ಕಣ್ಮನ ತಣಿಸುತ್ತಿರುವ ಉದ್ಯಾನವನಗಳು


Team Udayavani, Jan 4, 2019, 5:23 AM IST

gul-1.jpg

ಕಲಬುರಗಿ: ಮಹಾನಗರ ಪಾಲಿಕೆಯ ಎಲ್ಲ 55 ವಾರ್ಡ್‌ಗಳಲ್ಲಿ ಸುತ್ತಾಡಿದರೂ ಸೇಡಂ ರಸ್ತೆಯ ವಾರ್ಡ್‌ ನಂ. 30ರಲ್ಲಿನ ಸಿಂಧೆ-ಸ್ವಸ್ತಿಕ ನಗರ ಹಾಗೂ ಡಾಕ್ಟರ್‌ ಕಾಲೋನಿಯಲ್ಲಿರುವ ಉದ್ಯಾನವನಗಳು ನಮ್ಮ ಕಣ್ಣಿಗೆ ಬೀಳ್ಳೋದಿಲ್ಲ.

ಪಾಲಿಕೆ ನಿರ್ವಹಣೆಯ ಸಾರ್ವಜನಿಕ ಉದ್ಯಾನವನಕ್ಕೆ ಸೆಡ್ಡು ಹೊಡೆಯುವಂತೆ ಈ ಉದ್ಯಾನವನಗಳು ತಲೆ ಎತ್ತಿದ್ದು, ಕೈ ಮಾಡಿ ಕರೆಯುತ್ತಿವೆ. ಉದ್ಯಾನದೊಳಗೆ ಹೋದರೆ ಸುಂದರ ವಾತಾವರಣ ಕಂಡು ಮನಸ್ಸು ಪುಳಕಿತಗೊಳ್ಳದೇ ಇರದು. ಈ ಸುಂದರ ಉದ್ಯಾನಗಳ ಹಿಂದೆ ಅನೇಕ ಪರಿಶ್ರಮದ ಕೈಗಳು ಅಡಗಿವೆ. ಅದರಲ್ಲೂ ಮಹಾನಗರ ಪಾಲಿಕೆ ಹಾಗೂ ವಾರ್ಡ್‌ ನಂ. 30ರ ಸದಸ್ಯ ಆರ್‌.ಎಸ್‌. ಪಾಟೀಲ ಆಸಕ್ತಿ ಮೇರೆಗೆ ಕಲ್ಪನೆಗೆ ಮೀರಿ ಉದ್ಯಾನವನಗಳು ಕೈ ಬೀಸಿ ಕರೆಯುತ್ತಿವೆ. 

ಉದ್ಯಾನವದಲ್ಲಿ ಏನೇನಿದೆ: ವಾರ್ಡ್‌ ನಂ. 30ರ ಸಿಂಧೆ-ಸ್ವಸ್ತಿಕ ನಗರದಲ್ಲಿ 93 ಲಕ್ಷ ರೂ. ವೆಚ್ಚದಲ್ಲಿ ಅಮೃತ ಯೋಜನೆಯಡಿ 93 ಲಕ್ಷ ರೂ. ವೆಚ್ಚದಲ್ಲಿ ಸುಂದರ ಉದ್ಯಾನವನ ನಿರ್ಮಿಸಲಾಗಿದೆ. ಉದ್ಯಾನವನದಲ್ಲಿನ ಹುಲ್ಲಿನ ಹಾಸಿಗೆ ನೋಡಿದರೆ ಶ್ರೀಮಂತರ ಮನೆಯಂಗಳದಲ್ಲಿ ನಿರ್ವಹಿಸುವ ರೀತಿಯಲ್ಲಿ ಕಂಡು ಬರುತ್ತದೆ. ವಿದೇಶಗಳ ಮರಗಳು, ವಿವಿಧ ಬಗೆಯ ಹೂವು ಬಳ್ಳಿಗಳು ಕಣ್ಣಿಗೆ ಮುದ ನೀಡುತ್ತವೆ. ಟ್ರಾಫಿಕ್‌ ಅಂತೂ ಮಾದರಿ ಎನ್ನುವಂತೆ ನಿರ್ಮಿಸಲಾಗಿದೆ.

ಯೋಗ ಮಾಡುವವರಿಗೆ ಅನುಕೂಲವಾಗಲೆಂದು ಯೋಗ ಕಟ್ಟೆ ನಿರ್ಮಿಸಲಾಗಿದೆ. ಮಕ್ಕಳ ಆಟಿಕೆ ಸಾಮಾನುಗಳಿಗೆ ಬರವಿಲ್ಲ. ಹೀಗಾಗಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಮನಸ್ಸಿಗೆ ಹಿಡಿಸುವ ಈ ಉದ್ಯಾನವನ ಮಹಾನಗರಕ್ಕೊಂದು ಮಾದರಿಯಾಗಿದೆ. ಈ ಸುಂದರ ಉದ್ಯಾನವದಲ್ಲಿ ಬೆಳಗ್ಗೆ ಮತ್ತು ಸಂಜೆ ಜನಜಂಗುಳಿ ಎನ್ನುವಂತೆ ಬಡಾವಣೆ ಹಾಗೂ ಸುತ್ತಮುತ್ತಲಿನ ನಾಗರಿಕರು ಆಗಮಿಸಿ ವಿಹರಿಸುತ್ತಿರುತ್ತಾರೆ. ಅಲ್ಲಲ್ಲಿ ಕುಳಿತುಕೊಳ್ಳಲು ಆರಾಮ ಕುರ್ಚಿಗಳನ್ನು ಬಹೋಪಯೋಗಿ ಎನ್ನುವಂತೆ ಅಳವಡಿಸಲಾಗಿದೆ.

ಅದೇ ರೀತಿ ಡಾಕ್ಟರ್‌ ಕಾಲೋನಿಯಲ್ಲಿ ಅನುಭವ ಮಂಟಪ ಹಿಂದುಗಡೆಯಲ್ಲೂ 50 ಲಕ್ಷ ರೂ. ವೆಚ್ಚದಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಇಲ್ಲೂ ಸಿಂಧೆ-ಸ್ವಸ್ತಿಕ ನಗರದಂತೆ ಸುಂದರವಾಗಿ ನಿರ್ಮಾಣಗೊಂಡಿದೆ. ಆದರೆ ಜಾಗ ಸ್ವಲ್ಪ ಕಡಿಮೆ ಇದೆ. ಇಲ್ಲೂ ಸುಂದರ ಪರಿಸರಕ್ಕೆ ಸಾಥ್‌ ನೀಡುವ ಎಲ್ಲ ಅಂಶಗಳಿವೆ. 

ಸಾರ್ವಜನಿಕರ ದೇಣಿಗೆಯಿಂದ ನಿರ್ವಹಣೆ: 2016-17ನೇ ಸಾಲಿನ ಕೇಂದ್ರ ಸರ್ಕಾರದ ಅಮೃತ ಯೋಜನೆ ಅಡಿಯಲ್ಲಿ ಈ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆಗೆಂದು ಪಾಲಿಕೆ ಬಳಿ ಅಗತ್ಯ ಸಂಪನ್ಮೂಲ ಹಾಗೂ ಸಿಬ್ಬಂದಿ ಇರಲಿಲ್ಲ. ಉದ್ಯಾನವನ ನಿರ್ಮಿಸುವುದು ದೊಡ್ಡದಲ್ಲ. ನಿರ್ವಹಣೆ ಮಾಡೋದು ಬಹು ಮುಖ್ಯವಾಗಿದೆ. ಈ ಎರಡೂ ಸಾರ್ವಜನಿಕ ಉದ್ಯಾನವನ ನಿರ್ವಹಣೆಗೆಂದು ಬಡಾವಣೆಯ ಎಲ್ಲ ನಾಗರಿಕರು ವರ್ಷಕ್ಕೆ ಸಾವಿರ ರೂ ನೀಡುತ್ತಾರೆ. ಇದೇ ಹಣದಿಂದ ಪಾಲಿಕೆ ಇಬ್ಬರನ್ನು ನಿರ್ವಹಣೆ ಕೆಲಸದ ಜವಾಬ್ದಾರಿಗೆಂದು ನೇಮಿಸಿದೆ.

ಹೀಗಾಗಿ ಉದ್ಯಾನವನ ಸೊಬಗು ದಿನೇ-ದಿನೇ ಹೆಚ್ಚಳವಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಹುಪಯೋಗಿಯನ್ನಾಗಿಸಲು ಪಾಲಿಕೆ ಸದಸ್ಯ ಆರ್‌.ಎಸ್‌. ಪಾಟೀಲ ಜತೆಗೆ ಬಡಾವಣೆ ನಾಗರಿಕರು ಮುಂದಾಗಿದ್ದಾರೆ. 

ತ್ರಿವೇಣಿ ಸಂಗಮ
ವಾರ್ಡ್‌ ನಂ. 30 ವಿಶಿಷ್ಟ್ಯತೆಯಿಂದ ಕೂಡಿದೆ. ಕಲಬುರಗಿ ಉತ್ತರ-ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಗ್ರಾಮೀಣ ಈ ಮೂರು ವಿಧಾನಸಭಾ ಕ್ಷೇತ್ರಗಳ ಭಾಗಗಳನ್ನು ಒಳಗೊಂಡಿರುವ ಈ ವಾರ್ಡ್‌ ಮಹಾನಗರದಲ್ಲಿಯೇ ದೊಡ್ಡದಾದ ವಾರ್ಡ್‌ ಆಗಿದೆ. 26 ಬಡಾವಣೆ ಹೊಂದಿರುವ ಈ ವಾರ್ಡ್‌ನಲ್ಲೀಗ 15 ಕೋ.ರೂ ವೆಚ್ಚದ ಒಳಚರಂಡಿ ನಿರ್ಮಾಣ ನಡೆದಿದೆ. ರಸ್ತೆಯೇ ಕಾಣದ ಅನೇಕ ಬಡಾವಣೆಗಳಲ್ಲಿಂದು ಉತ್ತಮ ರಸ್ತೆಗಳಾಗಿವೆ. ವಾರ್ಡನಲ್ಲಿರುವ ಇತರ 16 ಉದ್ಯಾನವನಗಳು ಅಭಿವೃದ್ಧಿಯಾಗಿವೆ. ಒಟ್ಟಾರೆ ಅತಿ ಹೆಚ್ಚಿನ ಕೆಲಸ ವಾರ್ಡ್‌ ನ.30ರಲ್ಲಿ ಆಗಿವೆ ಎನ್ನಬಹುದಾಗಿದೆ.

ಪಾಲಿಕೆ ಸದಸ್ಯನಾಗಿ ವಾರ್ಡ್‌ ನಂ. 30ರಲ್ಲಿ ಕೈಲಾದ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಗಲಿರಳು ಶ್ರಮಿಸಲಾಗಿದೆ. ಸುಂದರ ಉದ್ಯಾನವನಗಳಿಗೆ ಬರುವ ಜನರು ಮೆಚ್ಚುಗೆ ವ್ಯಕ್ತಪಡಿಸಿದರೆ ಸಾಕು. ಒಳಚರಂಡಿ ನಿರ್ಮಾಣ ಕಾರ್ಯ ವಾರ್ಡ್‌ನಾದ್ಯಂತ ನಡೆದಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಪಾಲಿಕೆ ಸದಸ್ಯನಾಗಿ ಯಾವ ಕೆಲಸ ಮಾಡಬೇಕೆಂಬುದರ ಬಗ್ಗೆ ತೃಪ್ತಿ ಹೊಂದಲಾಗಿದೆ. ಸುಂದರವಾಗಿ ನಿರ್ಮಾಣಗೊಂಡಿರುವ ಉದ್ಯಾನವನಗಳಿಗೆ ಪಾಲಿಕೆ ಆಯುಕ್ತರನ್ನು ಕರೆದುಕೊಂಡು ಬಂದು ತೋರಿಸಲಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ವಿನಂತಿಸಲಾಗಿದೆ. 
 ಆರ್‌.ಎಸ್‌. ಪಾಟೀಲ, ವಾರ್ಡ್‌ ನಂ. 30ರ ಸದಸ್ಯ 

„ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.