ಅಧಿಕಾರಿಗಳೇ, ಚುನಾವಣೆಗೆ ಸಜಾಗಿ: ಡಿಸಿ
Team Udayavani, Mar 17, 2018, 12:57 PM IST
ಕಲಬುರಗಿ: ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕ್ಷಣದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಬಹುದಾಗಿದ್ದು, ಚುನಾವಣೆಗೆ ನೇಮಿಸಲಾದ ಅಧಿಕಾರಿಗಳು ಸಜ್ಜಾಗುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸೂಚಿಸಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೆಕ್ಟರ್ ಅಧಿಕಾರಿ ಮತ್ತು ಸೆಕ್ಟರ್ ಪೊಲೀಸ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಭೀತಿತಡೆ ನಕಾಶೆ ತಯಾರಿ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವ ಹಾಗೆ ಖರ್ಚು ವೆಚ್ಚ, ವಿಡಿಯೋ ವೀವಿಂಗ್, ವಿಡಿಯೋ ಸರ್ವಲನ್ಸ್, ಫ್ಲಾಯಿಂಗ್ ಸ್ಕಾಡ್,
ಎಂ.ಸಿ.ಎ., ಎಂ.ಸಿ.ಎಂ.ಸಿ., ತಂಡಗಳನ್ನು ರಚಿಸಿದ್ದು, ಈ ತಂಡದಲ್ಲಿರುವ ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ತಿಳಿದುಕೊಂಡು ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಹಿಂದಿನ ಚುನಾವಣೆಗಳಲ್ಲಿ ನಡೆದಿರುವ ಅಹಿತಕರ ಘಟನೆ ಆಧರಿಸಿ ಹಾಗೂ ನೈತಿಕ ಚುನಾವಣೆಗೆ ಅಡ್ಡಿ ಮಾಡುವಂತಹ ಪ್ರದೇಶಗಳನ್ನು ಗುರುತಿಸಿ ಸೆಕ್ಟರ್ ಅಧಿಕಾರಿಗಳು ಮತಗಟ್ಟೆವಾರು ವರದಿ ಸಲ್ಲಿಸಬೇಕು. ಶನಿವಾರದಂದು ಆಯಾ ಮತಕ್ಷೇತ್ರಗಳ ತಹಶೀಲ್ದಾರರು ಹಾಗೂ ಚುನಾವಣಾಧಿಕಾರಿಗಳು ಸೆಕ್ಟರ್ ಅಧಿಕಾರಿಗಳ, ಸೆಕ್ಟರ್ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಅವಶ್ಯವಿರುವ
ನಮೂನೆ ನೀಡಬೇಕು. ಸೆಕ್ಟರ್ ಅಧಿಕಾರಿಗಳು ನಿಖರವಾದ ಹಾಗೂ ಜವಾಬ್ದಾರಿಯಿಂದ ಮಾಹಿತಿ ಸಂಗ್ರಹಿಸಿ ವರದಿ ಮಾಡಲು ತಿಳಿಸಿದರು.
ಎಸ್‌ಪಿ ಎನ್. ಶಶಿಕುಮಾರ ಮಾತನಾಡಿ, ಈ ಹಿಂದೆ ನಡೆದ ಗ್ರಾಪಂ, ತಾಪಂ, ಜಿಪಂ, ನಗರಸಭೆ, ಪುರಸಭೆ, ಪಾಲಿಕೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಡೆದಿರುವ ಅಹಿತಕರ ಘಟನೆಗಳು, ಜಾತಿ ಸಂಘರ್ಷ, ಮತದಾನಕ್ಕೆ ಆಮಿಷ ಒಡ್ಡುವುದು ಹಾಗೂ ಮತದಾನ ಮಾಡದಂತೆ ಭೀತಿ ಸೃಷ್ಟಿಸುವ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳ ಭೀತಿ ತಡೆ ನಕಾಶೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಭೀತಿ ತಡೆ ನಕಾಶೆ ತಯಾರಿಸಿ ವರದಿ ನೀಡಲು ಸೆಕ್ಟರ್ ಅಧಿಕಾರಿಗಳ ಜೊತೆ ಒಬ್ಬೊಬ್ಬ ಸೆಕ್ಟರ್ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಡಿಎಸ್‌ಪಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗುವುದು. ಎಲ್ಲ ಪೊಲೀಸ್ ಅಧಿಕಾರಿಗಳು ಪಾರದರ್ಶಕ ಚುನಾವಣೆ ನಡೆಸಲು ಜವಾಬ್ದಾರಿಯುತ ಕೆಲಸ ನಿರ್ವಹಿಸಬೇಕೆಂದರು.
ಜಿಲ್ಲಾ ಮಾಸ್ಟರ್ ಟ್ರೇನರ್ ಡಾ| ಶಶಿಶೇಖರ ರೆಡ್ಡಿ ಮಾತನಾಡಿ, ಚುನಾವಣೆಗಳಲ್ಲಿ ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಮಾಡಿಕೊಡದೆ ಭೀತಿ-ತಡೆ ಹುಟ್ಟಿಸುವ ಪ್ರದೇಶಗಳನ್ನು ಗುರುತಿಸುವುದು ಸೆಕ್ಟರ್ ಅಧಿಕಾರಿ ಹಾಗೂ ಸೆಕ್ಟರ್ ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಅನುಮಾನಾಸ್ಪದವಾಗಿ ಮತದಾನ ನಡೆದ ಪ್ರದೇಶಗಳು, ಮತದಾನ ಮಾಡುವಾಗ ಭೀತಿಗೊಳಗಾದ ಮತದಾರ ಅಥವಾ ಸಮುದಾಯದ ಗುಂಪುಗಳನ್ನು ಗುರುತಿಸುವುದು, ಭೀತಿ ಹುಟ್ಟಿಸುವ ಜನರನ್ನು ಗುರುತಿಸಿ ಮತದಾರರಿಗೆ ನೀಡುವ ಭೀತಿಯನ್ನು ತಡೆಯಲು ಸೆಕ್ಟರ್ ಅಧಿಕಾರಿಗಳು ಸೆಕ್ಟರ್ ಪೊಲೀಸ್‌ರಿಂದ, ಆಯಾ ಮತಗಟ್ಟೆಗಳಗಸ್ತು ಪೊಲೀಸ್‌ರಿಂದ, ಮತದಾರರಿಂದ, ಗುಪ್ತಚರರಿಂದ ನಿಖರ ಮಾಹಿತಿ ಸಂಗ್ರಹಿಸಿ ಅದನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾಧಿಕಾರಿಗಳು ಇಡೀ ಮತಕ್ಷೇತ್ರದ ಮಾಹಿತಿಯೊಂದಿಗೆ ನಕಾಶೆ ಸಿದ್ಧಪಡಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು, ಜಿಲ್ಲಾ ಚುನಾವಣಾಧಿ ಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವರದಿ ಪರಿಶೀಲಿಸಿ ಭೀತಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವರು ಎಂದರು.
ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳ ವ್ಯಾಪ್ತಿಯಲ್ಲಿರುವ ಸಮಾಜ ದ್ರೋಹಿಗಳು, ರೌಡಿ ಶಿಟರ್‌ಗಳು, ವಿಛಿದ್ರಕಾರಿ ಶಕ್ತಿಗಳು ಹಾಗೂ ದುರ್ನಡತೆವುಳ್ಳವರ ಮೇಲೆ ವಿಶೇಷ ನಿಗಾ ವಹಿಸಬೇಕು. ಚುನಾವಣೆ ಸಮಯದಲ್ಲಿ ಮತದಾನಕ್ಕೆ ಅಡ್ಡಿಪಡಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಗಂಭೀರ ಅಪರಾಧವಾಗಿದ್ದು, ಇದನ್ನು ದುರ್ನಡೆಗೆ ಎಂದು ಪರಿಗಣಿಸಿ ಸೂಕ್ತ ದಂಡ ಮತ್ತು ಶಿಕ್ಷೆ ವಿ ಧಿಸಲಾಗುವುದು ಎಂದು ಹೇಳಿದರು.
ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ, ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಹೆಚ್ಚುವರಿ ಎಸ್.ಪಿ.ಜಯಪ್ರಕಾಶ, ಚುನಾವಣಾ ತಹಶೀಲ್ದಾರ ಸಂಜುಕುಮಾರ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.