215 ಮಕ್ಕಳಿಗೆ ಒಂದೇ ಕೊಠಡಿ, ಒಬ್ಬರೇ ಶಿಕ್ಷಕ!
Team Udayavani, Aug 5, 2022, 2:31 PM IST
ಕಲಬುರಗಿ: ಜಿಲ್ಲೆಯ ಅಫಜಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ 1ರಿಂದ 7ನೇ ತರಗತಿಯ ಒಟ್ಟು 215 ವಿದ್ಯಾರ್ಥಿಗಳಿಗೂ ಒಂದೇ ಕೊಠಡಿಯಲ್ಲಿ ಒಬ್ಬರೇ ಶಿಕ್ಷಕರು ಪಾಠ ಹೇಳುತ್ತಿದ್ದಾರೆ.
ಈಚೆಗೆ ಐವರು ಅತಿಥಿ ಶಿಕ್ಷಕರ ನೇಮಕ ವಾಗಿದ್ದರೂ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ ಕೇಳುವುದು ತಪ್ಪಿಲ್ಲ. ಹೀಗಾದರೆ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗಾಗುತ್ತದೆ ಎಂದು ಸಾಗನೂರು ಮತ್ತು ಸುತ್ತಲಿನ ಗ್ರಾಮಗಳ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯ ಶಿಕ್ಷಕರು ಬಿಟ್ಟರೆ ಯಾರಿಲ್ಲ
ಸಾಗನೂರು ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 215 ಮಕ್ಕಳಿದ್ದಾರೆ. ಅಚ್ಚರಿ ಸಂಗತಿ ಎಂದರೆ ಎಲ್ಲ ವಿಷಯಗಳ ಕುರಿತು ಮುಖ್ಯಶಿಕ್ಷಕ ನದಾಫ್ ಒಬ್ಬರೇ ಪಾಠ ಮಾಡುತ್ತಿದ್ದಾರೆ. ಈಗ ಐವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.
ಇದ್ದ ಶಿಕ್ಷಕರೆಲ್ಲ ಬಿಟ್ಟು ಹೋದರು
ಶಾಲೆಯಲ್ಲಿ ಕಟ್ಟಡಗಳಿವೆ, ದೊಡ್ಡ ಮೈದಾನವಿದೆ. ಶಿಕ್ಷಕರು ಇದ್ದರು ಆದರೆ, ಒಬ್ಬರು ಬಡ್ತಿ ಹೊಂದಿ ವರ್ಗವಾಗಿ ಹೋದರು. ಇನ್ನೂ ಮೂವರು ಶಿಕ್ಷಕರು ವರ್ಗವಾದರು. ಒಬ್ಬರು ನಿವೃತ್ತಿ ಹೊಂದಿದರು. ಹೀಗಾಗಿ ಮುಖ್ಯಶಿಕ್ಷಕರು ಒಬ್ಬರೇ ಉಳಿದರು. ಇದರಿಂದಾಗಿ ಕಳೆದ ಮೂರು ತಿಂಗಳಿಂದ ಇದೇ ರೀಠಿಜಿ ಪಾಠ ನಡೆಯುತ್ತಿವೆ. ಈಗೀಗ ಐವರು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆಯಿಂದ ನೇಮಿಸಲಾಗಿದೆ. ಮೂರು ತಿಂಗಳಾದರೂ ಘಟಕ ಪರೀಕ್ಷೆಗಳು ನಡೆಯುವ ಲಕ್ಷಣಗಳಿಲ್ಲ ಎಂಬುದು ಸಾಗನೂರು ಗ್ರಾಮಸ್ಥರ ಅಳಲು.
ಕಳೆದ ಮೂರು ತಿಂಗಳಿಂದ ನಮ್ಮಲ್ಲಿ ಶಿಕ್ಷಕರು ಇಲ್ಲದೇ ಇರುವುದರಿಂದ ನಾವು ಎಲ್ಲ ಮಕ್ಕಳಿಗೆ ಪಾಠಗಳು ತಪ್ಪಬಾರದು ಎನ್ನುವ ಕಾರಣಕ್ಕೆ ಪಾಠ ಮಾಡುತ್ತಿದ್ದೇವೆ. ಈಗ ಐವರು ಅತಿಥಿ ಶಿಕ್ಷಕರನ್ನು ಬಂದಿದ್ದಾರೆ. ಎಲ್ಲ ತರಗತಿಯ ಮಕ್ಕಳನ್ನು ಆಯಾ ತರಗತಿ ಕೋಣೆಯಲ್ಲಿ ಕುಳ್ಳಿರಿಸಿ ಪಾಠ ಮಾಡಲಾಗುವುದು. ಶಿಕ್ಷಕರಿಲ್ಲ ಎನ್ನುವ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. –ನದಾಫ್, ಮುಖ್ಯಶಿಕ್ಷಕ
ಶಿಕ್ಷಕರ ಕೊರತೆ ಇದೆ. ಶೀಘ್ರವೇ ಹೊಸ ಶಿಕ್ಷಕರ ನೇಮಕವಾದಾಗ ಸಾಗನೂರಕ್ಕೂ ಒದಗಿಸಲಾಗುವುದು. ಮಕ್ಕಳ ಪಾಠ ಬೋಧನೆಗೆ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶೀಘ್ರವೇ ಇನ್ನಷ್ಟು ಶಿಕ್ಷಕರನ್ನು ಒದಗಿಸಲಾಗುವುದು. –ಮಾರುತಿ ಎಚ್., ಬಿಇಒ,
ಒಂದೇ ಕೊಠಡಿಯಲ್ಲಿ ಎಲ್ಲ ಮಕ್ಕಳನ್ನು ಕೂಡಿಸಿ ಪಾಠ ಮಾಡಿದರೆ ಅವರ ಗತಿ ಏನು? ಯಾವ ತರಗತಿ ಮಗು ಯಾವ ಪಾಠ ಕೇಳಬೇಕು. ಸರಕಾರದ ಇಂತಹ ನೀತಿಯಿಂದ ಪಾಲಕರು ತುಂಬಾ ಹೈರಾಣಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಮಕ್ಕಳೇ ಇಲ್ಲ ಎನ್ನುವಾಗ ಇದ್ದ ಮಕ್ಕಳಿಗೆ ಸರಿಯಾಗಿ ಶಿಕ್ಷಕರನ್ನು ಒದಗಿಸಲು ಸಾಧ್ಯವಾಗದೇ ಇರುವುದು ದುರದೃಷ್ಟಕರ. ಕೂಡಲೇ ಸರಿ ಮಾಡದೇ ಇದ್ದರೆ ಹೋರಾಟ ಮಾಡಲಾಗುವುದು. –ಗಿರೀಶ ಚಕ್ರ, ಬಿಜೆಪಿ ಮುಖಂಡ
-ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.