ಸಮೀಕ್ಷೆ ಗುರಿ ತಲುಪಲು ಸೂಚನೆ
Team Udayavani, May 20, 2017, 4:40 PM IST
ಆಳಂದ: ನಿರುದ್ಯೋಗ ಯುವಕರ ಬೇಡಿಕೆ ಸಮೀಕ್ಷೆ ಮತ್ತು ಆನ್‌ಲೈನ್ ನೋಂದಣಿ ಕಾರ್ಯದ ಗುರಿ ತಲುಪಲು ಸಂಬಂಧಿಸಿದ ಎಲ್ಲ ಇಲಾಖೆಗಳ ಸಿಬ್ಬಂದಿಗಳು ಶ್ರಮಿಸಬೇಕು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಪಂ, ಪುರಸಭೆ ಕಂದಾಯ, ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. 10ರಿಂದ15 ಸಾವಿರ ನಿರುದ್ಯೋಗ ಯುವಕರ ನೋಂದಣಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.
ಎಲ್ಲರೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು. ಪುರಸಭೆಯಿಂದ 2 ಸಾವಿರ, ಕಂದಾಯ ಇಲಾಖೆಯಿಂದ 3 ಸಾವಿರ, ಸಿಡಿಪಿಒ 2 ಸಾವಿರ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ 2 ಸಾವಿರ ಮಂದಿ ಸಮೀಕ್ಷೆ ನೋಂದಣಿ ಕೈಗೊಳ್ಳಬೇಕು. ನೋಂದಣಿ ಕಾರ್ಯಕ್ಕೆ ಮೇ 22ಕೊನೆ ದಿನಾಂಕವಾಗಿದೆ.
ಅಷ್ಟರೊಳಗೆ ಪರಿಶ್ರಮ ವಹಿಸಿ ಯುವಜನತೆಗೆ ಅನುಕೂಲ ಮಾಡಬೇಕು ಎಂದು ಹೇಳಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸಂಜಯ ರೆಡ್ಡಿ ಮಾತನಾಡಿ, ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಈಗಾಗಲೇ ನೋಂದಣಿ ಕಾರ್ಯ ಕೈಗೊಳ್ಳುತ್ತಿದ್ದಾರೆ.
ಯುವಜನರು ಸಹ ತಮಗೆ ಅನುಕೂಲವಾಗುವ ಕಚೇರಿ ಅಥವಾ ಖಾಸಗಿ ಕಂಪ್ಯೂಟರ್ ಅಂಗಡಿಗಳಲ್ಲಿ ಸೌಲಭ್ಯ ಹೊಂದಿರುವ ಮೊಬೈಲ್‌ನಿಂದಲೇ ನೋಂದಣಿ ಮಾಡಬಹುದಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಗ್ವಾಲೇಶ ಹೊನ್ನಳ್ಳಿ, ನೋಡಲ್ ಅಧಿಕಾರಿ ಜಾಫರ್ ಅನ್ಸಾರಿ ಸೇರಿ ಇನ್ನಿತರ ಇಲಾಖೆ ಅಧಿ ಕಾರಿಗಳು ಸಭೆಯಲ್ಲಿ ಹಾಜರಿದ್ದರು. ಯುವ ಜನರಿಗೆ ಕೌಶಲ ತರಬೇತಿ ನೀಡಲು ಕೌಶಲ್ಯ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತಿದೆ.
ನೋಂದಣಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಥವಾ ಕಾರ್ಡ್ ಸಂಖ್ಯೆ ನಮೂದಿಸಬೇಕಾಗಿದೆ. ಮೇ 15ರಿಂದ 22ರ ವರೆಗೆ ಪುರಸಭೆ. ತಾಪಂ, ತಹಶೀಲ್ದಾರ ಮತ್ತು ಗ್ರಾಪಂ ಕಚೇರಿಗಳಲೂ ನೋಂದಣಿಗೆ ಅವಕಾಶ ಒದಗಿಸಲಾಗಿದೆ. ಅಲ್ಲದೆ, ಉದ್ಯೋಗ ವಿನಿಮಯ ಕಚೇರಿಗಳಲ್ಲಿ ವರ್ಷಪೂರ್ತಿ ನೋಂದಣಿ ಕಾರ್ಯ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.