ವಕ್ಫ್ ಆಸ್ತಿಗಳ ಗೆಜೆಟ್ ನೋಟಿಫಿಕೇಶನ್‌ಗೆ ಸೂಚನೆ
Team Udayavani, Aug 3, 2017, 12:19 PM IST
ಕಲಬುರಗಿ: ಜಿಲ್ಲೆಯ ವಕ್ಫ್ ಇಲಾಖೆಯಡಿ ನೂತನವಾಗಿ 497 ಆಸ್ತಿಗಳು ನೋಂದಣಿಯಾಗಿವೆ. ಈ ಪೈಕಿ 455 ಆಸ್ತಿಗಳ ಸರ್ವೇ ಪೂರ್ಣಗೊಂಡಿವೆ. ಅವುಗಳ ಮಾಹಿತಿಯನ್ನು ಶೀಘ್ರವೇ ಗೆಜೆಟ್ ನೋಟಿಫಿಕೇಶನ್ ಮಾಡುವಂತೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು ಒಟ್ಟು 3400
ವಕ್ಫ್ ಸಂಸ್ಥೆಗಳ ಮಾಹಿತಿ ಲಭ್ಯವಿದ್ದು, ಇವುಗಳಡಿ ಹಲವಾರು ಸ್ವತ್ತುಗಳಿವೆ. ಅವುಗಳಲ್ಲಿ ಬಹಳಷ್ಟು ಆಸ್ತಿಗಳು ಒತ್ತುವರಿ ಆಗಿರುವುದು ತಿಳಿದು ಬಂದಿದೆ. ಅವುಗಳ ನಿಖರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರ ಅವರನ್ನು ಒಳಗೊಂಡ ಸಭೆ ಕರೆಯಲಾಗುವುದು. ವಕ್ಫ್ ಅಧಿಕಾರಿಗಳು ವಕ್ಫ್ಆ ಸ್ತಿಗಳ ಅತಿಕ್ರಮಣ ತೆರವುಗೊಳಿಸಲು ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶಗಳನ್ನು ಹಾಗೂ ವಕ್ಫ್ ಆಸ್ತಿಗಳ ವಿವರ ನೀಡುವಂತೆ ತಿಳಿಸಿದರು. ಜಿಲ್ಲೆಯ 96 ವಕ್ಫ್ ಆಸ್ತಿಗಳಲ್ಲಿ ಆಗಿರುವ ಅತಿಕ್ರಮಣವನ್ನು
ತೆರವುಗೊಳಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಈ ಪೈಕಿ 21 ಆಸ್ತಿಗಳ ಅತಿಕ್ರಮಣ ತೆರವುಗೊಳಿಸಲಾಗಿದೆ. ಉಳಿದ ಆಸ್ತಿಗಳ ಅತಿಕ್ರಮಣ ತೆರವು ಗೊಳಿಸಲು ಸಾಧ್ಯವಾಗಿಲ್ಲ. 44 ಪ್ರಕರಣಗಳು ಅತಿಕ್ರಮಣ ತೆರವಿಗೆ ಯೋಗ್ಯವಾಗಿವೆ.
ಕಲಬುರಗಿಯ ವಿವಿಧ ತಾಲೂಕುಗಳಲ್ಲಿ 250 ಎಕರೆ ಪ್ರದೇಶ ಅತಿಕ್ರಮಣವಾಗಿದೆ. ನಗರ ಪ್ರದೇಶದಲ್ಲಿ 97 ಎಕರೆ ಅತಿಕ್ರಮಣವಾಗಿದ್ದು, ವಕ್ಫ್ ಇಲಾಖೆಯವರು 33 ಎಕರೆ ಅತಿಕ್ರಮಣವನ್ನು ತೆರವು ಗೊಳಿಸಿದ್ದಾರೆ. ಉಳಿದ ಎಲ್ಲ ಅತಿಕ್ರಮಣವಾದ ಆಸ್ತಿಯನ್ನು ಆದಷ್ಟು ಬೇಗ ರವುಗೊಳಿಸಲು ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಅ ಧಿಕಾರಿಗಳು ಸೂಕ್ತ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಜಹೀರಾ ನಸೀಂ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮೆಹಬೂಬ ಪಾಷಾ ಕಾರಟಗಿ, ವಕ್ ಅದಿಕಾರಿಗಳು, ತಹಸೀಲ್ದಾರರು ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.