ಒಬಿಸಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಪರದಾಟ
Team Udayavani, Jan 21, 2017, 12:37 PM IST
ಕಲಬುರಗಿ: ಗುಲಬರ್ಗಾ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಒಬಿಸಿ) ಅಡಿ ನಡೆಯುತ್ತಿರುವ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಅಗತ್ಯ ಸೌಕರ್ಯ ಹಾಗೂ ಸಮರ್ಪಕ ಊಟದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಈ ವಸತಿ ನಿಲಯಗಳು ಸಂಶೋಧಕ ಹಾಗೂ ಪದವಿ ವಿದ್ಯಾರ್ಥಿಗಳ ವಾಸಸ್ಥಾನಗಳಾಗಿವೆ. ಇಲ್ಲಿ ಕುಡಿಯುವ ನೀರು, ವಿದ್ಯುತ್ ಸರಬರಾಜು ಮತ್ತು ಉತ್ತಮ ನಿರ್ವಹಣೆ ಕೊರತೆಯಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸೌಕರ್ಯಗಳ ಕೊರತೆಯಿಂದ ಪರೀಕ್ಷೆ ತಯಾರಿ ಹಾಗೂ ಓದಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಊಟ ಸರಿ ಇಲ್ಲ: ಕಳೆದ ಒಂದು ತಿಂಗಳಿಂದ ಗುಣಮಟ್ಟದ ಊಟ ಸಿಗುತ್ತಿಲ್ಲ. ಸರಕಾರ ನಿಗದಿ ಮಾಡಿರುವ ಊಟದ ಪಟ್ಟಿಯಂತೆ ಯಾವತ್ತೂ ಈ ನಿಲಯಗಳಲ್ಲಿ ಊಟವೇ ಸಿಕ್ಕಿಲ್ಲ. ಹಳೆಯ ಒಬಿಸಿ, ಕಾವೇರಿ ವಿದ್ಯಾರ್ಥಿ ನಿಲಯಗಳಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬೆಳಗಿನ ಉಪಹಾರವಂತೂ ಸಿಗುವುದೇ ಇಲ್ಲ. ಬೆಳಗ್ಗೆ 10:00 ಅಥವಾ 11:00 ಗಂಟೆಗೆ ರೊಟ್ಟಿ ಊಟ ಕೊಡುತ್ತಾರೆ. ಅನ್ನ ಮತ್ತು ಸಾರು ದೇವರಿಗೆ ಪ್ರೀತಿ.
ಸಾಂಬಾರಿಗಾಗಿ ಕಾಯಿಪಲ್ಲೆ ಖರೀದಿಸಿದ್ದಾಗಿ ಮತ್ತುಊಟಕ್ಕಾಗಿ ಆಹಾರ ಧಾನ್ಯ ಖರೀದಿಸಿದ್ದಾಗಿ ತಿಳಿಸುತ್ತಾರಾದರೂ ಅವುಗಳ ಬಳಕೆಯಲ್ಲಿ ಅನುಮಾನವಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಚಪಾತಿ ಕೊಡ್ರಿ ಎಂದರೆ ಗೋದಿ ಹಿಟ್ಟಿಲ್ಲ ಎನ್ನುತ್ತಾರೆ. ಸಿಹಿ ಮತ್ತು ಪ್ರತಿ ನಿತ್ಯ ಸಂಜೆ ಚಹಾ ಕೊಡ್ರಿ ಎಂದರೆ ಸಕ್ಕರೆ ಇಲ್ಲ ಎನ್ನುತ್ತಾರೆ. ಆದರೆ, ಗುತ್ತಿಗೆದಾರರು ಮಾತ್ರ ಎಲ್ಲಆಹಾರ ಧಾನ್ಯವನ್ನು ಪೂರೈಕೆ ಮಾಡುತ್ತಿರುವುದಾಗಿ ಹೇಳುತ್ತಾರೆ. ಹೀಗಾದರೆ ಬರುವ ಆಹಾರ ಧಾನ್ಯ ಎಲ್ಲಿ ಹೋಗುತ್ತದೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಪರ್ಸೆಂಟೇಜ್ ವ್ಯವಹಾರ
ಓಬಿಸಿ ಹಾಸ್ಟೆಲ್‌ಗಳ ಪರಿಸ್ಥಿತಿ ಸರಿಯಾಗಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಗುತ್ತಿಗೆದಾರರು ಶೇ. 30 ರಷ್ಟು ಅಧಿಕಾರಿಗಳಿಗೆ ನೀಡುತ್ತಾರಂತೆ. ಹಾಗಂತ ಖುದ್ದು ಗುತ್ತಿಗೆದಾರನೇ ಗುರುವಾರ ಗುವಿವಿ ಹಾಸ್ಟೆಲ್ ಭೇಟಿಯ ವೇಳೆ ಪ್ರಭಾರಿ ಅಧಿಕಾರಿ ಪಾಶಾ, ಜಿಲ್ಲಾಧಿಕಾರಿಗಳ ಮತ್ತು ವಿದ್ಯಾರ್ಥಿಗಳ ಮುಂದೆಯೇ ಹೇಳಿದ್ದಾನೆ. ನೋಡಿ ನಮ್ಮ ಆಡಳಿತ ವ್ಯವಸ್ಥೆ ಹೇಗಿದೆ. ಕೂಡಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ವ್ಯವಹಾರ ನಿಲ್ಲಬೇಕು. ಬಯೋಮೆಟ್ರಿಕ್ ಹಾಜರಾತಿಯಂತೆ ಆಹಾರ ಸರಬರಾಜು ಆಗ್ಲಿ.. ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಊಟ ಸಿಗಲಿ.
-ಅರವಿಂದ ಚವ್ಹಾಣ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ
ಸಮಸ್ಯೆ ಬಗೆಹರಿದಿದೆ
ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಆಗಿತ್ತು. ಚಪಾತಿ, ಇತರೆ ಸಿಹಿ ಊಟ ಸಿಗುತ್ತಿರಲಿಲ್ಲ. ಅದಕ್ಕೆ ವಾರ್ಡ್‌ನ್ ಅವರಿಗೆ ಅನುಭವ ಇಲ್ಲದೆ ತೊಂದರೆಯಾಗಿತ್ತು. ಘಟನೆ ಬಳಿಕ ಈಗ ಹೊಸದಾಗಿ ಸಹಾಯಕರನ್ನು ನೀಡಲಾಗಿದ್ದು, ಎಲ್ಲವೂ ಸರಿ ಆಗಲಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಸಿಕ್ಕಿದೆ. ಕುಡಿವ ನೀರು, ಕೊಳಚೆ ಎಲ್ಲವನ್ನು ಸರಿ ಮಾಡಲಾಗುವುದು.
-ಮೊಹಮ್ಮದ್ ಪಾಶಾ, ಪ್ರಭಾರಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.