ರಸ್ತೆ ಅಗಲೀಕರಣಕ್ಕೆ ಒಕ್ಕೊರಲಿನ ಒಪ್ಪಿಗೆ
Team Udayavani, Oct 5, 2018, 11:14 AM IST
ಮಾದನ ಹಿಪ್ಪರಗಿ: ಗ್ರಾಮದ ಮಾಣಿಕರಾವ್ ಸಾಮಿಲ್‌ದಿಂದ ಶಿವಲೀಂಗೇಶ್ವರ ಮಠದ ರಸ್ತೆ ಕ್ರಾಸ್‌ವರೆಗಿನ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಅಂಗಡಿಗಳ ತೆರವುಗೊಳಿಸುವ ಕುರಿತು ಪಂಚಾಯತಿ ಅಧ್ಯಕ್ಷೆ ಚೆನ್ನಮ್ಮ ರಾಜಕುಮಾರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಪಂ ಸಭೆ ನಡೆದು ಒಕ್ಕೊರಲಿನ ಒಪ್ಪಿಗೆ ಪಡೆಯಲಾಯಿತು.
2017-18 ನೇ ಸಾಲಿನಲ್ಲಿ ಎಚ್‌ಕೆಆರ್ ಡಿಬಿಯು ಗ್ರಾಮದಲ್ಲಿ ಸುಮಾರು 72 ಲಕ್ಷ ರೂ.ಗಳ ರಾಜ್ಯ ಹೆದ್ದಾರಿ ಕಾಮಗಾರಿ
ಕೈಗೆತ್ತಿಕೊಂಡಿದೆ. ಇದಕ್ಕಾಗಿ ಈಗಾಗಲೆ ಟೆಂಡರ್ ಮುಗಿದಿದೆ. ಈ ರಸ್ತೆ ಕಾಮಗಾರಿ ಕೈಗೊಳ್ಳುವ ಸ್ಥಳದಲ್ಲಿರುವ ಅಂಗಡಿ
ಮುಂಗಟ್ಟುಗಳನ್ನು ತೆರವುಗೊಳಿಸುವ ಸಂಬಂಧವಾಗಿ ವಿಶೇಷ ಸಭೆ ಕರೆಯಲಾಗಿತ್ತು.
ರಸ್ತೆ ಮಧ್ಯದಿಂದ ಎಡಕ್ಕೆ ಮತ್ತು ಬಲಕ್ಕೆ 15 ಮೀಟರ್ ಜಾಗ ಖಾಲಿ ಮಾಡಿಸುವಂತೆ ಲೋಕೋಪಯೋಗಿ ಇಲಾಖೆಯವರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ರಸ್ತೆಗೆ ಬೇಕಾಗುವಷ್ಟು ಜಾಗ ಖಾಲಿ ಮಾಡಿಸಲು ಗ್ರಾಪಂಗೆ ಒಂದು ದೊಡ್ಡ ಸವಾಲಾಗಿತ್ತು. ಆದರೀಗ ಕಾಂಕ್ರಿಟ್ ಕಟ್ಟಡಗಳು, ಪತ್ರಾ ಶೆಡ್‌ಗಳು ನೆಲಸಮವಾಗಲಿವೆ.
ಸಭೆಯಲ್ಲಿ ಸದಸ್ಯ ಗಣೇಶ ಓನಮಶೆಟ್ಟಿ ಮಾತನಾಡಿ, ತೆರವು ಗೊಳಿಸುವ ಕಾರ್ಯ ನಿಷ್ಪಕ್ಷಪಾತವಾಗಿ ನಡೆಯಲಿ
ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಶಿವಲಿಂಗಪ್ಪ ಜಮಾದಾರ ತೆರವುಗೊಳಿಸುವ ಕಾರ್ಯದಲ್ಲಿ ಸರ್ವೇ
ಸಂಖ್ಯೆ ಸ್ಥಳದಲ್ಲಿದ್ದವರು ಮತ್ತು ಗ್ರಾಮ ಪಂಚಾಯತ ಸ್ಥಳದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆಗೆಸಲಾಗುವದೆಂದು ಹೇಳಿದರು.
ಈ ಕಾರ್ಯಕ್ಕೆ ಒಂದು ಸಮಿತಿ ನೇಮಿಸಬೇಕೆಂದು ಸದಸ್ಯ ಸಿದ್ಧಾರೂಢ ಸಿಂಗಸೆಟ್ಟಿ ಹೇಳಿದರೆ, ಸಮಿತಿ ಬೇಡ
ಸರ್ವ ಸದಸ್ಯರು ಒಗ್ಗಟ್ಟಿನಿಂದ ಬಂದು ಕೈಜೋಡಿಸಬೇಕೆಂದು ಮಲ್ಲಿನಾಥ ವಿ. ಪರೇಣಿ ಹೇಳಿದರು. ಈ ಮಾತಿಗೆ
ಮಹಿಳಾ ಸದಸ್ಯರು ದನಿಗೂಡಿಸಿದರು.
ತಾಪಂ ಕಚೇರಿಗೆ, ತಹಶೀಲ್ದಾರ್ ಕಚೇರಿಗೆ ಹೋಗುವುದಕ್ಕೆ ಬರುವ ಖರ್ಚನ್ನು ಪಂಚಾಯತಿ ನೋಡಿಕೊಳ್ಳಬೇಕು ಎಂದು
ಸದಸ್ಯ ಮಹಾದೇವಯ್ಯ ಸ್ವಾಮಿ ಹೇಳಿದರು. ಪಂಚಾಯತ ಪ್ರೊಸಿಡಿಂಗ್ ಬರೆದಾದ ಮೇಲೆ ಪಿಡಿಒ ಮಹಾದೇವ ದ್ಯಾಮಾ ಓದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.