ಸಕಲ ಜೀವಾತ್ಮರಿಗೆ ಒಬ್ಬನೇ ದೇವರು: ಸುತಾರ್
Team Udayavani, Mar 5, 2018, 11:16 AM IST
ಸೇಡಂ: ಒಂದು ಪರ್ವತಕ್ಕ ನಾಲ್ಕ್ ದಾರಿ ಇರ್ತಾವ. ಮ್ಯಾಲ ತುದಿಗಿ ದೇವ್ರ ಕುಂತಾನ. ಪ್ರತಿ ದಾರ್ಯಾಗ ಒಂದೊಂದು ಗುಂಪು ಹತ್ತಾಕತ್ತಾವ. ಅದ್ರ ಉತ್ತರದ ದಾರ್ಯಾಗ ಇದ್ದಂವ ದಕ್ಷಿಣದ ದಾರಿ ಸರಿಯಿಲ್ಲ. ಈಕಡಿ ಬಾ ಅಂತ ಕರಿತಾನ. ದಕ್ಷಿಣದವ ನಿಂದಾ ಸರಿಯಿಲ್ಲ ಅಂತ ಉತ್ತರದವ ಕರಿತಾನ. ಹಿಂಗಾ ಕಚ್ಚಾಡ್ಕೊಂತ ನಾವ್ ಕುಂತಿವಿ. ದೇವರೇನು ಬರ್ರೆಪ ಬರ್ರಿ ಅಂತ ಕರಿಲಾ ಕತ್ತಾನ. ಇವು ಪದ್ಮಶ್ರೀ ಪುರಸ್ಕೃತ ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ಮಾರ್ಮಿಕ ಮಾತುಗಳು.
ತಾಲೂಕಿನ ಮಳಖೇಡದಲ್ಲಿ ನಡೆದ ರಾಷ್ಟ್ರಕೂಟರ ಉತ್ಸವದಲ್ಲಿ ವಿಶೇಷ ಅನುಭಾವ ಕಾರ್ಯಕ್ರಮದಲ್ಲಿ ಅವರು ಇಡೀ ವೇದಿಕೆಯನ್ನ ಕೆಲಹೊತ್ತು ಮೂಕವಿಸ್ಮಿತರನ್ನಾಗಿಸಿದರು. ವೇದ ಉಪನಿಷತ್ತು, ಶತಮಾನದ ವಚನಗಳು, ಖುರಾನ್, ಭಗವದ್ಗೀತೆಯಲ್ಲಿನ ನಿಜ ಮರ್ಮವನ್ನು ನೆರೆದವರಿಗೆ ಮನದಟ್ಟು ಮಾಡಿಸುವ ಅವರ ಪರಿ ಮೆಚ್ಚುವಂತಿತ್ತು. ಭಾವೈಕ್ಯತೆ ಮತ್ತು ಸಾಮರಸ್ಯ ಇವರಡೇ ನಿಜವಾದ ಧರ್ಮಗಳು. ಸಕಲ ಚರಾಚರಗಳನ್ನು, ಸೂರ್ಯ ಮತ್ತು ಚಂದ್ರನನ್ನು ನಿಯಂತ್ರಿಸುವ ಅವ್ಯಕ್ತ ಶಕ್ತಿಯೇ ದೇವರು ಎಂದು ಪ್ರತಿಪಾದಿಸಿದರು. ಸತ್ಯ, ಜ್ಞಾನವೇ ಅನಂತ ದೇವರಿದ್ದಂತೆ ಎಂದು ಉಪನಿಷತ್ತು ಹೇಳುತ್ತವೆ. ಆದರೆ ನಾವು ದೇವರ ಹೆಸರಲ್ಲಿ ಜಗಳವಾಡುತ್ತಾ, ಕಾಲಹರಣ ಮಾಡುತ್ತಾ ಪರ್ವತದ ಮೇಲಿರುವ ದೇವರನ್ನು ತಲುಪುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಹೇಳಿದರು.
ಯಾವ ಜೀವಾತ್ಮರೂ ಧರ್ಮ ಸಂಸ್ಥಾಪಕರಲ್ಲ. ಪೂಜೆ ಮತ್ತು ನಮಾಜ್ ಕೇವಲ ದೇವರನ್ನು ಕಾಣಲು ಇರುವ ಮಾರ್ಗಗಳಾಗಿವೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮಾನ ಮನಸ್ಸುಗಳು ಮೂಢಬೇಕು. ಪ್ರತಿಯೊಬ್ಬರೂ ದ್ವೇಷವನ್ನು ಮರೆತು ಏಕಾತ್ಮರೂಪಿ ದೇವರನ್ನು ಕಾಣಬೇಕು ಎಂದು ಹೇಳಿದರು.
12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯ ಬಿರುಸಿನ ವಚನಕಾರ. ಅವರ ವಚನಗಳಲ್ಲಿ ಚಾಟಿ ಏಟಿನಂತಹ ಪದಗಳಿವೆ. ಅವುಗಳು ಇಂದಿನ ಪ್ರಸ್ತುತವೋ, ಅಪ್ರಸ್ತುತವೋಗೊತ್ತಿಲ್ಲ. ಆದರೆ ಒಬ್ಬ ಪತ್ತಾರ ಬಂಗಾರ ಮಣಿಸಲು ಬಳಸುವ ಸುತ್ತಿಗೆಗೂ, ಒಬ್ಬ ಕಮ್ಮಾರ ಬ್ಬಿಣ ಮಣಿಸಲು ಬಳಸುವ ಸುತ್ತಿಗೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಬ್ಬರೂ ಒಂದೇ ಅಳತೆಯ ಸುತ್ತಿಗೆ ಬಳಸಲು
ಸಾಧ್ಯವಿಲ್ಲ. ಅದಕ್ಕಾಗಿ ಪ್ರಸ್ತುತ ದಿನಗಳಲ್ಲಿ ಚೌಡಯ್ಯರ ವಚನಗಳ ಅವಶ್ಯಕತೆ ಇದೆ. ಇಬ್ರಾಹಿಂ ಸುತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.