ಶಿಕ್ಷಣಕ್ಕೆ ಪಾಲಕರೇ ಭದ್ರ ಬುನಾದಿ

Team Udayavani, Feb 13, 2017, 3:32 PM IST

gul7.jpg

ಆಳಂದ: ಪಾಲಕರು ತಮ್ಮ ಬಿಡುವಿನ ಸಮಯವನ್ನು ಟಿವಿ ಮುಂದೆ ಕಳೆಯದೆ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟು ಬಾವಿ ಭವಿಷ್ಯದ ಭದ್ರಬುನಾದಿ ಹಾಕಬೇಕು ಎಂದು ಶಾಸಕ ಬಿ.ಆರ್‌. ಪಾಟೀಲ ಹೇಳಿದರು. ಕುಡುಕಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್‌ಕೆಆರ್‌ಡಿಬಿಯಿಂದ ಮಂಜೂರಾದ ಸುಮಾರು 50 ಲಕ್ಷ ರೂ. ವೆಚ್ಚದ ಐದು ಕೋಣೆಗಳ ನಿರ್ಮಾಣ ಮತ್ತು 13.80 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಮಕ್ಕಳು ಶಿಕ್ಷಣದಲ್ಲಿ ಹಿಂದುಳಿಯಲು ಶಿಕ್ಷಕರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಇದರಲ್ಲಿ ಪಾಲಕರ ಜವಾಬ್ದಾರಿಯೂ ಇರುತ್ತದೆ. ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಮಟ್ಟ ಧಾರಣೆಗೆ ಬಿಸಿಯೂಟ, ಸೈಕಲ್‌, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಇದರ ಲಾಭವನ್ನು ಬಡ ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರು. 

ಅರ್ಧ ಕಿಮೀಗೊಂದು ಬ್ಯಾರೇಜ್‌: ಮಳೆಗಾಲದಲ್ಲಿ ಸಾಕಷ್ಟು ನೀರು ಎಲ್ಲಿಯೂ ನಿಲ್ಲದೆ ವ್ಯರ್ಥವಾಗಿ ಹರಿದು ಭೀಮಾ ನದಿಯನ್ನು ಸೇರುತ್ತಿದೆ. ಇದರಿಂದ ಕೆಳಭಾಗದ ಭೂಸನೂರ, ಜವಳಿ, ಧಂಗಾಪೂರ, ಹಿತ್ತಲಶಿರೂರ, ಕುಡುಕಿ ಗ್ರಾಮಗಳ ಜನರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಇದನ್ನು ಹೊಗಲಾಡಿಸಲು ಅರ್ಧ ಕಿಲೋ ಮೀಟರ್‌ ಗೊಂದು ಬ್ಯಾರೇಜ್‌ ನಿರ್ಮಿಸಿ ನೀರಿನ ಭವಣೆ ನಿವಾರಿಸಲಾಗುವುದು ಎಂದು ಹೇಳಿದರು. 

ಚುನಾಯಿತ ಜನಪ್ರತಿನಿಧಿಗಳ ಎದುರು ಸಾರ್ವಜನಿಕರು ಕೈಜೋಡಿಸಿ ಕೆಲಸ ಕೇಳುವುದು ನೋವಿನ ಸಂಗತಿ. ಗೆಲ್ಲಿಸಿದ ಜನಪ್ರತಿನಿಧಿಗಳ ಕೈ ಹಿಡಿದು ಕೆಲಸ ಕೇಳಿ ಮಾಡಿಕೊಳ್ಳಬೇಕು. ಇದು ಜನರು ಹಕ್ಕು ಎಂದು ಹೇಳಿದರು. ಜಿಡಗಾ ಜಿ.ಪಂ. ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿ, ಶಾಸಕ ಬಿ.ಆರ್‌. ಪಾಟೀಲ ಅವರು ಈ ಹಿಂದೆ ಹತ್ತು ವರ್ಷದಲ್ಲಿ ತಾಲೂಕಿನಲ್ಲಿ ಆಗದೆ ಇರುವ ಪ್ರಗತಿಯನ್ನು ಮಾಡುತ್ತಿದ್ದಾರೆ.

ಪ್ರತಿ ಹಳ್ಳಿಗೂ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗರಣ್ಣ ಗುಂಡಗುರ್ತಿ, ಡಾ| ಹಣಮಂತ್ರಾಯ ಕುಡುಕಿ ಮಾತನಾಡಿದರು. ದತ್ತಾತ್ರೇಯ ಕುಡುಕಿ ಪ್ರಸ್ತಾವಿಕವಾಗಿ ಮಾತನಾಡಿದರು. ಚೌಡಪ್ಪ ಪೊಲೀಸ್‌ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ತುಳಸಾಬಾಯಿ, ಜಿಪಂ ಎಇ ತಾನಾಜಿ, ಜೆಇ ಬಸವರಾಜ ಭಜಂತ್ರಿ, ಪ್ರಮುಖರಾದ ಶಿವಣ್ಣ ಬುರುಣಾಪುರ,

ಪುಂಡಲೀಕ ಹೊಳಕುಂದಿ, ಅಮೋಘಸಿದ್ದ ಬುರಣಾಪುರ, ವಿಠಲ ನೀಲೂರ, ಸಿದ್ದರಾಮ ಮೇಲನಕೇರಿ, ವಿಠಲ ಸಿ. ಪಾಟೀಲ, ಶಿವಾಯ ಸ್ವಾಮಿ, ನರಸಿಂಗರಾವ ಮಾಲಿಪಾಟೀಲ, ಭೀಮಶಾ ವಾಗªರಿ, ಮಲ್ಲಣ್ಣ ಕುಂಬಾರ, ಸೂರ್ಯಕಾಂತ ನಿಂಬರ್ಗಾ, ರಾಮಚಂದ್ರ ಶಿವಗೊಂಡ, ರತ್ನಾಬಾಯಿ ಸೋನಾರ, ಅಂಗನವಾಡಿ ಮೇಲ್ವಿಚಾರಕಿಯರಾದ ಸುರೇಖಾ ಪೂಜಾರಿ, ಮಹಾದೇವಿ, ಸುನೀತಾ  ಭಾಗವಹಿಸಿದರು. ಸುನೀಲ ದೊಡ್ಡಮನಿ ನಿರೂಪಿಸಿ, ವಂದಿಸಿದರು.   

ಟಾಪ್ ನ್ಯೂಸ್

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

6

Ajekar: ಎಷ್ಟು ದಿನ ಟವರ್‌ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್‌ ಕೊಡಿ ಸ್ವಾಮಿ!

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

5

Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.