆ ಸೂಚನೆ
Team Udayavani, Sep 30, 2020, 4:10 PM IST
ಕಲಬುರಗಿ: ಸತತ ಮಳೆಯಿಂದ ಹಾನಿಯಾಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಕೋಟ್ಯಂತರ ಮೊತ್ತದ ಬೆಳೆ ಹಾನಿಯನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದರು.
ಗ್ರಾಮೀಣ ಕ್ಷೇತ್ರದ ಸರಡಗಿ, ಬೋಳೆವಾಡ, ವೆಂಕಟಬೆನೂರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಮಸ್ಯೆಗೆ ಒಳಗಾದ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಹಿಂದೆಂದು ಕಂಡರೀಯದಷ್ಟು ಬೆಳೆ ಹಾನಿಯಾಗಿದೆ. ಹೀಗಾಗಿ ಸಮರ್ಪಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ಬಹು ಮುಖ್ಯವಾಗಿ ಹಾನಿಗೊಳಗಾದ ಒಬ್ಬ ರೈತನೂ ಪರಿಹಾರ ಸಿಗದೇ ಉಳಿಯಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಹಾಗೂ ಹಾನಿಯಾಗಿರುವ ಸೇತುವೆಗಳು ಜತೆಗೆ ಇತರ ಸಾರ್ವಜನಿಕ ಹಾನಿಯನ್ನು ಸಹ ವರದಿ ರೂಪಿಸಿ ಸಂಬಂಧಪಟ್ಟ ಇಲಾಖಾ ಮುಖಾಂತರ ಸಲ್ಲಿಸಬೇಕು ಎಂದರು. ಕಲಬುರಗಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಮುಖಂಡರಾದ ವಿನೋದ್ ಪಾಟೀಲ ಸರಡಗಿ, ಪ್ರಭು ರಾವೂರ, ಸಂತೋಷ ಆಡೆ ದಾಭಾ, ಅರವಿಂದ ಚವ್ಹಾಣ್ ಶಾಂತಕುಮಾರ ಪಾಟೀಲ ನಂದೂರ, ಜೀತು ರಾಥೋಡ್, ಜಗದೀಶ್ ಪಾಟೀಲ ಸಣ್ಣೂರ, ವಿಶ್ವನಾಥ್ ಪಾಟೀಲ ವೆಂಕಟಬೇನೂರ, ವಿಶ್ವನಾಥ್ ಗೋಧಿ, ಶಿವಮೂರ್ತಿ ಸಣ್ಣೂರ, ವೀರೇಶ ಉಪ್ಪಳಾಂವ, ವೀರು ಸ್ವಾಮಿ ನರೋಣ, ಸಾಬಯ್ಯ ಗುತ್ತೇದಾರ, ವಿಜಯಕುಮಾರ್ ಗೋಳಾ ಸಂತೋಷ ಪಾಟೀಲ ಹರಸೂರ, ಶರಣಗೌಡ ಪಾಟೀಲ ಹರಕಂಚಿ, ಸತೀಶ್ ಸೂರಡೆ, ಮುಗಳಿ ರಾಜು ವಾಲಿ ನರೋಣ ಸೇರಿದಂತೆ ಮುಂತಾದವರಿದ್ದರು.
……………………………………………………………………………………………………………………………………………………………….
ವಿದ್ಯುತ್ ಸಮಸ್ಯೆ ಸರಿಪಡಿಸಲು ಒತ್ತಾಯ :
ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕದಲ್ಲಿ ಆಗುತ್ತಿರುವ ತೊಂದರೆಯಿಂದಾಗಿ ಹಳ್ಳಿಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಜೆಸ್ಕಾಂ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಇಲಾಖೆ ಅಧಿ ಕಾರಿಗಳ ಬೇಜವಾªರಿತನ ಕಾರಣವಾಗಿದೆ ಎಂದು ತಾಲೂಕು ಭೀಮ ಆರ್ಮಿ ಅಧ್ಯಕ್ಷ ಅಮರನಾಥ ಲೊಡನೋರ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಇಡೀ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆತನಕ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸಾಕಷ್ಟು ಜನರು ಜೆಸ್ಕಾಂಗೆ ದೂರವಾಣಿ ಕರೆ ಮಾಡಿ ಕೇಳಿದರೆ ಮೇಲಿಂದ ಲೈನ್ ಫಾಲ್ಟ್ ಆಗಿದೆ ಎಂದು ಹೇಳುತ್ತಾರೆ. ಜನರ ತಾಳ್ಳೆ ಪರೀಕ್ಷಿಸಬೇಡಿ. ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಅಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.