ಮಿನಿ ವಿಧಾನಸೌಧ ಎದುರು ಧರಂ ಪುತ್ಥಳಿ ಸ್ಥಾಪಿಸಲು ಆಗ್ರಹ
Team Udayavani, Aug 9, 2017, 12:29 PM IST
ಕಲಬುರಗಿ: ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಸ್ವಾತಂತ್ರ್ಯ ಯೋಧ-ಮಾಜಿ ಶಾಸಕ ವಿದ್ಯಾಧರ ಗುರೂಜಿ ಹಾಗೂ ಪಾಲಿಕೆ ಮಾಜಿ ಸದಸ್ಯ ಕಲ್ಯಾಣ ರಾವ್ ಪಾಟೀಲ ಅವರ ನಿಧನಕ್ಕೆ ಶ್ರದ್ಧಾಂ ಜಲಿ ಸಲ್ಲಿಸಿ ಮಂಗಳವಾರ ಕರೆಯಲಾಗಿದ್ದ ಮಹಾ ನಗರ ಪಾಲಿಕೆ ಸಾಮಾನ್ಯ ಸಭೆ ಮುಂದೂಡಲಾಯಿತು. ಮಹಾಪೌರ ಶರಣು ಮೋದಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಧರ್ಮಸಿಂಗ್ ನಿಧನಕ್ಕೆ ಕಂಬನಿ ಮಿಡಿದು ಅವರ ಸಾಧನೆಗಳನ್ನು ಸ್ಮರಿಸಿ, ಕಲಬುರಗಿ ನಗರಸಭೆ ಸದಸ್ಯರಾಗಿ ರಾಜ್ಯದ ಮುಖ್ಯಮಂತ್ರಿ ಆಗಿರುವುದನ್ನು ಪ್ರಸ್ತಾಪಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. 105 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿರುವ ವಿದ್ಯಾಧರ ಗುರೂಜಿ ಹಾಗೂ ಪಾಲಿಕೆ ಸದಸ್ಯರಾಗಿ ಎಲ್ಲರೊಂದಿಗೆ ಉತ್ತಮ ಸ್ನೇಹ ಹೊಂದಿದ್ದ ಕಲ್ಯಾಣರಾವ್ ಪಾಟೀಲ ಅವರನ್ನು ಸ್ಮರಿಸಲಾಯಿತು.
ಪುತ್ಥಳಿ ಸ್ಥಾಪಿಸಿ: ಆಡಳಿತ ಪಕ್ಷದ ನಾಯಕ ರಾಜಕುಮಾರ ಕಪನೂರ, ಮಾಜಿ ಮಹಾಪೌರ ಸೈಯದ್ ಅಹ್ಮದ, ಮಾಜಿ ಉಪಮಹಾಪೌರ ಶರಣಮ್ಮ ಬೆಣ್ಣೂರ, ಪ್ರಮೋದ ತಿವಾರಿ, ವಿಪಕ್ಷ ನಾಯಕ ಆರ್.ಎಸ್ .ಪಾಟೀಲ, ಶಿವಾನಂದ ಪಾಟೀಲ
ಅಷ್ಠಗಿ, ಅರ್ಚನಾ ತಿವಾರಿ, ರಮೇಶ ಕಮಕನೂರ, ವಿಠಲ ಯಾದವ್, ಹುಲಿಗೆಪ್ಪ ಕನಕಗಿರಿ, ಅಷ್ಪಾಕ ಅಹ್ಮದ ಚುಲುಬುಲ್ ಧರ್ಮಸಿಂಗ್ ಕುರಿತು ಮಾತನಾಡಿದರು. ಧರ್ಮಸಿಂಗ್ ಅವರು ಕಲಬು ರಗಿ ನಗರ ಸಭೆ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟು ರಾಜ್ಯದ ಮುಖ್ಯ ಮಂತ್ರಿ ಆಗಿರುವುದು ಸಾಮಾನ್ಯವಾದುದ್ದಲ್ಲ. ಕಲಬುರಗಿ ಜಿಲ್ಲೆಯ ಅಭಿವೃ ದ್ಧಿಗೆ ತಮ್ಮದೇಯಾದ ಕೊಡುಗೆ ನೀಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ಥಳಿಯನ್ನು ಮಿನಿ ವಿಧಾನಸೌಧ ಎದುರಿನ ಸ್ಥಳದಲ್ಲಿ ಸ್ಥಾಪಿಸಲು ಹಾಗೂ ಅವರ ಕೊಡುಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶರಣಬಸವೇಶ್ವರ ಕೆರೆ ಉದ್ಯಾನವನದ ಸ್ಥಳದಲ್ಲಿ ಮ್ಯೂಜಿಯಂ ಸ್ಥಾಪಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾಪೌರ ಶರಣಕುಮಾರ ಮೋದಿ ಅವರು ಧರ್ಮಸಿಂಗ್ ಅವರ ಪುತ್ಥಳಿ ಸ್ಥಾಪನೆ ವಿಷಯ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಿ ಕೊಡೋಣ ಎಂದು ಹೇಳಿ ಸಭೆಯನ್ನು ಮುಂದೂಡಿದರು. ಮುಂದೂಡಿದ ಸಭೆಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ನಿರ್ಧಾರ ಪ್ರಕಟಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.