ಜೇವರ್ಗಿಯಲ್ಲಿ ಪರಿವರ್ತನಾ ಯಾತ್ರೆ
Team Udayavani, Dec 11, 2017, 10:55 AM IST
ಜೇವರ್ಗಿ: ನವಕರ್ನಾಟಕ ನಿರ್ಮಾಣದ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿರುವ ಪರಿವರ್ತನಾ ರ್ಯಾಲಿ ಸೋಮವಾರ
ಜೇವರ್ಗಿ ಪಟ್ಟಣಕ್ಕೆ ಪ್ರವೇಶಿಸಲಿದ್ದು, ಯಾತ್ರೆ ಸ್ವಾಗತಿಸಲು ತಾಲೂಕು ಬಿಜೆಪಿ ಘಟಕ ಸಜ್ಜಾಗಿ ನಿಂತಿದೆ.
ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ತವರೂ ಕ್ಷೇತ್ರಕ್ಕೆ ಆಗಮಿಸುತ್ತಿರುವ ರ್ಯಾಲಿ ಯಶಸ್ವಿಗೆ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಇದುವರೆಗೂ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೇ ಪರಿಣಾಮಕಾರಿ ಯಾತ್ರೆ ನಡೆಸಿದ್ದರೂ ಇಲ್ಲಿ ಮಾತ್ರ ಶೇ.100ರಷುx ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವನ್ನು ಇಲ್ಲಿಯ ಮುಖಂಡರು ವ್ಯಕ್ತಪಡಿಸುತ್ತಾರೆ.
ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್‌ನಿಂದ ದೇವರಮನಿ ಲೇಔಟ್ ವರೆಗೆ ಕಟೌಟ್, ಬಂಟಿಂಗ್ಸ್, ಬ್ಯಾನರ್, ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ.
ಬೆಳಗ್ಗೆ 11:00ಕ್ಕೆ ಜೇವರ್ಗಿ ಪಟ್ಟಣಕ್ಕೆ ಆಗಮಿಸುವ ರ್ಯಾಲಿ ಮುಂದೆ ಯಾದಗಿರಿ ಜಿಲ್ಲೆ ಪ್ರವೇಶಿಸಲಿದೆ. ಪಟ್ಟಣದ
ರಿಲಾಯನ್ಸ್ ಪೆಟ್ರೋಲ್ ಬಂಕ್‌ನಿಂದ ದೇವರಮನಿ ಲೇಔಟ್ ವರೆಗೆ ನಡೆಯುವ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಬೈಕ್‌ಗಳು ಪಕ್ಷದ ಧ್ವಜದೊಂದಿಗೆ ಭಾಗವಹಿಸಲಿವೆ. ಸುಮಾರು 1.5 ಕಿಮೀ ವರೆಗೆ ಯಾತ್ರೆ ನಡೆಯಲಿದ್ದು,
ಮೆರವಣಿಗೆ ಅಖಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಾಂತನಗರ ಕ್ರಾಸ್, ಬಸವೇಶ್ವರ ವೃತ್ತ, ಮಿನಿವಿಧಾನಸೌಧ
ಮೂಲಕ ಕಾರ್ಯಕ್ರಮದ ಸ್ಥಳದವರೆಗೆ ಸಂಚರಿಸಲಿದೆ.
ಪರಿವರ್ತನಾ ರ್ಯಾಲಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದು, ಕಾರ್ಯಕರ್ತರಿಗಾಗಿ 300 ಮೀಟರ್ ಅಗಲ 500 ಮೀಟರ್ ಉದ್ದದ ವೇದಿಕೆ ನಿರ್ಮಾಣ ಮಾಡಲಾಗಿದೆ.
ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಶುದ್ಧ ಕುಡಿಯುವ ನೀರು, ಪರಿವರ್ತನಾ ರ್ಯಾಲಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ, ಪುರಂದೇಶ್ವರಿ, ಸಾದ್ವಿ ನಿರಂಜನ ಜ್ಯೋತಿ, ಶಾಸಕರಾದ ಸಿ.ಟಿ. ರವಿ, ರವಿಕುಮಾರ, ಅರವಿಂದ ಲಿಂಬಾವಳಿ, ರಮೇಶ ಭೂಸನೂರ, ರಘುನಾಥ ಮಲ್ಕಾಪುರೆ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಶಾಸಕರು, ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.