ಅತ್ಯಾಚಾರ ಖಂಡಿಸಿ ಮುಸ್ಲಿಮರ ಆಕ್ರೋಶ
Team Udayavani, Apr 22, 2018, 4:21 PM IST
ವಾಡಿ: ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ನಡೆಸಲಾದ ಅತ್ಯಾಚಾರ ಹಾಗೂ ಕೊಲೆ ಕೃತ್ಯ ಖಂಡಿಸಿ ಪಟ್ಟಣ ಹಾಗೂ ರಾವೂರ ಗ್ರಾಮದಲ್ಲಿ ಮುಸ್ಲಿಂ ಸಂಘಟನೆಗಳು
ಪ್ರತಿಭಟನೆ ನಡೆಸಿದವು.
ಟಿಪ್ಪು ಸುಲ್ತಾನ್ ಸಂಯುಕ್ತ ಸಂಘದ ಕಾರ್ಯಕರ್ತರು ರಾವೂರ ಗ್ರಾಮದ ಜಾಮಿಯಾ ಮಸೀದಿಯಿಂದ ಚಿತ್ತಾಪುರ ವೃತ್ತದ ವರೆಗೆ ಮೆರವಣಿಗೆ ನಡೆಸಿ ವೃತ್ತದಲ್ಲಿ ಜಮಾಯಿಸಿದರು.
ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪಾಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ಜಿಲ್ಲಾ ಕಾರ್ಯದರ್ಶಿ ಮಲಿಕಪಾಷಾ ಮೌಜಾನ್, ತಾಲೂಕು ಅಧ್ಯಕ್ಷ ವಸೀಮ ಖಾನ್, ಗ್ರಾಪಂ ಸದಸ್ಯರಾದ ಇರ್ಫಾನ್ ಸೇಠ, ಯುನ್ಯೂಸ್ ಪ್ಯಾರೆ, ಮುಖಂಡರಾದ ಮಹೆಬೂಬ ಎಂ.ಆರ್, ಶ್ರವಣಕುಮಾರ ಮೌಸಲಗಿ, ಫೆರೋಜ್ ಮೌಜಾನ್, ರಹೆಮಾನ ಮೂಸಾವಾಲೆ, ಅಮೀರ ಪಟೇಲ, ಮಹೆಬೂಬ ಖಾನ್, ಯುಸೂಫ್, ಇರ್ಫಾನ್, ಮೌಲಾ ಅಡಕಿ, ಅಫಜಲ್ ತುನ್ನೂರ, ಮೊಹಸೀನ ಅಡಕಿ, ಸಾದಿಕ ಮಸೂಲ್ದಾರ, ಮಹ್ಮದ್ ದಿಗ್ಗಾಂವ ಪಾಲ್ಗೊಂಡಿದ್ದರು.
ಎಸ್‌ಡಿಪಿಐ ಪ್ರತಿಭಟನೆ: ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿಪಿಐ) ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್‌ಡಿಪಿಐ ವಲಯ ಅಧ್ಯಕ್ಷ ಮಹ್ಮದ್ ಆಶೀಫ್ ಪಗಡಿವಾಲೆ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಶ್ರವಣಕುಮಾರ ಮೌಸಲಗಿ, ಮುಸ್ಲಿಂ ಸಮಾಜದ ಮುಖಂಡ ಫೇರೋಜ್ ಖಾನ್, ಯುವ ಮುಖಂಡ ಝಹೂರ್ ಖಾನ್, ಮಹ್ಮದ್ ರಫೀಕ್, ಇಮ್ತಿಯಾಜ್ ಪಟೇಲ, ಮಹ್ಮದ್ ಗೌಸ್ ಸೇರಿದಂತೆ ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐ ವಿಜಯಕುಮಾರ ಎನ್ .ಭಾವಗಿ ಮನವಿ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.